ಕಿಯಾ ಸೆಲ್ಟೋಸ್ ಮತ್ತು ಸೋನೆಟ್‌ನಲ್ಲಿ 5 ಹೊಸ ಟ್ರಿಮ್‌ಗಳ ಬಿಡುಗಡೆ

ಕಿಯಾ ಇಂಡಿಯಾ, ಸೆಲ್ಟೋಸ್ ಮತ್ತು ಸೋನೆಟ್‌ಗಾಗಿ ತನ್ನ ಟ್ರಿಮ್ ಲೈನ್-ಅಪ್ ಅನ್ನು 5 ಹೊಸ ರೂಪಾಂತರಗಳಿಗೆ ವಿಸ್ತರಿಸಿದೆ. ಜೊತೆಗೆ ಹೊಸ ಅವತಾರದಲ್ಲಿ ಎಕ್ಸ್-ಲೈನ್ ಅನ್ನು ಪರಿಚಯಿಸಿದೆ. ಈ ಮೂಲಕ ವಾಹನಗಳು ಈಗ ಕ್ರಮವಾಗಿ 21 ಮತ್ತು 22 ರೂಪಾಂತರಗಳನ್ನು ಹೊಂದಿವೆ. ಇವು ಪೆಟ್ರೋಲ್ DCT ಮತ್ತು ಡೀಸೆಲ್ AT ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 4 GTX ರೂಪಾಂತರಗಳ ಸೇರ್ಪಡೆಯೊಂದಿಗೆ ಬರಲಿವೆ. ಈಗ ಸ್ಮಾರ್ಟ್‌ಸ್ಟ್ರೀಮ್ G1.0 HTK iMT ಪರಿಚಯದೊಂದಿಗೆ 10 ಲಕ್ಷದೊಳಗಿನ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಸೋನೆಟ್ ಖರೀದಿಸಬಹುದು ಎಂದು ಕಿಯಾ ಇಂಡಿಯಾ ತಿಳಿಸಿದೆ.

ಟಾಪ್ - ಆಫ್ - ಲೈನ್ ಟ್ರಿಮ್‌ಗಳ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ಸೆಲ್ಟೋಸ್‌ನಲ್ಲಿರುವ GTX+ ರೂಪಾಂತರಗಳಿಗೆ ಈಗ ಸೋಲಾರ್ ಗ್ಲಾಸ್ ಮತ್ತು ವೈಟ್ ಕ್ಯಾಲಿಪರ್‌ಗಳನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ನೀಡಲಾಗಿದೆ. ಈಗ ಹಳೆಯ ಮಾದರಿಗಿಂತ ಹೊಸ GTX+ ಮಾದರಿಯು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ.

kia-introduces-5-new-trims-in-seltos-and-sonet

ಹಾಗೆಯೇ ಎಕ್ಸ್-ಲೈನ್ ಅನ್ನು ಬಲಪಡಿಸುವ ಮೂಲಕ, ಕಿಯಾ ಇಂಡಿಯಾವು ಅಸ್ತಿತ್ವದಲ್ಲಿರುವ ಮ್ಯಾಟ್ ಗ್ರ್ಯಾಫೈಟ್ ಆಯ್ಕೆಯೊಂದಿಗೆ 'ಅರೋರಾ ಬ್ಲ್ಯಾಕ್ ಪರ್ಲ್' ಬಣ್ಣವನ್ನು ಪರಿಚಯಿಸಿದೆ. ಹೊಸ GTX ರೂಪಾಂತರವು ADAS, ಸ್ಲೈಡಿಂಗ್ ಆರ್ಮ್‌ರೆಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಮತ್ತಷ್ಟು ಪ್ರೀಮಿಯಂ ಆಗಿ ಕಾಣಲಿದೆ.

Sonet ನಲ್ಲಿ ಕೆಲವು ಬದಲಾವಣೆಗಳಾಗಿದ್ದು, ISOFIX, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಬದಿ ವೈಪರ್‌ಗಳು ಮತ್ತು ವಾಷರ್‌ಗಳು, ಡೈಮಂಡ್-ಕಟ್ ಅಲಾಯ್ ವೀಲ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಲೈನ್-ಅಪ್‌ನಲ್ಲಿ GTX ರೂಪಾಂತರಗಳ ಪರಿಚಯವು Sonet ನಲ್ಲಿ GT ಲೈನ್ ಟ್ರಿಮ್‌ಗಳ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

kia-introduces-5-new-trims-in-seltos-and-sonet

ಈ ಕುರಿತು ಪ್ರತಿಕ್ರಿಯಿಸಿದ ಕಿಯಾ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸೋಹ್ನ್, "ನಿರಂತರ ವಿಕಾಸ ಮತ್ತು ಗ್ರಾಹಕರ ಕೇಂದ್ರಿತತೆಯು ಭಾರತದಲ್ಲಿ ಕಿಯಾ ಯಶಸ್ಸಿಗೆ ಪ್ರಮುಖವಾಗಿದೆ. ಉತ್ಪನ್ನ ವರ್ಧನೆಗಳು ಅದೇ ಕಾರ್ಯತಂತ್ರದ ಭಾಗವಾಗಿದೆ, ನಮ್ಮ ಕಾರುಗಳು ಗ್ರಾಹಕರಿಗೆ ಇತ್ತೀಚಿನ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಅವರು ಖರ್ಚು ಮಾಡುವ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ ಎಂದರು.

GTX ಟ್ರಿಮ್‌ಗಳ ಪರಿಚಯವು ನಮ್ಮ ಗ್ರಾಹಕರಿಗೆ GT ಲೈನ್ ಅನ್ನು ಚಾಲನೆ ಮಾಡುವ ಥ್ರಿಲ್ ಅನ್ನು ನೀಡುವುದಲ್ಲದೆ, ಕಾರಿನಲ್ಲಿ ಪ್ಯಾಕ್ ಮಾಡಲಾದ ಇತ್ತೀಚಿನ ಮತ್ತು ಅತ್ಯುತ್ತಮ ಆಟೋಮೋಟಿವ್ ನಾವೀನ್ಯತೆಗಳನ್ನು ಪರಿಚಯಿಸುತ್ತದೆ. 10 ಲಕ್ಷದೊಳಗಿನ ಟರ್ಬೊ ಪೆಟ್ರೋಲ್ ಸೋನೆಟ್ ಮತ್ತು ಬ್ಲಾಕ್‌-ಥೀಮ್ ಎಕ್ಸ್-ಲೈನ್‌ನಂತಹ ಇತರ ಕೊಡುಗೆಗಳು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯನ್ನು ನೀಡುವ ಭಾಗವಾಗಿದೆ ಎಂದರು.

kia-introduces-5-new-trims-in-seltos-and-sonet

ಇಲ್ಲಿಯವರೆಗೆ, ಕಿಯಾ ಭಾರತದಲ್ಲಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಎಂಬ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ತನ್ನ ಅನಂತಪುರದ ಸ್ಥಾವರದಿಂದ 9.8 ಲಕ್ಷ ದೇಶೀಯ ಮಾರಾಟ ಮತ್ತು 2.5 ಲಕ್ಷ ರಫ್ತು ಸೇರಿದಂತೆ 1.2 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ. ಸದ್ಯ 265 ನಗರಗಳಲ್ಲಿ 588 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 8, 2024, 13:30 [IST]
English summary
Kia introduces 5 new trims in seltos and sonet
Read more on india kia motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+