Hyundai: ಜೂನ್‌ನಲ್ಲಿ ಬಹುಬೇಡಿಕೆಯ ಹ್ಯುಂಡೈ ಕ್ರೆಟಾದ ಆನ್-ರೋಡ್ ಬೆಲೆ ಏನು, EMI ಎಷ್ಟು?

ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಜನಪ್ರಿಯ ಎಸ್‌ಯುವಿಯಾಗಿದ್ದು, ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಪಡೆದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಮಾರಾಟ ಪ್ರಮಾಣವು ದ್ವಿಗುಣಗೊಳ್ಳುತ್ತಿದೆ. ನೀವು ಈ ಕಾರನ್ನು ಕೊಂಡುಕೊಳ್ಳಲು ಯೋಚಿಸಿದ್ದರೆ ಜೂನ್ ತಿಂಗಳಲ್ಲಿ 'ಕ್ರೆಟಾ' ಹೊಂದಿರುವ ಆನ್ - ರೋಡ್ (On - Road) ಬೆಲೆ ಹಾಗೂ ಇಎಂಐ (EMI) ಆಯ್ಕೆಯ ಕುರಿತು ವಿವರಿಸಿದ್ದೇವೆ.

ಸದ್ಯ ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಚಾಲಿತ 'ಇ' ರೂಪಾಂತರ (ವೇರಿಯೆಂಟ್)ವು ರೂ.13.72 ಲಕ್ಷ, 'ಇಎಕ್ಸ್' ರೂ.15.22 ಲಕ್ಷ, 'ಎಸ್' ರೂ.16.72 ಲಕ್ಷ, 'ಎಸ್ಎಕ್ಸ್' ರೂ.19.04 ಲಕ್ಷ, 'ಎಸ್ಎಕ್ಸ್ ಡಿಟಿ' ರೂ.19.22 ಲಕ್ಷ, 'ಎಸ್ಎಕ್ಸ್ (ಒ) ಟರ್ಬೊ ಡಿಸಿಟಿ' ರೂ.24.84 ಲಕ್ಷ ಆನ್ - ರೋಡ್ ಬೆಲೆಯನ್ನು ಹೊಂದಿದೆ.

Hyundai Creta Car June On Road And Emi Details

ಡೀಸೆಲ್ ಚಾಲಿತ ಮಾದರಿಯಾದ 'ಇ' ರೂ.15.64 ಲಕ್ಷ, 'ಎಸ್' ರೂ.18.66 ಲಕ್ಷ, 'ಎಸ್ (ಒ)' ರೂ.19.81 ಲಕ್ಷ, 'ಎಸ್ಎಕ್ಸ್ (ಒ) ಎಟಿ ಡಿಟಿ' ರೂ.25.25 ಲಕ್ಷ ಆನ್ - ರೋಡ್ ದರವನ್ನು ಪಡೆದಿದೆ. ಈ ಕಾರಿನ ಆರಂಭಿಕ ಆವೃತ್ತಿಯನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ಶೇಕಡ 9.8% ಬಡ್ಡಿದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.24,780 ಇಎಂಐ ಕಟ್ಟಬೇಕು.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‌ಯುವಿಯು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಅಬಿಸ್ ಬ್ಲ್ಯಾಕ್, ಟೈಟಾನ್ ಗ್ರೇ, ಫಿಯರಿ ರೆಡ್, ರೇಂಜರ್ ಖಾಕಿ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಜೊತೆಗೆ ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಲು 433 ಲೀಟರ್ ಸಾಮರ್ಥ್ಯ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಈ ಕಾರು 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, ಸಿವಿಟಿ, 7-ಸ್ಪೀಡ್ ಡಿಸಿಟಿ ಗೇರ್‌ ಬಾಕ್ಸ್‌ನ್ನು ಒಳಗೊಂಡಿದ್ದು, ಪೆಟ್ರೋಲ್ ಮಾದರಿಗಳು 17.4 ರಿಂದ 18.4 ಕೆಎಂಪಿಎಲ್, ಡೀಸೆಲ್ ಆವೃತ್ತಿಗಳು 19.1 ರಿಂದ 21.8 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.

ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಮಾದರಿಯು 10.25-ಇಂಚಿನ ಡುಯಲ್ ಡಿಸ್ಪ್ಲೇ, ಡುಯಲ್ ಝೋನ್ ಎಸಿ, ಸನ್‌ರೂಫ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಈ ಕ್ರೆಟಾಗೆ ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಪೋಕ್ಸ್‌ವ್ಯಾಗನ್ ಟೈಗನ್ ಕಾರುಗಳು ದೊಡ್ಡ ಎದುರಾಳಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ಕೆಲವೇ ರೂಪಾಂತರಗಳ ಬಗ್ಗೆ ಮಾತ್ರ ವಿವರಿಸಲಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಆನ್ - ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 2, 2024, 12:00 [IST]
English summary
Hyundai creta car june on road and emi details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+