ಇತ್ತೀಚಿನ ಜೀಪ್ ಕಂಪಾಸ್ ನೈಟ್ ಈಗಲ್‌ ಲಿಮಿಟೆಡ್ ಎಡಿಷನ್ ವಿಶೇಷತೆಗಳು!

ಕಂಪಾಸ್ ಎಸ್‌ಯುವಿ ಯಶಸ್ಸಿನ ಆಧಾರದ ಮೇಲೆ, ನೈಟ್ ಈಗಲ್ ವೇರಿಯೆಂಟ್ ಆಕರ್ಷಕ 'ಬ್ಲ್ಯಾಕ್' ಬಣ್ಣದೊಂದಿಗೆ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಇದನ್ನು 'ಜೀಪ್ ಇಂಡಿಯಾ' ತನ್ನ ಜೀಪ್ ಕಂಪಾಸ್ ಸೀಮಿತ ಆವೃತ್ತಿ (Limited edition)ಯ ಅಡಿಯಲ್ಲಿ ನೈಟ್ ಈಗಲ್‌ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಎಸ್‌ಯುವಿಯ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಬೆಲೆ, ವಿಶೇಷತೆಗಳು: ನೈಟ್ ಈಗಲ್ ಸ್ಟ್ಯಾಂಡರ್ಡ್ ಆಗಿ ಗಮನಾರ್ಹವಾದ ಬ್ಲಾಕ್ ಡ್ಯುಯಲ್-ಟೋನ್ ರೂಫ್ ಹೊಂದಿದೆ. ಬ್ಲಾಕ್, ವೈಟ್ ಮತ್ತು ರೆಡ್ ಸೇರಿ ಮೂರು ಬಾಹ್ಯ ಬಣ್ಣಗಳಲ್ಲಿ ಲಭ್ಯವಿದೆ. ಇದು ಮ್ಯಾನ್ಯುವಲ್ ಮತ್ತು 9 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಡುವಿನ ಆಯ್ಕೆಯೊಂದಿಗೆ ಬರಲಿದ್ದು, ಬುಕಿಂಗ್‌ಗಳು ಈಗಾಗಲೇ ತೆರೆದಿವೆ. ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ 2024ರ ಕಂಪಾಸ್ ನೈಟ್ ಈಗಲ್‌ ಬುಕ್ಕಿಂಗ್‌ಗಳು ಈಗ ಜೀಪ್ ಡೀಲರ್‌ಶಿಪ್‌ಗಳಲ್ಲಿ ಮತ್ತು ಜೀಪ್ ಇಂಡಿಯಾ ವೆಬ್‌ಸೈಟ್‌ನಲ್ಲಿ (jeep-india.com) ತೆರೆದಿದ್ದು, ಬೆಲೆಯು ರೂ. 20.49 ಲಕ್ಷದಿಂದ ಪ್ರಾರಂಭವಾಗುತ್ತದೆ. ಡೀಲರ್‌ಶಿಪ್‌ನಲ್ಲಿ ಸ್ಥಾಪಿಸಲಾದ ಬಿಡಿಭಾಗಗಳನ್ನು ಒಳಗೊಂಡಂತೆ ರೂ. 25.39 ಲಕ್ಷಗಳಿಂದ ಪ್ರಾರಂಭವಾಗುತ್ತದೆ.

jeep-compass-night-eagle-limited-edition-specs-price-features-details

ಜೀಪ್ ಕಂಪಾಸ್ ನೈಟ್ ಈಗಲ್ ಚಾಲಕರಿಗೆ ಎರಡು ಪ್ರಭಾವಶಾಲಿ FWD ಪವರ್‌ಟ್ರೇನ್ ಆಯ್ಕೆಗಳನ್ನು ನೀಡುತ್ತದೆ. 2.0L ಮಲ್ಟಿಜೆಟ್ ಟರ್ಬೊ ಡೀಸೆಲ್ ಅನ್ನು 6 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 9 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು ವೈವಿಧ್ಯಮಯ ಚಾಲನಾ ಆದ್ಯತೆಗಳನ್ನು ಪೂರೈಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಚಾಲನಾ ಅನುಭವವನ್ನು ಇನ್ನಷ್ಟು ಹೆಚ್ಚಿಸಲು, ಈ ಲಿಮಿಟೆಡ್ ಎಡಿಷನ್ ಪನಾರಮಿಕ್ ಸನ್‌ರೂಫ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾರಿತ ಕನೆಕ್ಟೆಡ್ ಫೀಚರ್‌ಗಳು ಮತ್ತು ವೈರ್‌ಲೆಸ್ ಚಾರ್ಜರ್ ಪ್ರಯಾಣದಲ್ಲಿರುವಾಗ ತಡೆರಹಿತ ಸಂಪರ್ಕವನ್ನು ನೀಡುತ್ತದೆ. ಒಟ್ಟಾರೆ ಜೀಪ್ ನೈಟ್ ಈಗಲ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

