ಹೊಸ ಮಾರುತಿ ಡಿಜೈರ್ ಎಷ್ಟು ಸುರಕ್ಷಿತ? ಮೋಸಹೋಗಬೇಡಿ... ಇದನ್ನು ತಿಳಿದು ಖರೀದಿಸಿ!
ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಇರುವಷ್ಟು ಬೇಡಿಕೆ ಇನ್ಯಾವಿದೇ ಕಾರುಗಳಿಗೆ ಇಲ್ಲ. ಏಕೆಂದರೆ ಕಡಿಮೆ ಬೆಲೆ, ಉತ್ತಮ ಫೀಚರ್ಸ್, ಬೆಸ್ಟ್ ಮೈಲೇಜ್ ಹಾಗೂ ಅತ್ಯುತ್ತಮ ಸೇವಾ ಬೆಂಬಲದಿಂದ ಮಾರುತಿ ಸುಜುಕಿ ಜನಪ್ರಿಯತೆ ಪಡೆದಿದೆ. ಇದೇ ಕಾರಣದಿಂದ ಪ್ರತಿ ತಿಂಗಳು ಮಾರುತಿ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತವೆ. ಆದರೆ ಸುರಕ್ಷತೆ ವಿಚಾರದಲ್ಲಿ ಮಾತ್ರ ಮಾರುತಿ ಕಾರುಗಳು ಹಿಂದುಳಿದಿವೆ, ಈವೆರೆಗೆ ಮಾರುತಿಯ ಯಾವುದೇ ಕಾರು ಕೂಡ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿಲ್ಲ. ಆದ್ರೆ ಇದೀಗ ಆ ದಾಖಲೆಯನ್ನು ಹೊಸ ಮಾರುತಿ ಡಿಜೈರ್ ಮುರಿದಿದೆ.
ಮಾರುತಿ ಸುಜುಕಿಯ ನಾಲ್ಕನೇ ತಲೆಮಾರಿನ ಹೊಸ ಡಿಜೈರ್ ಸೆಡಾನ್ ಅನ್ನು ಭಾರತದಲ್ಲಿ 6.79 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆಯು 10.14 ಲಕ್ಷ ರೂ.ಗಳ (ಎಕ್ಸ್ ಶೋರೂಂ)ವರೆಗೆ ಇದೆ. ಹೊಸ ಡಿಜೈರ್ ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ನಂತಹ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತದೆ.

ಇತ್ತೀಚೆಗೆ ನಾಲ್ಕನೇ ತಲೆಮಾರಿನ ಹೊಸ ಮಾರುತಿ ಸುಜುಕಿ ಡಿಜೈರ್ ಅನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ (Global New Car Assessment Programme)ಗೆ ಒಳಪಡಿಸಲಾಗಿತ್ತು. ಈ ಸುರಕ್ಷತಾ ಪರೀಕ್ಷೆಯಲ್ಲಿ ಹೊಸ ಮಾರುತಿ ಡಿಜೈರ್ (Maruti Suzuki Dzire) ಎಲ್ಲರನ್ನು ಅಚ್ಚರಿಗೊಳಿಸುವಂತೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.
ಬಹುತೇಕರು ಮಾರುತಿ ಸುಜುಕಿ ಕಾರುಗಳು ಸುರಕ್ಷತೆಯಲ್ಲಿ ಹಿಂದುಳಿದಿವೆ ಎಂದು ಹೇಳುತ್ತಾರೆ. ಹಾಗೆಯೇ ಹೊಸ ಡಿಜೈರ್ ಬಗ್ಗೆಯೂ ಹಲವರು ಕಳಪೆ ಗುಣಮಟ್ಟದ ಕಾರೆಂದು ನಂಬಲಾಗುತ್ತಿದೆ. ಈ ರೀತಿ ನೀವು ಕೂಡ ನಂಬಿ ಮೋಸಹೋಗಬೇಡಿ, ಏಕೆಂದರೆ ಈ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರುಗಳ ಸುರಕ್ಷತೆ ಹಾಗೂ ನಿರ್ಮಾಣ ಗುಣಮಟ್ಟವನ್ನು ಪರಿಶೀಲಿಸಿ ಫಲಿತಾಂಶವನ್ನು ನೀಡುತ್ತದೆ.

ಈ ಸಂಸ್ಥೆಯೇ ಮಾರುತಿ ಡಿಜೈರ್ ಅನ್ನು ಅತ್ಯಂತ ಸುರಕ್ಷಿತ ಕಾರು ಎಂದು ಘೋಷಿಸಿದೆ. ಈ ಮೂಲಕ ಭಾರತದಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಮೊದಲ ಮಾರುತಿ ಸುಜುಕಿ ಕಾರು ಎಂಬ ಹೆಗ್ಗಳಿಗೆ ಡಿಜೈರ್ ಪಾತ್ರವಾಗಿದೆ. ಈ ಮೂಲಕ ಹೊಸ ಡಿಜೈರ್‌ಗೆ ಸದ್ಯ ಬಾರೀ ಬೇಡಿಕೆ ವ್ಯಕ್ತವಾಗುವ ಜೊತೆಗೆ, ಮುಂಬರುವ ಮಾರುತಿ ಕಾರುಗಳ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.
ಮಾರುತಿ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುವ ಹೊಸ ಡಿಜೈರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿರುವ ಹಲವಾರು ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ (ಎಚ್ಎಚ್ಎ), ಎಂಜಿನ್ ಇ-ಮೊಬೈಲೈಸರ್, ಎಬಿಎಸ್ ವಿತ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ) ನಂತಹ ಫೀಚರ್ಸ್ ಒಳಗೊಂಡಿದೆ.

ಇವು ಮಾತ್ರವಲ್ಲದೇ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳು ಮತ್ತು ಹೈಸ್ಪೀಡ್ ವಾರ್ನಿಂಗ್ ಅಲರ್ಟ್, ಫೋರ್ಸ್ ಲಿಮಿಟರ್ ಮತ್ತು ಪ್ರಿ-ಟೆನ್ಷನರ್ ಹೊಂದಿರುವ ಫ್ರಂಟ್ ಸೀಟ್ ಬೆಲ್ಟ್, ರಿಯರ್ ಡಿಫೋಗರ್, ಎಲ್ಲಾ ಪ್ರಯಾಣಿಕರಿಗೆ 3 - ಪಾಯಿಂಟ್ ಸೀಟ್ ಬೆಲ್ಟ್‌ಗಳು, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕಿಂಗ್, ಪ್ರತಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಹೆಚ್ಚುವರಿ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳಾಗಿವೆ.
ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ ಹೈ-ಎಂಡ್ ಕಾರುಗಳು ಮಾತ್ರ 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಆಂಟಿ-ಥೆಫ್ಟ್ ಸೆಕ್ಯುರಿಟಿ ಸಿಸ್ಟಮ್ (ಶಾಕ್ ಸೆನ್ಸಾರ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಹಗಲು / ರಾತ್ರಿ ಸರಿಹೊಂದಿಸಬಹುದಾದ ರಿಯರ್ ವ್ಯೂ ಮಿರರ್ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿವೆ.


Click it and Unblock the Notifications