ADAS ವೈಶಿಷ್ಟ್ಯದೊಂದಿಗೆ ಬಿಡುಗಡೆಯಾಗಿರುವ ದೇಶದ ಮೊದಲ ವಾಣಿಜ್ಯ ವಾಹನದ ವಿಶೇಷತೆಗಳು!

ಸ್ಟಾರ್ಮ್ ಇವಿ ಲಾಂಗ್‌ರೇಂಜ್ 200 (ಇಂಟರ್ ಸಿಟಿ) ಮತ್ತು ಸ್ಟಾರ್ಮ್ ಇವಿ ಟಿ1250 (ಇಂಟ್ರಾಸಿಟಿ) ಎಂಬ ಅತ್ಯಾಧುನಿಕ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಯೂಲರ್ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇವುಗಳ ಪ್ರಮುಖ ವಿಶೇಷತೆ ಏನೆಂದರೆ, ಕಂಪನಿಯು ಮೊದಲ ಬಾರಿಗೆ LCV (ಲೈಟ್ ಕಮರ್ಷಿಯಲ್ ವೆಹಿಕಲ್) ವಿಭಾಗದಲ್ಲಿ ADAS ಅನ್ನು ಪರಿಚಯಿಸಿದೆ. ಇದರಲ್ಲಿ NVA (ನೈಟ್ ವಿಷನ್ ಅಸಿಸ್ಟ್) ಮತ್ತು ಮುಂಭಾಗ ಮತ್ತು ಹಿಮ್ಮುಖ ಕ್ಯಾಮರಾ ಘರ್ಷಣೆ ಎಚ್ಚರಿಕೆಯ ಸಾಮರ್ಥ್ಯಗಳನ್ನು ಹೊಂದಿದೆ. NVA ಕತ್ತಲೆಯಲ್ಲಿಯೂ ಸಹ ರಸ್ತೆಯಲ್ಲಿನ ಅಡೆತಡೆಗಳ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಮೂಲಕ ಕಂಪನಿಯು 4W ಲೈಟ್ ಕಮರ್ಷಿಯಲ್ ವೆಹಿಕಲ್ (LCV) ವಿಭಾಗದಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಪರಿಚಯಿದ ಮೊದಲ ಕಂಪನಿಯಾಗಿ ಗುರ್ತಿಸಿಕೊಂಡಿದೆ. ಬೆಲೆಯ ವಿಷಯಕ್ಕೆ ಬಂದರೆ ಸ್ಟಾರ್ಮ್ ಇವಿ ಲಾಂಗ್‌ರೇಂಜ್ 200 ದರವು ರೂ.12.99 ಲಕ್ಷ (ಎಕ್ಸ್ ಶೋ ರೂಂ) ಹಾಗೂ ಸ್ಟಾರ್ಮ್ ಇವಿ ಟಿ1250 ಸ್ಪರ್ಧಾತ್ಮಕವಾಗಿ ರೂ.8.99 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಬೆಲೆಯನ್ನು ಹೊಂದಿವೆ.

euler-4w-lcv-storm-ev-price-feauters-battery-details

ಯೂಲರ್ ಮೋಟಾರ್ಸ್, ಎರಡೂ ವಾಹನಗಳ ಮೇಲೆ ವಿಸ್ತೃತ 7-ವರ್ಷ ಅಥವಾ 2 ಲಕ್ಷ ಕಿ.ಮೀ ವಾರಂಟಿಯನ್ನು ಸಹ ನೀಡುತ್ತಿದೆ. ಇಂಟರ್‌ಸಿಟಿ ಮತ್ತು ಇಂಟ್ರಾಸಿಟಿ ಬಳಕೆಗಾಗಿ ಎರಡು ಸ್ಟಾರ್ಮ್ ಇವಿ ಎಲೆಕ್ಟ್ರಿಕ್ ಕಾರ್ಗೋ ವಾಹನಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಎರಡೂ ಕೂಡ 1250 ಕೆ.ಜಿ ಪೇಲೋಡ್ ಸಾಮರ್ಥ್ಯದೊಂದಿಗೆ ಬರುತ್ತವೆ.