jeep-compass-night-eagle-limited-edition-specs-price-features-details

ಜೀಪ್ ಕಂಪಾಸ್ ನೈಟ್ ಈಗಲ್ ವಿಶಿಷ್ಟವಾದ ಫ್ಯಾಕ್ಟರಿ - ಫಿಟೆಡ್ ಅಂಶಗಳನ್ನು ಒಳಗೊಂಡಿದೆ, ಗ್ರಿಲ್, ಗ್ರಿಲ್ ರಿಂಗ್‌ಗಳು ಮತ್ತು ಡೇಲೈಟ್ ಓಪನಿಂಗ್ಸ್ (ಡಿಎಲ್‌ಒ) ಸೇರಿದಂತೆ ವಿವಿಧ ಬಾಹ್ಯ ಅಂಶಗಳಿಗೆ ಹೊಳಪಿನ ಬ್ಲಾಕ್ ಫಿನಿಶ್ ಮತ್ತು ಬ್ಲಾಕ್ ರೂಫ್ ರೈಲ್ಸ್ ಅನ್ನು ನೀಡಲಾಗಿದೆ. ಜೊತೆಗೆ ಜೀಪ್ ಕಂಪಾಸ್ ಈಗ 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಕಂಪಾಸ್ ನೈಟ್ ಈಗಲ್ ಡ್ಯಾಶ್‌ಕ್ಯಾಮ್ / ರಿಯರ್ ಎಂಟರ್‌ಟೈನ್‌ಮೆಂಟ್ ಯೂನಿಟ್, ಪ್ರೀಮಿಯಂ ಕಾರ್ಪೆಟ್ ಮ್ಯಾಟ್ಸ್, ಅಂಡರ್‌ಬಾಡಿ ಲೈಟಿಂಗ್, ಆಂಬಿಯೆಂಟ್ ಲೈಟ್‌ಗಳು ಮತ್ತು ಐಷಾರಾಮಿ ಡ್ರೈವ್‌ಗಾಗಿ ಏರ್ ಪ್ಯೂರಿಫೈಯರ್‌ನೊಂದಿಗೆ ಸುಸಜ್ಜಿತ ಗುಣಮಟ್ಟವನ್ನು ಹೊಂದಿದೆ.

ಜೀಪ್ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಕುಮಾರ್ ಪ್ರಿಯೇಶ್ ಮಾತನಾಡಿ, "ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಜೀಪ್ ಕಂಪಾಸ್ ಪೋರ್ಟ್‌ಫೋಲಿಯೊವನ್ನು ಉನ್ನತೀಕರಿಸುತ್ತದೆ. ಭಾರತೀಯ ಗ್ರಾಹಕರ ವಿವೇಚನಾಶೀಲ ಅಭಿರುಚಿಯ ವಿಶಿಷ್ಟ ಸೊಬಗನ್ನು ನೀಡುತ್ತದೆ. SUV ಅನ್ನು ಪರಿಗಣಿಸುವ ಯಾವುದೇ ವ್ಯಕ್ತಿಗೆ ಜೀಪ್ ಕಂಪಾಸ್ ಪಟ್ಟಿಯ ಮೇಲ್ಭಾಗದಲ್ಲಿದೆ ಎಂದರು.

ಕಂಪಾಸ್ ನೈಟ್ ಈಗಲ್ ಹಣಕ್ಕೆ ತಕ್ಕ ಮೌಲ್ಯ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಐಷಾರಾಮಿ ಎಸ್‌ಯುವಿ ಆಗಿದೆ. ಈ ಗಮನಾರ್ಹ SUV ಚಾಲನೆಯ ಅತ್ಯಾಧುನಿಕತೆ ಮತ್ತು ಥ್ರಿಲ್ ಅನ್ನು ಅನುಭವಿಸಲು ನಾವು ಉತ್ಸುಕರಾಗಿದ್ದೇವೆ." ಎಂದು ಜೀಪ್ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಕುಮಾರ್ ಪ್ರಿಯೇಶ್ ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 15, 2024, 8:30 [IST]
English summary
Jeep compass night eagle limited edition specs price features details
Read more on jeep ಜೀಪ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+