ಬಿಸಿಲ ಬೇಗೆಯಲ್ಲೂ ಸದಾ ಕೂಲಾಗಿರಬೇಕೆ?: ವೆಂಟಿಲೇಟೆಡ್ ಸೀಟ್‌ಗಳಿರುವ ಕಡಿಮೆ ಬೆಲೆಯ ಕಾರುಗಳು!
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಬಿಸಿಲ ಬೇಗೆಗೆ ತತ್ತರಿಸುತ್ತಿದೆ. ಈ ಸಮಯದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವಾಗ ಕಾರಿನಲ್ಲಿ ಎಷ್ಟೇ ಎಸಿ ಇದ್ದರೂ ನಮ್ಮ ಬೆನ್ನು ಮತ್ತು ಶರ್ಟುಗಳ ಹಿಂಭಾಗದಲ್ಲಿ ಬೆವತು ಹೋಗಿರುತ್ತೇವೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ವೆಂಟಿಲೇಟೆಡ್ ಸೀಟ್‌ಗಳು ತುಂಬಾ ಉತ್ತಮ.
ಇಂದಿನ ಲೇಖನದಲ್ಲಿ ನಾವು ಕಡಿಮೆ ಬೆಲೆಗೆ ಯಾವ ಕಾರುಗಳಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಲಭ್ಯವಿದೆ ಎಂದು ನೋಡೋಣ. ನೀವೇನಾದರು ಹೊಸ ಕಾರನ್ನು ಕೊಳ್ಳುವವರಾಗಿದ್ದರೆ ವೆಂಟಿಲೇಟೆಡ್ ಫೀಚರ್ ಅನ್ನು ಮಾತ್ರ ಮಿಸ್ ಮಾಡಬೇಡಿ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ ಮತ್ತು ಗೆಳೆಯರೊಂದಿಗೆ ಶೇರ್ ಮಾಡಿ.

ಕಿಯಾ ಸೊನೆಟ್: ಕಡಿಮೆ ಬೆಲೆಯಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆಯುವ ಕಾರುಗಳಲ್ಲಿ ಕಿಯಾ ಸೊನೆಟ್ ಸಹ ಒಂದು. ಕಿಯಾ ಸೋನೆಟ್ ಎಸ್‌ಯುವಿ, ರೂ.7.99 ಲಕ್ಷದಿಂದ ರೂ.15.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 172 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
1.2-ಲೀಟರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಪವರ್ ಮತ್ತು 115 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು, 1.5-ಲೀಟರ್ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಅನ್ನು ಪಡೆದಿದೆ.

ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್‌ನ ಯಶಸ್ವೀ ಕಾರಾದ ನೆಕ್ಸಾನ್‌ನಲ್ಲೂ ನೀವು ವೆಂಟಿಲೇಟೆಡ್ ಸೀಟ್‌ಗಳನ್ನಿ ಪಡೆಯಬಹುದಾಗಿದೆ. ಟಾಟಾ ನೆಕ್ಸಾನ್ ಕ್ಯಾಬಿನ್ ಒಳಭಾಗವು ಸಾಕಷ್ಟು ಆಕರ್ಷಕವಾಗಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್, ಎಮರ್ಜೆನ್ಸಿ ಹಾಗೂ ಬ್ರೇಕ್ ಡೌನ್ ಕಾಲ್ ಅಸ್ಸಿಸ್ಟನ್ಸ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.
ಮಾರುತಿ ಸುಜುಕಿ XL6: ಮಾರುತಿ ಸುಜುಕಿಯ ಮತ್ತೊಂದು ಪ್ರಸಿದ್ದ ಕಾರು ಈ ಮಾರುತಿ ಮಾರುತಿ ಸುಜುಕಿ XL6. ಈ ಕಾರಿನ 1.5 ಆಲ್ಫಾ ಪ್ಲಸ್ 5ಎಮ್‌ಟಿ ವೇರಿಯಂಟ್‌ನಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಲಭ್ಯವಿದೆ. ವೆಂಟಿಲೇಟೆಡ್ ಸೀಟ್ (Ventilated Seats) ಲಭ್ಯವಿರುವ ಈ ಆಲ್ಫಾ ಪ್ಲಸ್ 5ಎಮ್‌ಟಿ ವೇರಿಯಂಟ್ ಸುಮಾರು 13.21 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಿಂದ ಆರಂಭವಾಗುತ್ತದೆ.

ಹ್ಯುಂಡೈ ವೆರ್ನಾ: ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿರುವ ಪ್ರಮುಖ ಕಾರುಗಳಲ್ಲಿ ಹ್ಯುಂಡೈ ವೆರ್ನಾ ಸಹ ಒಂದು. ಈ ಕಾರಿನಲ್ಲಿ ನಿಮಗೆ ವೆಂಟಿಲೇಟೆಡ್ ಸೀಟ್‌ಗಳು ಲಭ್ಯವಿದೆ. ವೆರ್ನಾ ಕಾರು ಕಾರಿನ EX ಮತ್ತು S ರೂಪಾಂತರಗಳಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಫೋಕ್ಸ್‌ವಾಗನ್ ವರ್ಟಿಸ್: 2024ರ ಮಾರ್ಚ್ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಈ ಕಾರಿನ 1.0 ಲೀಟರ್ TSI MT ಆವೃತ್ತಿಯಲ್ಲಿ ನಿಮಗೆ ವೆಂಟಿಲೇಟೆಡ್ ಸೀಟ್‌ಗಳು ಲಭ್ಯವಾಗುತ್ತದೆ. ಈ ಆವೃತ್ತಿಯ ಬೆಲೆ 15.27 ಲಕ್ಷ ಎಸ್ ಶೋ ರೂಮ್ ನಿಂದ ಆರಂಭವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








