Mahindra: ಮಹೀಂದ್ರಾ ಕ್ಯಾಂಪರ್, ಪಿಕ್-ಅಪ್ ಎರಡೂ ಒಂದೇ ದಿನ ಬಿಡುಗಡೆ: ಮಸ್ತ್ ಐತಿ ದೋಸ್ತಾ!
ಭಾರತದ ಅತಿದೊಡ್ಡ ವಾಹನ ತಯಾರಕರಾದ ಮಹೀಂದ್ರಾ, ಇಂದು ಬೊಲೆರೊ ಕ್ಯಾಂಪರ್ (Bolero Camper) ಮತ್ತು ಬೊಲೆರೊ ಪಿಕ್-ಅಪ್ (Bolero Pik-Up) ಶ್ರೇಣಿಯ ಅಪ್‌ಡೇಟ್ ಮಾಡಲ್‌ಗಳನ್ನು ಬಿಡುಗಡೆ ಮಾಡಿದೆ. ಮಹೀಂದ್ರಾ ಹೊಸ ಡಿಸೈನ್ ಮತ್ತು ವರ್ಧಿತ ಸೌಕರ್ಯ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಬೊಲೆರೊ ಕ್ಯಾಂಪರ್ ಮತ್ತು ಬೊಲೆರೊ ಪಿಕ್-ಅಪ್ ಅನ್ನು ವಿವಿಧ ವೇರಿಯೆಂಟ್‌ಗಳಲ್ಲಿ ಪರಿಚಯಿಸಿದೆ. ನವೀಕರಣಗಳಲ್ಲಿ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಪ್ರಾಯೋಗಿಕ ವೈಶಿಷ್ಟ್ಯಗಳೊಂದಿಗೆ ಮುಂಭಾಗದ ವಿನ್ಯಾಸ ಹಾಗೂ ಆಯ್ದ ವೇರಿಯೆಂಟ್‌ಗಳಲ್ಲಿ ಐಮ್ಯಾಕ್ಸ್ ತಂತ್ರಜ್ಞಾನ ಸೇರಿಸಲಾಗಿದೆ.
ಈಗ ಹೊಸ ಬೊಲೆರೊ ಕ್ಯಾಂಪರ್ ಬೆಲೆಯು ರೂ.9.85 ಲಕ್ಷದಿಂದ ರೂ.10.49 ಲಕ್ಷದ (ಎಕ್ಸ್ ಶೋರೂಮ) ವರೆಗೆ ಇದೆ. ಹಾಗೆಯೇ ಬೊಲೆರೊ ಪಿಕ್-ಅಪ್ ಬೆಲೆಯು ರೂ.9.19 ಲಕ್ಷದಿಂದ ರೂ.9.99 ಲಕ್ಷದ (ಎಕ್ಸ್ ಶೋರೂಮ) ವರೆಗೆ ಇದೆ. ಒಟ್ಟಾರೆ ತಮ್ಮ ಜೀವನೋಪಾಯ ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗಗಳಾಗಿ ತಮ್ಮ ವಾಹನಗಳನ್ನು ಅವಲಂಬಿಸಿರುವ ಗ್ರಾಹಕರಿಗಾಗಿ ಈ ಮಾಡಲ್‌ಗಳನ್ನು ವಿನ್ಯಾಸಗೊಳಿಸಿರುವುದಾಗಿ ಕಂಪನಿ ತಿಳಿಸಿದೆ.

ಬೊಲೆರೊ ಕ್ಯಾಂಪರ್
ಹೊಸ ನವೀಕೃತ ಬೊಲೆರೊ ಕ್ಯಾಂಪರ್ ವಾಹನವು ಈಗ ಸುಧಾರಿತ ಐಮ್ಯಾಕ್ಸ್ (iMAXX) ಟೆಲಿಮ್ಯಾಟಿಕ್ಸ್ ಪರಿಹಾರದಿಂದ ನಡೆಸಲ್ಪಡುವ ಸಂಪರ್ಕಿತ ತಂತ್ರಜ್ಞಾನವನ್ನು ಹೊಂದಿದೆ. ಇದು ನೈಜ-ಸಮಯದ ವಾಹನ ಒಳನೋಟ (real-time vehicle insights) ಗಳನ್ನು ಒದಗಿಸುತ್ತದೆ. ವರ್ಧಿತ ಕಾರ್ಯಾಚರಣೆಯ ದಕ್ಷತೆ ಮತ್ತು ಚುರುಕಾದ ಫ್ಲೀಟ್ ನಿರ್ವಹಣೆಯನ್ನು ಉತ್ತೇಜಿಸುತ್ತದೆ.
ಹೆಚ್ಚುವರಿಯಾಗಿ, ವಾಹನವು ಹೊಸ ಡೆಕಲ್‌ಗಳು, ಬಾಡಿ - ಕಲರ್ಡ್ ORVM ಗಳು ಮತ್ತು ಡೋರ್ ಹ್ಯಾಂಡಲ್‌ಗಳೊಂದಿಗೆ ಹೊಸ ಲುಕ್ ಪಡೆದುಕೊಂಡಿದೆ. ವರ್ಧಿತ ಸೌಕರ್ಯದ ಫೀಚರ್‌ಗಳಲ್ಲಿ ಹಿಂಭಾಗದ ಸೀಟುಗಳಲ್ಲಿ ಹೆಡ್‌ರೆಸ್ಟ್‌ಗಳು, ಹವಾನಿಯಂತ್ರಣ (air conditioning) ಮತ್ತು ಹೀಟರ್, ಬ್ಲೂಟೂತ್ ಕರೆಯೊಂದಿಗೆ ಮ್ಯೂಸಿಕ್ ಸಿಸ್ಟಮ್ ಸೇರಿವೆ.

