ಆಟೋ ಚಾಲಕರ ಆದಾಯ ಹೆಚ್ಚಿಸುವ ಹೊಸ ಎಲ್ಟ್ರಾ ಸಿಟಿ E3W ಬೆಲೆ, ವಿಶೇಷತೆಗಳು!
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯು ತನ್ನ ಎಲೆಕ್ಟ್ರಿಕ್ 3-ಚಕ್ರ ಪ್ರಯಾಣಿಕ ವಾಹನವಾದ, ಗ್ರೀವ್ಸ್ ಎಲ್ಟ್ರಾ ಸಿಟಿಯನ್ನು ರೂ. 3,66,999 ಬೆಲೆಯಲ್ಲಿ ನೀಡುತ್ತಿರುವುದಾಗಿ ಘೋಷಿಸಿದೆ. ಈ ವಾಹನದ ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳು, ಸೌಕರ್ಯ, ದಕ್ಷತೆ ಮತ್ತು ನಾವೀನ್ಯತೆಗಳಿಂದಾಗಿ ಬೇಡಿಕೆ ಹೆಚ್ಚಾಗಿದೆ. ಎಲ್ಟ್ರಾ ಸಿಟಿ 3-ಚಕ್ರ ವಾಹನವನ್ನು ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿತ್ತು. ಮೊದಲಿನಿಂದಲೂ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಉತ್ತಮ ಪ್ರಯಾಣ ಅನುಭವ ನೀಡಿರುವ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿದೆ.
ಎಲ್ಟ್ರಾ ಸಿಟಿ 3-ಚಕ್ರ ವಾಹನವು 10.8 kWh ಲಿಥಿಯಂ-ಐಯಾನ್ ಬ್ಯಾಟರಿ ಮತ್ತು 9.6 kW ಮೋಟಾರ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಸುಮಾರು 160 ಕಿ.ಮೀ ಚಲಿಸಬಲ್ಲದು. ಇದು ಅಡೆತಡೆಯಿಲ್ಲದ ಪ್ರಯಾಣ ಮತ್ತು ಚಾಲಕರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. ಇದಲ್ಲದೆ, ಇದು 14-ಡಿಗ್ರಿ ಗ್ರೇಡಬಿಲಿಟಿ, 49 Nm ಟಾರ್ಕ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ನಗರ ಮತ್ತು ಅರೆ-ನಗರ ರಸ್ತೆಗಳಲ್ಲಿ ತಡೆರಹಿತ ಮತ್ತು ಆರಾಮದಾಯಕ ಚಾಲನಾ ಅನುಭವವನ್ನು ನೀಡುತ್ತದೆ. ಗ್ರೀವ್ಸ್ ಎಲ್ಟ್ರಾ ಸಿಟಿ ಅತ್ಯಾಧುನಿಕ 6.2" ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ IoT ಸಾಮರ್ಥ್ಯಗಳನ್ನು ಹೊಂದಿದ್ದು, ಚಾಲಕರಿಗೆ ನೈಜ-ಸಮಯದ ಮಾಹಿತಿ ಮತ್ತು ನ್ಯಾವಿಗೇಷನ್ ಅನ್ನು ಅನುಕೂಲಕರವಾಗಿ ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಸುರಕ್ಷತೆಯೊಂದಿಗೆ ಉನ್ನತ ಆದ್ಯತೆಯಾಗಿ ಈ ಎಲ್ಟ್ರಾ ಸಿಟಿ ಎಲೆಕ್ಟ್ರಿಕ್ 3 - ಚಕ್ರ ವಾಹನವನ್ನು ವಿನ್ಯಾಸಗೊಳಿಸಲಾಗಿದೆ, ಈ ಎಲ್ಟ್ರಾ ಸಿಟಿಯು ದೃಢವಾದ ಪೂರ್ಣ ಐರನ್ ಬಾಡಿಯನ್ನು ಹೊಂದಿದೆ. ಈ ವಾಹನವು 3 ವರ್ಷಗಳ ಗ್ಯಾರೆಂಟಿಯೊಂದಿಗೆ ಬರುತ್ತದೆ (ಇದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ) ಎಂದು ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ತಿಳಿಸಿದೆ.

GEMPL ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ 3W (GEM 3 W) ನಿರ್ದೇಶಕ ವಿಜಯ ಕುಮಾರ್ ಮಾತನಾಡಿ, "GEMPL ಸುಸ್ಥಿರ ಮತ್ತು ಸಮರ್ಥ ಚಲನಶೀಲತೆ ಪರಿಹಾರಗಳನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ನಗರ ಸಾರಿಗೆ ಕ್ರಾಂತಿಗೆ ಬದ್ಧವಾಗಿದೆ. Eltra City E3W ಪ್ಯಾಸೆಂಜರ್ ವಾಹನವು ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದರು.
ಕೈಗೆಟುಕುವ ಬೆಲೆ, ಉನ್ನತ ಸಾಮರ್ಥ್ಯ ಮತ್ತು ಶ್ರೇಷ್ಠತೆ, ಅಸಾಧಾರಣ ಶ್ರೇಣಿ ಮತ್ತು ನವೀನ ತಂತ್ರಜ್ಞಾನದೊಂದಿಗೆ, ಎಲ್ಟ್ರಾ ಸಿಟಿಯು ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರಯಾಣದ ಅನುಭವವನ್ನು ಪುನರ್ ವ್ಯಾಖ್ಯಾನಿಸಲು ಸಿದ್ಧವಾಗಿದೆ. ಚಲನಶೀಲತೆ ಮತ್ತು ಹಸಿರು ಭವಿಷ್ಯದತ್ತ ನಮ್ಮ ಪ್ರಯಾಣವನ್ನು ಮುಂದುವರಿಸಲು ಎದುರುನೋಡುತ್ತಿದ್ದೇವೆ ಎಂದು ಹೇಳಿದರು.

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (GEMPL), ಗ್ರೀವ್ಸ್ ಕಾಟನ್ ಲಿಮಿಟೆಡ್‌ನ (GCL) ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರವಾಗಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (EV) ತಂತ್ರಜ್ಞಾನದಲ್ಲಿ ಪ್ರಮುಖ ಕಂಪನಿಯಾಗಿ ಗುರ್ತಿಸಿಕೊಂಡಿದೆ. GCL ನ EV ಪರಿಸರ ವ್ಯವಸ್ಥೆಯ ಸಮಗ್ರ ಬೆಂಬಲದೊಂದಿಗೆ, GEMPL 13 ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








