ದೇಶದಲ್ಲೇ ಕರ್ನಾಟಕದಲ್ಲಿ ಹೆಚ್ಚು ರಸ್ತೆ ತೆರಿಗೆ: ಸಾರಿಗೆ ವಾಹನಗಳ ಖರೀದಿ ದುಬಾರಿ, ಇವಿಗೆ ಲೈಫ್‌ಟೈಮ್ ತೆರಿಗೆ!

ರಾಜ್ಯದಲ್ಲಿ ಹೊಸ ವಾಣಿಜ್ಯ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರ ತೆರಿಗೆ (Tax) ಶಾಕ್ ಅನ್ನು ನೀಡಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2024ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನುಮೋದನೆ ಲಭಿಸಿದೆ. ಮಾರ್ಚ್‌ 6ರಂದು ರಾಜ್ಯಪಾಲರು ಅಧಿನಿಯಮಕ್ಕೆ ಅನುಮೋದನೆ ನೀಡಿದ್ದಾರೆ.

ಕರ್ನಾಟಕದಲ್ಲಿ (Karnataka) ಇದೀಗ ವಾಣಿಜ್ಯ ಸಾರಿಗೆ ವಾಹನಗಳ ಖರೀದಿ ಮತ್ತಷ್ಟು ದುಬಾರಿಯಾಗಿದೆ ಹೊಸ ಕಾನೂನಿನ ಪ್ರಕಾರ, ಹೊಸ ವಾಣಿಜ್ಯ ವಾಹನಗಳ ನೋಂದಣಿ ಮಾಡುವ ವಾಹನಗಳ ಮೇಲೆ ರಾಜ್ಯ ಸರ್ಕಾರ ಶೇ 3ರಷ್ಟು ಹೆಚ್ಚುವರಿ ಸೆಸ್ ವಿಧಿಸಲಿದೆ. ಈ ಹಣವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಅದಕ್ಕೆ ಸಂಬಂಧಿತ ನೌಕರರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಗೆ ಹೋಗುತ್ತದೆ.

Karnataka To Introduce Extra Cess

ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್ ಟೈಮ್ ಟ್ಯಾಕ್ಸ್ ಅನ್ನು ಸಹ ಪಾವತಿ ಮಾಡಬೇಕಿದೆ. ಕಾರು, ಜೀಪ್, ಓಮ್ನಿ ಬಸ್ ಅಥವಾ ಖಾಸಗಿ ಸೇವಾ ವಾಹನವು 25 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗಿದ್ದರೆ, ನೋಂದಣಿ ಸಮಯದಲ್ಲಿ ಅದರ ವೆಚ್ಚದ ಮೇಲೆ 10 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತದೆ. 2023ರ ಬಜೆಟ್ ಮಂಡನೆ ಬಳಿಕ ರಾಜ್ಯದಲ್ಲಿ ಶಾಲೆ, ಕಾಲೇಜು ವಾಹನಗಳು, ಸರಕು ಸಾಗಣೆ ವಾಹನಗಳು, ಮೋಟಾರ್ ಕ್ಯಾಬ್‌ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿತ್ತು.

ಇದಕ್ಕೆ ಪೂರಕವಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ-2023ಕ್ಕೆ ವಿಧಾನ ಮಂಡಲದ ಒಪ್ಪಿಗೆ ಪಡೆಯಲಾಗಿತ್ತು. ರಾಜ್ಯದಲ್ಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಮೇಲೆ ಇಂತಹ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲು. ಭಾರತದಲ್ಲಿ ಅತೀ ಹೆಚ್ಚು ರಸ್ತೆ ತೆರಿಗೆ ವಿಧಿಸುತ್ತಿರುವ ರಾಜ್ಯ ಕರ್ನಾಟಕ.

Karnataka To Introduce Extra Cess

ರಾಜ್ಯದಲ್ಲಿ ಶೇಕಡಾ 13 ರಿಂದ 20 ರಷ್ಟು ರಸ್ತೆ ತೆರಿಗೆ ವಿಧಿಸಲಾಗುತ್ತಿದೆ. ರಾಜ್ಯದಲ್ಲಿ ಶೇಕಡಾ 10 ರಷ್ಟು ಮೂಲಭೂತ ಸೌಕರ್ಯ ಸೆಸ್ ಹಾಗೂ ಶೇಕಡಾ 1 ರಷ್ಟು ಪಟ್ಟಣ ಸಾರಿಗೆ ಸೆಸ್ ಮೂಲಕ ಒಟ್ಟು ಶೇಕಡಾ 11 ರಷ್ಟು ಸೆಸ್ ವಿಧಿಸಲಾಗುತ್ತಿದೆ. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಅಲೈಡ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾಯಿದೆ, 2024 ಅನ್ನು ರಾಜ್ಯಪಾಲ ಗೆಹ್ಲೋಟ್ ಅವರು ಮಾರ್ಚ್ 6 ರಂದು ಅನುಮೋದಿಸಿದ್ದಾರೆ.

ಈ ಸಾರಿಗೆ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೊಸ ತೆರಿಗೆಯ ಪರಿಚಯವು ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಾಗಿದೆ. 2023 ರಲ್ಲಿ, ರಾಜ್ಯದಲ್ಲಿ 12,000 ಕ್ಕೂ ಹೆಚ್ಚು ಇವಿ ಪ್ರಯಾಣಿಕ ವಾಹನಗಳನ್ನು ನೋಂದಾಯಿಸಲಾಗಿದೆ.

Karnataka To Introduce Extra Cess

ವಾಹನ್ ಪೋರ್ಟಲ್‌ನಲ್ಲಿನ ಇತ್ತೀಚಿನ ವಾಹನ ನೋಂದಣಿ ಮಾಹಿತಿಯ ಪ್ರಕಾರ, 2024 ರ ಮೊದಲ ಎರಡು ತಿಂಗಳಲ್ಲಿ ಈ ಸಂಖ್ಯೆ ಈಗಾಗಲೇ 2,000 ವಾಹನಗಳನ್ನು ದಾಟಿದೆ. ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲಿಯೇ ಸದ್ದು ಮಾಡುತ್ತಿರುವ ವಿಷಯಗಳಲ್ಲಿ HSRP ನಂಬರ್ ಪ್ಲೇಟ್‌ ಸಹ ಒಂದು. ಈಗಾಗಲೇ ಭಾರತ ಸರ್ಕಾರ ಎಲ್ಲಾ ರಾಜ್ಯಗಳಲ್ಲೂ ಈ ನಂಬರ್‌ ಪ್ಲೇಟ್‌ ವಾಹನಕ್ಕೆ ಅಳವಡಿಸುವಂತೆ ಆದೇಶ ನಿಡಿದ್ದು ಬಹುತೇಕ ರಾಜ್ಯಗಳೆಲ್ಲವೂ ಈ ಕುರಿತಾದ ಕೆಲಸವನ್ನು ಮಾಡುತ್ತಿದೆ.

ಮೇ 17 ರಿಂದ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಮೊದಲು ಫೆಬ್ರವರಿ17ರ ಗಡುವು ವಿಧಿಸಿತ್ತು, ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲು ಸಾಧ್ಯವಿಲ್ಲ ಎಂದು ತಿಳಿದ ಸಾರಿಗೆ ಇಲಾಖೆಯು 2024 ರ ಮೇ 17ರವರೆಗೆ ವಿಸ್ತರಣೆ ಮಾಡಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 8, 2024, 18:27 [IST]
English summary
Karnataka hikes transport vehicle registration fees luxury evs lifetime tax
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+