ಟೊಯೊಟಾ ಟೈಸರ್ VS ಫ್ರಾಂಕ್ಸ್, ಮಾರುತಿ ಬ್ರೆಝಾ, ಸಾನೆಟ್: ಬೈಕ್‌ನಂತೆ ಮೈಲೇಜ್ ಯಾವುದರಲ್ಲಿ ಗೊತ್ತಾ?
ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಟೊಯೋಟಾ ಕಂಪನಿಯು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಎಂಬ ಕಾರನ್ನು ಲಾಂಚ್ ಮಾಡಿತ್ತು. ಎಲ್ಲರಿಗೂ ತಿಳಿದಿರುವಂತೆ ಮಾರುತಿ ಸುಜುಕಿ ಫ್ರಾಂಕ್ಸ್‌ನ ರೀಬ್ಯಾಡ್ಜಿಂಗ್ ಆಗಿರುವ ಈ ಟೈಸರ್, ಭಾರತೀಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಫ್ರಾಂಕ್ಸ್, ಸೊನೆಟ್ ಮತ್ತು ಬ್ರೇಝಾ ಕಾರುಗಳ ಪ್ರತಿಸ್ಫರ್ಧಿಯಾಗಿದೆ.
ಈ ಮೇಲೆ ತಿಳಿಸಿದ ಎಸ್‌ಯುವಿಗಳು ಒಂದೇ ಸೆಗ್ಮೆಂಟ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇಂದಿನ ಲೇಖನದಲ್ಲಿ ನಾವು ಟೈಸರ್ ( Toyota Taisor), ಫ್ರಾಂಕ್ಸ್, ಸೊನೆಟ್ ಮತ್ತು ಬ್ರೇಝಾ ಕಾರುಗಳ ಇಂಧನ ಕ್ಷಮತೆಯ ಬಗ್ಗೆ ಮತ್ತು ಇತರ ವಿಷಯಗಳ ಕುರಿತಾಗಿ ನೊಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಮೊದಲಿಗೆ ಟೊಯೊಟಾ ಟೈಸರ್ ಮತ್ತು ಫ್ರಾಂಕ್ಸ್‌ನ ಎಂಜಿನ್ ಮತ್ತು ಇತರ ವಿಷಯಗಳ ಕುರಿತಾಗಿ ನೊಡಿದರೆ, ಈ ಎರಡೂ ಕಾರಿನಲ್ಲಿ 1.2-ಲೀಟರ್ ನ್ಯಾಚುರಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಸ್‍ಯುವಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ 89 bhp ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ.
ಈ ಎರಡೂ ಕಾರುಗಳು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 bhp ಮತ್ತು 148 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿವೆ. ಇದರ ಮೈಲೇಜ್ ಅನ್ನು ನೊಡುವುದಾದರೆ, ಫ್ರಾಂಕ್ಸ್ ಪ್ರತೀ ಲೀಟರ್‌ಗೆ ಪೆಟ್ರೋಲ್ ರೂಪಾಂತರಗಳು 20.1 ಹಾಗೂ 21.79 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 28.51 ಕೆಎಂ/ಕೆಜಿ ವರೆಗೆ ಮೈಲೇಜ್ ಕೊಡುತ್ತವೆ.

ಅದೇ ರೀತಿಯ ಕಿಯಾ ಸಾನೆಟ್ ಬಗ್ಗೆ ನೊಡುವುದಾದರೆ, 1.2L ಎಂಜಿನ್ ಡೈನಾಮಿಕ್ ಸಿಟಿ ಡ್ರೈವಿಂಗ್ (82 bhp) ಮತ್ತು ಇಂಧನ ಬಳಕೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ. ಅದರ BS6 ಹಂತ 2 ಅನುಸರಣೆಯಿಂದಾಗಿ ಎಂಜಿನ್ ಹೆಚ್ಚು ಸುಧಾರಣೆಗೊಂಡಿದೆ. ನಯವಾದ-ಶಿಫ್ಟಿಂಗ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಜೆಟ್ ಸ್ನೇಹಿ ಮೈಲೇಜ್ ಅನ್ನು ನೀಡುತ್ತದೆ.
ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet Facelift) ಎಸ್‌ಯುವಿಯ ಪೆಟ್ರೋಲ್ ರೂಪಾಂತರಗಳು ಎಂಜಿನ್‌ಗೆ ಅನುಗುಣವಾಗಿ 18.70 kmpl - 19.20 kmpl, ಡೀಸೆಲ್ ರೂಪಾಂತರಗಳು 18.60 kmpl - 22.30 kmpl ಮೈಲೇಜ್ ನೀಡುತ್ತವೆ ಎಂಬ ವಿವರಗಳು ಸಿಕ್ಕಿದೆ.
ಇನ್ನು ಮಾರುತಿ ಸುಜುಕಿಯ ಮತ್ತೊಂದು ಪ್ರಮುಖ ಕಾರು ಮಾದರಿಯಾದ ಬ್ರೇಝಾ ಕುರಿತಾಗಿ ನೊಡುವುದಾದರೆ, ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ 6 ಮೊನೊಟೋನ್, 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.
ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಯಲ್ಲಿ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17.38 kmpl - 19.8 kmpl, ಸಿಎನ್‌ಜಿ ರೂಪಾಂತರಗಳು 25.51 km/kg ಮೈಲೇಜ್ ನೀಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








