Ford: ಫೋರ್ಡ್ ಅಭಿಮಾನಿಗಳಿಗೆ ಸಿಹಿ ಸುದ್ದಿ.. ಹೊಸ ಮಾಡಲ್‌ನೊಂದಿಗೆ ರೀ-ಎಂಟ್ರಿಗೆ ಸಜ್ಜು!
ಫೋರ್ಡ್ ಈ ಹಿಂದೆ ಭಾರತದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಇತ್ತೀಚಿನ ಎಂಡೀವರ್ ವಿನ್ಯಾಸ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದೆ. ಜೊತೆಗೆ ಜೆಎಸ್‌ಡಬ್ಲ್ಯು ಗ್ರೂಪ್‌ಗೆ ತನ್ನ ಚೆನ್ನೈ ಸ್ಥಾವರವನ್ನು ಮಾರಾಟ ಮಾಡುವ ಒಪ್ಪಂದವನ್ನು ಈ ಹಿಂದೆ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದು, ಭಾರತಕ್ಕೆ ಮರು-ಪ್ರವೇಶಿಸುವುದರ ಕುರಿತ ನಿರೀಕ್ಷೆಗಳು ಹೆಚ್ಚಾಗಿವೆ.
ಫೋರ್ಡ್ ತನ್ನ ಚೆನ್ನೈ ಸ್ಥಾವರವನ್ನು ಮಾರಾಟ ಮಾಡುವ ಒಪ್ಪಂದವನ್ನು ರದ್ದುಗೊಳಿಸಿದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ, ಭಾರತದಲ್ಲಿ ಕಂಪನಿಯ ಮರು - ಪ್ರವೇಶದ ಸುತ್ತಲಿನ ಊಹಾಪೋಹಗಳು ಕಾಡುತ್ತಿವೆ. ಇದು ಸಾಲದೆಂಬಂತೆ ಫೋರ್ಡ್ ಕಂಪನಿಯು ಭಾರತದಲ್ಲಿ ವಿವಿಧ ಉದ್ಯೋಗಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮರೈಮಲೈ ನಗರದಲ್ಲಿನ ತನ್ನ ಬೃಹತ್ ಉತ್ಪಾದನಾ ಘಟಕವನ್ನು ಬಳಸಿಕೊಳ್ಳುವ ಮೂಲಕ ದೇಶೀಯ ಮಾರಾಟ ಮತ್ತು ಭಾರತದಿಂದ ರಫ್ತುಗಳನ್ನು ಅವಲಂಬಿಸಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದ ಅಂಕಿಅಂಶಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ 2021ರ ಕೊನೆಯಲ್ಲಿ ಫೋರ್ಡ್ ಸ್ಥಳೀಯ ಮಾರಾಟದಿಂದ ನಿರ್ಗಮಿಸಿತು. ಟಾಟಾ ಮೋಟಾರ್ಸ್ 2023ರ ಆರಂಭದಲ್ಲಿ ಒಂದು ಅಂಗಸಂಸ್ಥೆಯ ಮೂಲಕ ಸಾನಂದ್‌ನಲ್ಲಿರುವ ಫೋರ್ಡ್‌ನ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡಿತು.
ಇದೀಗ ಮೂಲಗಳ ಪ್ರಕಾರ, 2025 ರಲ್ಲಿ ಮುಂದಿನ ಜನ್ ಎಂಡೀವರ್‌ನ CBU ಘಟಕಗಳನ್ನು ಮಾರಾಟ ಮಾಡುವ ಮೂಲಕ ಫೋರ್ಡ್ ಪುನರಾಗಮನವನ್ನು ಮಾಡಲಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಸ್ಥಳೀಯ ಉತ್ಪಾದನೆಯನ್ನು ಕೂಡ ಪ್ರಾರಂಭಿಸಬಹುದು. ಭಾರತದಲ್ಲಿ ಹೊಸ ಹೆಸರು ಕೂಡ ಟ್ರೇಡ್‌ಮಾರ್ಕ್ ಆಗಿರುವುದರಿಂದ ಇದು ಮುಸ್ತಾಂಗ್ ಮ್ಯಾಕ್-ಇ ಜೊತೆಗೆ ಬರಬಹುದು ಎನ್ನಲಾಗುತ್ತಿದೆ.