ಒಟ್ಟಾರೆ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು, ಮಹೀಂದ್ರಾ ಎಲ್ಲಾ ವೇರಿಯೆಂಟ್‌ಗಳಲ್ಲಿ ಹೆಡ್‌ರೆಸ್ಟ್‌ನೊಂದಿಗೆ ರೆಕ್ಲೈನರ್ ಡ್ರೈವಿಂಗ್ ಸೀಟ್ ಮತ್ತು ಹೆಚ್ಚುವರಿ ಸೌಕರ್ಯಕ್ಕಾಗಿ ವಿಶಾಲವಾದ ಕೋ-ಡ್ರೈವರ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ ಆಗಿಸಿದೆ. ಇತರ ಅನುಕೂಲಕರ ಸೇರ್ಪಡೆಗಳಲ್ಲಿ ಸೆಂಟ್ರಲ್ ಲಾಕಿಂಗ್ ಮತ್ತು ಹಿಂಭಾಗದ ಸೀಟ್ ಬೆಲ್ಟ್‌ಗಳು ಸೇರಿವೆ. ಇದು ಎಲ್ಲಾ ವೇರಿಯೆಂಟ್‌ಗಳಲ್ಲಿ ಆರಾಮದಾಯಕ ಚಾಲನಾ ಅನುಭವವನ್ನು ಖಚಿತಪಡಿಸುತ್ತದೆ ಎಂದು ಮಹೀಂದ್ರಾ ತಿಳಿಸಿದೆ.
ಬೊಲೆರೊ ಪಿಕ್-ಅಪ್
ಬೊಲೆರೊ ಪಿಕ್-ಅಪ್ ಈಗ ಹೊಸ ಮುಂಭಾಗದ ಡಿಸೈನ್, ಹೆಡ್‌ರೆಸ್ಟ್‌ನೊಂದಿಗೆ ಒರಗುವ ಡ್ರೈವರ್ ಸೀಟು (reclining driver's seat) ಮತ್ತು ಹೆಚ್ಚುವರಿ ಸೌಕರ್ಯಕ್ಕಾಗಿ ವಿಶಾಲವಾದ ಕೋ-ಡ್ರೈವರ್ ಸೀಟ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ, ಒಟ್ಟಾರೆ ಚಾಲನಾ ಅನುಭವವನ್ನು ಹೆಚ್ಚಿಸಲು ಹೀಟಿಂಗ್ ಮತ್ತು ಏರ್-ಕಂಡಿಷನಿಂಗ್ ಸಿಸ್ಟಮ್ ಪರಿಚಯಿಸಲಾಗಿದೆ. ಈ ಮೂಲಕ ಪಿಕಪ್ ವಿಭಾಗದಲ್ಲಿ ಮಾರುಕಟ್ಟೆ ನಾಯಕನಾಗಿ ಮಹೀಂದ್ರಾ ತನ್ನ ಪರಂಪರೆಯನ್ನು ಮುಂದುವರೆಸಿದೆ.

ಹೊಸ ಫೀಚರ್‌ಗಳ ಅಪ್‌ಗ್ರೇಡ್‌ನೊಂದಿಗೆ ಮಹೀಂದ್ರಾ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿಕೊಂಡಿದೆ. ಬೊಲೆರೊ ಕ್ಯಾಂಪರ್ ಮತ್ತು ಬೊಲೆರೊ ಪಿಕ್ - ಅಪ್ ಎರಡೂ ತಮ್ಮ ಜೀವನೋಪಾಯ ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗಗಳಾಗಿ ತಮ್ಮ ವಾಹನಗಳನ್ನು ಅವಲಂಬಿಸಿರುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಬೊಲೆರೊ ಸಿರೀಸ್‌ನ ಇತ್ತೀಚಿನ ವರ್ಧನೆಗಳು ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಮಹೀಂದ್ರಾ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








