ಶ್ರೀಮಂತರಾಗುತ್ತಿದ್ದಾರಾ ಭಾರತೀಯರು?: ಜಾಗ್ವಾರ್‌ ಲ್ಯಾಂಡ್‌ರೋವರ್‌ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

ಜಾಗ್ವಾರ್‌ ಲ್ಯಾಂಡ್‌ರೋವರ್‌ ಕಾರಗಳ ಬಗ್ಗೆ ಯಾರು ತಾನೇ ಕೇಳಿರಲ್ಲ ಹೇಳಿ. ಲ್ಯಾಂಡ್‌ರೋವರ್‌ ರೇಂಜ್‌ರೋವರ್‌ ಕಾರುಗಳು ಭಾರತೀಯರ ನೆಚ್ಚಿನ ದುಬಾರಿ ಎಸ್‌ಯುವಿ ಕಾರುಗಳಾದರೆ, ಜಾಗ್ವಾರ್‌ನ ದುಬಾರಿ ಸೆಡಾನ್‌ಗಳು ಭಾರತೀಯ ಹೆದ್ದಾರಿಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಈ ಬ್ರಾಂಡ್‌ಗಳ ಕುರಿತಾದ ಹೊಸ ವರದಿಯೊಂದು ಹೊರಬಿದ್ದಿದೆ.

ಹೌದು, ವರದಿಗಳ ಪ್ರಕಾರ ಜಾಗ್ವಾರ್‌ ಲ್ಯಾಂಡ್‌ ರೋವರ್‌ (JLR) ಇಂಡಿಯಾ (Jaguar Land Rover), ಕಳೆದ ಐದು ವರ್ಷಗಳಲ್ಲಿ ಅತೀ ಹೆಚ್ಚು ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಸುಮಾರು 81% ದಷ್ಟು ಹೆಚ್ಚಿನ ವಾಹನಗಳನ್ನು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

Jaguar Land Rover India Gets Highest Sales Compared To Last 5 Years

ಕೇವಲ ರೇಂಜ್‌ ರೋವರ್‌ ಮಾಡೆಲ್‌ಗಳ ಬಗ್ಗೆ ನೋಡಿದರೆ ಈ ದುಬಾರಿ ಎಸ್‌ಯುವಿಗಳು 160% ಹೆಚ್ಚು ಮಾರಾಟವಾಗಿದ್ದು, ಇದರ ಡಿಫೆಂಡರ್‌ ಕಾರು ಮಾದರಿ ಬರೋಬ್ಬರಿ 120% ರಷ್ಟು ಹೆಚ್ಚು ಮಾರಾಟವಾಗಿದೆ. ಇತ್ತೀಚಿನ ದಿನಗಳಲ್ಲಿ ದುಬಾರಿ ಕಾರು ಮಾದರಿಗಳ ಮೇಲೆ ಹೆಚ್ಚಿನ ವ್ಯಾಮೋಹ, ಈ ಕಾರುಗಳು ಇಷ್ಟರ ಮಟ್ಟಿಗೆ ಹೆಚ್ಚಿನ ವ್ಯಾಪಾರ ಕಾಣಲು ಸಾಧ್ಯವಾಗಿರುವುದು ಎಂಬುದು ಕಾರು ಪಂಡಿತರ ಅಭಿಪ್ರಾಯ.

ಇನ್ನು ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಜಾಗ್ವಾರ್ ಲ್ಯಾಂಡ್‌ರೋವರ್‌ ಕಾರುಗಳು ಎಲೆಕ್ಟ್ರಿಕ್‌ನತ್ತ ಸಹ ಮುಖಮಾಡಿದ್ದು ಕೆಲವೇ ಸಮಯಗಳಲ್ಲಿ ರೇಂಜ್‌ ರೋವರ್‌, ಡಿಸ್ಕವರಿ ಮತ್ತು ಡಿಫೆಂಡರ್‌ ಮಾದರಿಗಳು ಸಂಪೂರ್ಣ ಎಲೆಕ್ಟ್ರಿಕ್‌ ಮಾದರಿಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಗಳು ತಿಳಿಸಿದೆ. ಈ ಮೂಲಕ ತನ್ನ ಎಲೆಕ್ಟ್ರಿಕ್‌ ಕಾರುಗಳ ಸಹಾಯದಿಂದ ಪರಿಸರ ರಕ್ಷಣೆಗೆ ಪಣ ತೊಟ್ಟಿದೆ.

