ಮಹೀಂದ್ರಾ ಥಾರ್‌ಗೆ ನಡುಕ ಹುಟ್ಟಿಸಿದ ಫೋರ್ಸ್ ಗೂರ್ಖಾ: ಕಡಿಮೆ ಬೆಲೆಗೆ ಬರಲಿದೆ ಹೊಸ ರೂಪಾಂತರ

ಫೋರ್ಸ್ ಕಂಪನಿಯ ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಕೊನೆಗೂ ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಬಿಡುಗಡೆಗೊಳಿಸಿತ್ತು. ಫೋರ್ಸ್ ಕಂಪನಿಯು ಈಗ ಸ್ಪರ್ಧಾತ್ಮಕ ಬೆಲೆಯನ್ನು ಗುರಿಯಾಗಿಟ್ಟುಕೊಂಡು ಗೂರ್ಖಾ ಮಾದರಿಯ 4X2 ಮೂಲ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜಿಸಿದೆ. ಇದಲ್ಲದೆ, ಈ ಹೊಸ 4X2 ರೂಪಾಂತರವನ್ನು ಹೋಮೋಲೋಗ್ ಮಾಡಲಾಗಿದೆ, ಇದರ ದಾಖಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ದಾಖಲೆಗಳ ಪ್ರಕಾರ, ಗೂರ್ಖಾ 4X2 BS VI FM 2.6 CR 2400 3+D ಎಂದು ಕರೆಯಲಾಗುತ್ತದೆ.

ಈ ಮಾದರಿಯು ಗೂರ್ಖಾ ಲೈನ್-ಅಪ್‌ನಲ್ಲಿ ಎಂಟ್ರಿ ಎಲೆಲ್ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ರೂಪಾಂತರವು ಅದರ ಜನಪ್ರಿಯತೆಗೆ ಹೆಸರುವಾಸಿಯಾದ ಮಹೀಂದ್ರಾದ ಥಾರ್ ಆರ್‌ಡಬ್ಲ್ಯೂಡಿಗೆ ಪ್ರತಿಸ್ಪರ್ಧಿಯಾಗಲಿದೆ. ಫೋರ್ಸ್ ಗೂರ್ಖಾ (Force Gurkha) 4X2 ಆವೃತ್ತಿಯು 3-ಡೋರಿನ ಗೂರ್ಖಾದಲ್ಲಿ ಮಾತ್ರ ಲಭ್ಯವಿದೆ, ಆದರೆ 5-ಡೋರಿನ ಆವೃತ್ತಿಯು ಅದರ 4X4 ಸಾಮರ್ಥ್ಯಗಳನ್ನು ಪ್ರಮಾಣಿತವಾಗಿ ಉಳಿಸಿಕೊಂಡಿದೆ.

Force Gurkha 4X2

ಇತರ ರೂಪಾಂತರಗಳಲ್ಲಿ ಗೂರ್ಖಾ 4X4 BS VI FM 2.6 CR 2400 (3+D) ಮತ್ತು ಗೂರ್ಖಾ 4X4 BS VI FM 2.6 CR 2825 96+D ಸೇರಿವೆ. ಹೊಸ ಮೂಲ ರೂಪಾಂತರವು ಹೆಚ್ಚಿನ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಆದರೆ ಆಫ್-ರೋಡ್ ಕಾರ್ಯಚಟುವಟಿಕೆಗಳನ್ನು ಹೊಂದಿಲ್ಲ. ಮಹೀಂದ್ರಾ ಥಾರ್ AX (O) ಬೆಲೆಯ 9.99 ಲಕ್ಷ ಆಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಅದು ಚಿಕ್ಕದಾದ 1.5 ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮಹೀಂದ್ರಾ ಥಾರ್ ಮೂಲ ಬೆಲೆಯು ಎಕ್ಸ್-ಶೋರೂಂ ಪ್ರಕಾರ ರೂ.11.35 ಲಕ್ಷವಾಗಿದೆ. ಲೋಡ್ ಮಾಡಲಾದ ಥಾರ್ LX 1.5 ಡೀಸೆಲ್ RWD ರೂಪಾಂತರದ ಬೆಲೆಯು ರೂ. 12.85 ಲಕ್ಷವಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ.

