FlixBus: ವಿಶ್ವದ ಅತಿದೊಡ್ಡ ಬಸ್ ನೆಟ್‌ವರ್ಕ್ ಹೊಂದಿರುವ ಫ್ಲಿಕ್ಸ್‌ಬಸ್‌ಗೆ ಭಾರತದಲ್ಲಿ ಚಾಲನೆ
42 ದೇಶಗಳಲ್ಲಿ ವಿಶ್ವದ ಅತಿದೊಡ್ಡ ಬಸ್ ನೆಟ್‌ವರ್ಕ್ ಹೊಂದಿರುವ ಫ್ಲಿಕ್ಸ್‌ಬಸ್ (FlixBus) ಭಾರತಕ್ಕೆ ತನ್ನ ಆಗಮನವನ್ನು ಪ್ರಕಟಿಸಿದೆ. ಬಸ್ ಮಾರುಕಟ್ಟೆಯಲ್ಲಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಅನುಕೂಲಕರ ಪ್ರಯಾಣ ಮತ್ತು ಅತ್ಯುತ್ತಮ ದರ್ಜೆಯ ಸುರಕ್ಷತೆಯೊಂದಿಗೆ ಇಂಟರ್‌ಸಿಟಿ ಪ್ರಯಾಣಿಕರ ಸಾರಿಗೆಯನ್ನು ಪರಿಚಯಿಸುತ್ತಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
FlixBus ದೇಶದಲ್ಲಿ ತನ್ನ ಚೊಚ್ಚಲ ಪ್ರವೇಶದೊಂದಿಗೆ ದೆಹಲಿ, ಹಿಮಾಚಲ, ಜಮ್ಮ ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಉತ್ತರಪ್ರದೇಶದ ಪ್ರಮುಖ ನಗರಗಳಿಗೆ ತೆರಳುವ ಪ್ರಯಾಣಿಕರು ಆರಾಮದಾಯಕ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು ಮಾಡಬಹುದು. ಫ್ಲಿಕ್ಸ್‌ಬಸ್ ಇಂಡಿಯಾದ ಟಿಕೆಟ್‌ಗಳು ಫೆಬ್ರವರಿ 1 ರಿಂದ ಲಭ್ಯವಿರುತ್ತವೆ ಎಂದು ಕಂಪನಿ ಹೇಳಿದೆ.

ಫೆಬ್ರವರಿ 6 ರಿಂದ ದೆಹಲಿ, ಅಯೋಧ್ಯೆ, ಚಂಡೀಗಢ, ಜೈಪುರ, ಮನಾಲಿ, ಹರಿದ್ವಾರ, ಋಷಿಕೇಶ್, ಅಜ್ಮೀರ್, ಕತ್ರಾ, ಡೆಹ್ರಾಡೂನ್‌ಗೆ ಸಂಪರ್ಕಿಸುವ ಮೊದಲ ಮಾರ್ಗಗಳಾಗಿವೆ. ಕನಿಷ್ಟ ಬೆಲೆಗಳು ರೂ. 99 ರಿಂದ ಪ್ರಾರಂಭವಾಗುತ್ತವೆ. ಗೋರಖ್‌ಪುರ, ವಾರಣಾಸಿ, ಜೋಧಪುರ, ಧರ್ಮಶಾಲಾ, ಲಕ್ನೋ ಮತ್ತು ಅಮೃತಸರ ಸೇರಿದಂತೆ 59 ನಿಲ್ದಾಣಗಳು ಮತ್ತು ಒಟ್ಟು 200 ಕ್ಕೂ ಹೆಚ್ಚು ಸಂಪರ್ಕಗಳನ್ನು ಒಳಗೊಂಡಿರುತ್ತವೆ.
ಸ್ಥಳೀಯ ಬಸ್ ನಿರ್ವಾಹಕರ ಸಹಯೋಗದಲ್ಲಿ, FlixBus ತನ್ನ ಪಾಲುದಾರರಿಗೆ ತಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ಹೆಚ್ಚಿಸಲು ತಮ್ಮ ಸ್ವಾಮ್ಯದ ಟೆಕ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುತ್ತಿದೆ. FlixBus ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ಸಮಾನವಾಗಿ ಪರಿಣಾಮಕಾರಿ ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಒದಗಿಸುತ್ತದೆ ಎಂದು ಫ್ಲಿಕ್ಸ್‌ಬಸ್ ತಿಳಿಸಿದೆ.