Jaguar Land Rover India Gets Highest Sales Compared To Last 5 Years

ಇನ್ನು ರೇಂಜ್‌ ರೋವರ್‌ ಕಾರುಗಳ ಬಗ್ಗೆ ನೊಡುವುದಾದರೆ, ಇದರ ಡಿಫೆಂಡರ್‌ ಬಗ್ಗೆ ಮಾತನಾಡಲೇ ಬೇಕು. ಪ್ರಸ್ತುತ ಹೊಸ ಲ್ಯಾಂಡ್ ರೋವರ್ 90, 110, ಮತ್ತು 130 ಎಂಬ ಮೂರು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 130 ವೇರಿಯೆಂಟ್ ಬ್ರ್ಯಾಂಡ್‌ನಿಂದ ಹೊರಬಂದ ಹೊಸ ಬಿಡುಗಡೆಯಾಗಿದ್ದು, 110 ಮಾದರಿಯಂತೆಯೇ 5 ಡೋರ್ ಆವೃತ್ತಿಯಾಗಿದೆ. ಏಳು ಜನರು ಪ್ರಯಾಣಿಸುವ ಆಸನ ವಿನ್ಯಾಸವನ್ನು ಒಳಗೊಂಡಿದೆ. ಇವುಗಳ ಬೆಲೆಯು 93 ಲಕ್ಷದಿಂದ ಆರಂಭವಾಗಿ 2.30 ಕೋಟಿ ರೂ.ವರೆಗೆ ಹೋಗುತ್ತದೆ.

ಕಂಪನಿಯು ಡಿಫೆಂಡರ್ ಅನ್ನು ಡಿಫೆಂಡರ್ 90 ಎಂಬ ಮೂರು ಬಾಗಿಲಿನ ವೇರಿಯೆಂಟ್‌ನಲ್ಲೂ ನೀಡುತ್ತದೆ. ಇತ್ತೀಚೆಗೆ, ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ಫಹಾದ್ ಫಾಸಿಲ್ ಅವರು ಕೂಡ ಈ SUV ಯ ಬೃಹತ್ V8 ಎಂಜಿನ್‌ನೊಂದಿಗೆ ಖರೀದಿಸಿದ್ದರು. ಎಂಜಿನ್ ಆಯ್ಕೆಗಳ ಬಗ್ಗೆ ಮಾತನಾಡುವುದಾದ್ರೆ, ಲ್ಯಾಂಡ್ ರೋವರ್ ಪ್ರಸ್ತುತ ಭಾರತದಲ್ಲಿ ಈ ದೈತ್ಯ SUV ಗಾಗಿ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ.

Jaguar Land Rover India Gets Highest Sales Compared To Last 5 Years

ಮೂರರಲ್ಲಿ ಎರಡು ಪೆಟ್ರೋಲ್, ಒಂದು ಡೀಸೆಲ್ ಎಂಜಿನ್ ಆಯ್ಕೆಯಿದೆ. ಟರ್ಬೊ ಪೆಟ್ರೋಲ್ ಎಂಜಿನ್‌ಗಳು 2.0-ಲೀಟರ್ 4-ಸಿಲಿಂಡರ್ ಘಟಕವನ್ನು ಒಳಗೊಂಡಿದ್ದು, 300 bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 3.0-ಲೀಟರ್ 6-ಸಿಲಿಂಡರ್ ಸಹ ಕೊಡುಗೆಯಲ್ಲಿದ್ದು, ಇದು ಗರಿಷ್ಠ 400 bhp ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 12, 2024, 10:43 [IST]
English summary
Jaguar land rover india gets highest sales compared to last 5 years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+