Force Gurkha 4X2

ಸ್ಪರ್ಧಾತ್ಮಕವಾಗಿ ಉಳಿಯಲು, 3-ಡೋರಿನ ಫೋರ್ಸ್ ಗೂರ್ಖಾ 4X2 ಬೆಲೆ ಸುಮಾರು 12 ಲಕ್ಷ ರೂ. ಆಗಿರಬಹುದು. ಅಂತಹ ಬೆಲೆಗಳು ಫೋರ್ಸ್ ಮೋಟಾರ್ಸ್ ಭಾರತದಲ್ಲಿ ಸಂಭಾವ್ಯ ಮಹೀಂದ್ರಾ ಥಾರ್ 4X2 ಖರೀದಿದಾರರ ಗಮನವನ್ನು ಸೆಳೆಯಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಮಾರಾಟದ ಸಾಧ್ಯತೆಗಳನ್ನು ಸುಧಾರಿಸುತ್ತದೆ.

ಫೋರ್ಸ್ ಗೂರ್ಖಾ ಎಸ್‍ಯುವಿಯನ್ನು ಮೊದಲ ಬಾರಿಗೆ ಮೂರು ಮತ್ತು ಐದು-ಡೋರಿನ ರೂಪಗಳಲ್ಲಿ ನೀಡುತ್ತಿದೆ. ಈ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿಯು ಹೊಸ ಆಯ್ಕೆಯು ಗೂರ್ಖಾದ ಐದು-ಡೋರಿನ ರೂಪಾಂತರವಾಗಿದೆ ಮತ್ತು 7-ಸೀಟುಗಳ ಸಂರಚನೆಯನ್ನು ಹೊಂದಿದೆ. ಇನ್ನು ಈ ಹೊಸ 5-ಡೊರಿನ ಮಾದರಿಯು 4,390mm ಉದ್ದ, 1,865mm ಅಗಲ ಮತ್ತು 2,095mm ಎತ್ತರವನ್ನು ಹೊಂದಿದೆ. ಇದರೊಂದಿಗೆ 2,825mm ಉದ್ದದ ವೀಲ್‌ಬೇಸ್‌ ಅನ್ನು ಒಳಗೊಂಡಿದೆ.

Force Gurkha 4X2

ಇನ್ನು 3-ಡೋರಿನ ಗೂರ್ಖಾ 3,965mm ಉದ್ದ, 1,865mm ಅಗಲ, 2,080mm ಎತ್ತರ ಮತ್ತು 2,400mm ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ. 3-ಡೊರಿನ ಗೂರ್ಖಾ ಎಸ್‍ಯುವಿಗೆ ಹೋಲಿಸಿದರೆ 15mm ಚಿಕ್ಕದಾಗಿದೆ ಮತ್ತು 425mm ಉದ್ದ ಕಡಿಮೆಯಾಗಿದೆ. ಈ ಗೂರ್ಖಾ ಎಸ್‍ಯುವಿಯ ಬದಿಯಲ್ಲಿ (255/65 R18) ಟೈರ್‌ಗಳಲ್ಲಿ ಹೊಸ ಸ್ನ್ಯಾಜಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಿವೆ.

ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳು ಹೆಚ್ಚು ಪ್ರಬಲವಾದ ಮರ್ಸಿಡಿಸ್ ಮೂಲದ 2.6-ಲೀಟರ್ OM616 ಟರ್ಬೋಡೀಸೆಲ್ ಎಂಜಿನ್‌ ಅನ್ನು ಪಡೆಯುತ್ತವೆ. ಈ ಎಂಜಿನ್ 3,200rpm ನಲ್ಲಿ 138bhp ಮತ್ತು 1,400 ಮತ್ತು 2,600rpm ನಡುವೆ 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಇನ್ನೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಫೋರ್ ವ್ಹೀಲ್ ಡ್ರೈವ್ ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Friday, June 7, 2024, 19:29 [IST]
English summary
Force gurkha 4x2 homologated new base variant details
Read more on force motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+