FlixBus ಪ್ರತ್ಯೇಕವಾಗಿ BS6 ಎಂಜಿನ್‌ಗಳನ್ನು ಹೊಂದಿರುವ ಪ್ರೀಮಿಯಂ ಬಸ್ ಮಾದರಿಗಳನ್ನೂ ನಿರ್ವಹಿಸುತ್ತಿದೆ. ಈ ಮೂಲಕ ಮಾಲಿನ್ಯಕಾರಕಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕೆಲವು ವೈಶಿಷ್ಟ್ಯಗಳ ಭಾಗವಾಗಿ ಲಿಂಗ ಆಸನಗಳು (gender seating) ಅಂದರೆ, ಮಹಿಳೆಯರ ಪಕ್ಕದಲ್ಲಿರುವ ಆಸನಗಳನ್ನು ಇತರ ಮಹಿಳೆಯರಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ.
ಇತರ ಪ್ರಮುಖ ವೈಶಿಷ್ಟ್ಯಗಳ ಭಾಗವಾಗಿ ಫ್ಲಿಕ್ಸ್‌ಬಸ್ 24x7 ಪ್ರತಿಕ್ರಿಯೆ ತಂಡ, ಸಂಚಾರ ನಿಯಂತ್ರಣ ವಾರ್ಡ್, ಎಲ್ಲಾ ಆಸನಗಳಿಗೆ 2 ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ವಿಶೇಷವಾದ FlixBus ಲಾಂಜ್‌ಗಳು ಇರಲಿವೆ. ಈ ವೈಶಿಷ್ಟ್ಯಗಳು ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತವೆ ಎಂದು ಕಂಪನಿ ಭರವಸೆ ನೀಡಿದೆ.

ಫ್ಲಿಕ್ಸ್‌ನ ಸಿಇಒ ಆಂಡ್ರೆ ಶ್ವಾಮ್‌ಲೈನ್ ಮಾತನಾಡಿ, "ಭಾರತಕ್ಕೆ ಫ್ಲಿಕ್ಸ್‌ಬಸ್‌ನ ವಿಸ್ತರಣೆಯನ್ನು ಘೋಷಿಸಲು ನಮಗೆ ಖುಷಿಯಾಗಿದೆ, ನಮ್ಮ 43 ನೇ ದೇಶವನ್ನು ತಲುಪಿ ಜಾಗತಿಕವಾಗಿ ಹೊಸ ದಾಖಲೆ ನಿರ್ಮಿಸಿದ್ದೇವೆ. ನಮ್ಮ ಧ್ಯೇಯವು ಭಾರತದಲ್ಲಿ ಎಲ್ಲರಿಗೂ ಸಮರ್ಥನೀಯ, ಸುರಕ್ಷಿತ ಮತ್ತು ಕೈಗೆಟುಕುವ ಪ್ರಯಾಣದ ಆಯ್ಕೆಗಳನ್ನು ನೀಡುವುದಾಗಿದೆ ಎಂದರು.
ಭಾರತದ ಫ್ಲಿಕ್ಸ್‌ಬಸ್‌ನ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನಾ ಮಾತನಾಡಿ, ಭಾರತದಲ್ಲಿ ಸುರಕ್ಷತೆ, ಸೌಕರ್ಯ ಮತ್ತು ವೆಚ್ಚ-ಪರಿಣಾಮಕಾರಿ ಪ್ರಯಾಣಗಳೊಂದಿಗೆ ಲಕ್ಷಾಂತರ ವೈವಿಧ್ಯಮಯ ಸ್ಥಳಗಳನ್ನು ಅನ್ವೇಷಿಸುವ ಆಯ್ಕೆಯನ್ನು ಪ್ರಯಾಣಿಕರಿಗೆ ಒದಗಿಸುತ್ತಿದ್ದೇವೆ. ನಗರಗಳಲ್ಲಿನ ದಟ್ಟಣೆ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನಮ್ಮ ಬಸ್‌ಗಳು ಬದ್ದವಾಗಿವೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