ಸ್ಟಾರ್ಮ್ ಇವಿ ಟಿ1250 (Storm EV T1250): ಈ ವಾಹನವನ್ನು ಇಂಟ್ರಾಸಿಟಿ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವಾಹನ ಎರಡು ವೇರಿಯೆಂಟ್‌ಗಳಲ್ಲಿ ಬರಲಿದ್ದು, ಒಂದು ಸಾಮಾನ್ಯ ಲೋಡ್‌ಗಳನ್ನು ಸಾಗಿಸಲು ಹಾಗೂ ಮತ್ತೊಂದು ಗಾರೆ, ಮರ ಮತ್ತು ಭಾರವಾದ ಸಿಲಿಂಡರ್‌ಗಳಂತಹ ಲೋಡ್‌ಗಳಿಗಾಗಿ ಡಿಸೈನ್ ಮಾಡಲಾಗಿದೆ. ದೇಹದ ಉದ್ದ 8.2 ಅಡಿ, 220 ಮತ್ತು 260 Cft ಗಾತ್ರದ ಸಾಮರ್ಥ್ಯವನ್ನು ಹೊಂದಿದೆ.

euler-4w-lcv-storm-ev-price-feauters-battery-details

DC001 ವೇಗದ ಚಾರ್ಜರ್ ಮೂಲಕ ಕೇವಲ 30 ನಿಮಿಷಗಳ ಚಾರ್ಜಿಂಗ್‌ನಲ್ಲಿ 100 ಕಿ.ಮೀ ರೇಂಜ್ ನೀಡುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ 140 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಒಂದು ವಿಭಾಗ-ಮೊದಲ 4 ಎಂಎಂ ಶಸ್ತ್ರಸಜ್ಜಿತ ಸ್ಕೇಟ್‌ಬೋರ್ಡ್ ಚಾಸಿಸ್ ಮತ್ತು 8-ಲೀಫ್ ಹಿಂಭಾಗದ ಸಸ್ಪೆನಷನ್ ಹೊಂದಿದೆ.

ಸ್ಟಾರ್ಮ್ ಇವಿ ಲಾಂಗ್‌ರೇಂಜ್ 200 (Storm EV LongRange 200) ಈ ವಾಹನವನ್ನು ಇಂಟರ್‌ಸಿಟಿ ಬಳಕೆಗಾಗಿ ವಿನ್ಯಾಸಗೊಳಿಸಲಾದ ವಿಭಾಗದ ಮೊದಲ ವಾಹನವಾಗಿದ್ದು, 10 ಅಡಿ ಉದ್ದ ಮತ್ತು 330 Cft ವಾಲ್ಯೂಮೆಟ್ರಿಕ್ ಸಾಮರ್ಥ್ಯದಿಂದ ಇದನ್ನು ಮತ್ತಷ್ಟು ಬಲಪಡಿಸಲಾಗಿದೆ. 8-ಲೀಫ್ ಹಿಂಭಾಗದ ಸಸ್ಪೆನ್ಷನ್ ಎಲ್ಲಾ ಸರಕು ಪ್ರಕಾರಗಳಿಗೆ ಸುಗಮ ಸಾರಿಗೆಯನ್ನು ಶಕ್ತಗೊಳಿಸುತ್ತದೆ.

euler-4w-lcv-storm-ev-price-feauters-battery-details

ಹತ್ತಿರದ ನಗರಗಳ ನಡುವೆ ಸರಕು ಸಾಗಾಣಿಕೆ ಮಾಡಲು 200 ಕಿ.ಮೀ ರೇಂಜ್ ನೀಡುತ್ತದೆ. ಈ ವಾಹನವನ್ನು ಕೇವಲ 15 ನಿಮಿಷ ಚಾರ್ಜ್‌ ಮಾಡಿದ್ರೆ 100 ಕಿ.ಮೀ ಓಡಿಸಬಹುದು. ವಾಣಿಜ್ಯ ಬಳಕೆಗೆ ಈ ವಾಹನ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವುದರಿಂದ ಬಳಕೆದಾರರಿಗೆ ಹೆಚ್ಚಿನ ಹಣ ಉಳಿಸುತ್ತದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 27, 2024, 10:30 [IST]
English summary
Euler 4w lcv storm ev price feauters battery details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+