ಫೋರ್ಡ್ ಮುಸ್ತಾಂಗ್ ಮ್ಯಾಕ್-ಇ ಯಂತಹ ಸಂಪೂರ್ಣ ಆಮದುಗಳು ಭಾರತೀಯ ಮಾರುಕಟ್ಟೆಗೆ ದಾರಿ ಮಾಡಿಕೊಡಲಿವೆ. ಇದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲವಾದರೂ ಟ್ರೇಡ್‌ಮಾರ್ಕ್ ಅಪ್ಲಿಕೇಶನ್ ಭಾರತಕ್ಕೆ ಮರು-ಪ್ರವೇಶಿಸುವ ಉದ್ದೇಶಗಳ ಸ್ಪಷ್ಟ ಸೂಚನೆಯಾಗಿದೆ. ಫೋರ್ಡ್ ಹೋಮೋಲೋಗೇಶನ್ ರಿಲಾಕ್ಷೇಷನ್ ಬಳಸಿಕೊಂಡು CBU ಚಾನಲ್ ಮೂಲಕ ಮುಸ್ತಾಂಗ್ ಮ್ಯಾಕ್-ಇ ಅನ್ನು ತರಬಹುದು.
ಈ ಕಾರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 72 kWh ಮತ್ತು 91 kWh ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ರಿಯರ್-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ಗಳೊಂದಿಗೆ ಮಾರಾಟವಾಗುತ್ತಿದೆ. ಇದರ ಬೇಸ್ ವೇರಿಯೆಂಟ್ Mach-E 269 hp ಪವರ್ ಮತ್ತು 430 Nm ಟಾರ್ಕ್ ಉತ್ಪಾದನೆಯೊಂದಿಗೆ ಬಂದರೆ, ದೊಡ್ಡ ಬ್ಯಾಟರಿ ಪ್ಯಾಕ್ ವೇರಿಯೆಂಟ್ 294 hp ಪವರ್ ಮತ್ತು 530 Nm ಟಾರ್ಕ್ ಸಾಮರ್ಥ್ಯವನ್ನು ಹೊಂದಿದೆ.
ಇದು ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ವರೆಗಿನ ರೇಂಜ್ ನೀಡಲಿದೆ. ಆದರೆ ಈಗ ಭಾರತಕ್ಕೆ ಯಾವ ರೂಪಾಂತರಗಳನ್ನು ನೀಡಲಾಗುವುದು ಎಂಬುದು ಇನ್ನೂ ತಿಳಿದಿಲ್ಲ. ಮೂಲಗಳ ಪ್ರಕಾರ ಭಾರತದಲ್ಲಿ ಟಾಪ್-ಸ್ಪೆಕ್ GT AWD 487 hp ಪವರ್ ಮತ್ತು 850 Nm ಟಾರ್ಕ್ ಹೊರಹಾಕುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು 489 ಕಿ.ಮೀ ರೇಂಜ್ ಹೊಂದಿರಬಹುದು.
ಈ ಫೋರ್ಡ್ ಮುಸ್ತಾಂಗ್ ಮ್ಯಾಕ್ - ಇ ಕಾರಿಗೆ ಭಾರತದಲ್ಲಿ ಆಡಿ ಕ್ಯೂ8 ಇ - ಟ್ರಾನ್, ಮರ್ಸಿಡಿಸ್ ಇಕ್ಯೂಇ ಮತ್ತು ಇತರ ಐಷಾರಾಮಿ ಇವಿಗಳೊಂದಿಗೆ ಪೈಪೋಟಿ ಇರಲಿದ್ದು, ಬೆಲೆಯು ರೂ. 1 ಕೋಟಿ ಇರಬಹುದು. ಒಟ್ಟಾರೆ ಫೋರ್ಡ್ ರೀ ಎಂಟ್ರಿ ಕೊಡುವುದರ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








