ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ ಸೆಲ್ಟೋಸ್ ಎಸ್‍ಯುವಿ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗಿ ಭಾರೀ ಸಂಚಲನವನ್ನು ಮೂಡಿಸಿತ್ತು. ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು ಕಿಯಾ ಸೆಲ್ಟೋಸ್ (Kia Seltos ) ಭಾರತದಲ್ಲಿ ಬಿಡುಗಡೆಗೊಳಿಸಿ ಸುನಾಮಿ ಎಬ್ಬಿಸಿದೆ.

ಇದೀಗ ರಿಫ್ರೆಶ್ ಮಾಡೆಲ್ ಕಿಯಾ ಸೆಲ್ಟೋಸ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದ್ದಾರೆ. ಕಿಯಾ ಸೆಲ್ಟೋಸ್ ಎಸ್‍ಯುವಿಯ ಬೆಲೆಯೆನ್ನು ರೂಪಾಂತರವನ್ನು ಅವಲಂಭಿಸಿ ರೂ.67,000 ವರೆಗೆ ಬೆಲೆಯನ್ನು ಹೆಚ್ಚಿಸಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿ HTE, HTK, HTK+, HTX, HTX+, GTX Plus (S), GTX+, X-Line (S), X-Line ನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ.

Kia Seltos

ಕಿಯಾ ಸೆಲ್ಟೋಸ್ ಎಸ್‍ಯುವಿಯ ಬೆಲೆಯನ್ನು ರೂ. 2,000 ರಿಂದ ರೂ. 67,000 ವರೆಗೆ ರೂಪಾಂತರವನ್ನು ಅವಲಂಬಿಸಿ ಬೆಲೆಯನ್ನು ಹೆಚ್ಚಿಸಲಾಗಿದೆ. ಬೆಲೆ ಏರಿಕೆ ಬಳಿಕ ಸೆಲ್ಟೋಸ್ ಬೆಲೆಯು ರೂ.10.90 ಲಕ್ಷದಿಂದ ರೂ. 20.35 ಲಕ್ಷವಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿ ಸೊಗಸಾದ ವಿನ್ಯಾಸ, ವೈಶಿಷ್ಟ್ಯ-ಪ್ಯಾಕ್ಡ್ ಇಂಟಿರಿಯರ್ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ.

ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿ ಬೇಡಿಕೆ ಹೆಚ್ಚಾದಂತೆ, ವಿಭಿನ್ನ ರೂಪಾಂತರಗಳಿಗಾಗಿ ಕಾಯುವ ಅವಧಿಯನ್ನು ವಾಹನ ತಯಾರಕರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ.

Kia Seltos

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಐಎಂಟಿ ಯುನಿಟ್, ಸಿವಿಟಿ ಯುನಿಟ್, ಸಿವಿಟಿ ಯುನಿಟ್, 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ. ಇನ್ನು ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ.

ಈ ಎಂಜಿನ್ 113 bhp ಪವರ್ ಮತ್ತು 144 Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Kia Seltos

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ iMT ಯುನಿಟ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ನೀಡಬಹುದು. ಇನ್ನು ಕಿಯಾ ಸೆಲ್ಟೋಸ್ ಅದರ ಫೀಚರ್ಸ್-ಲೋಡ್ ಮಾಡಲಾದ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್ ವಿಭಿನ್ನವಾಗಿಲ್ಲ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ವಿಕಸನೀಯ ವಿನ್ಯಾಸದ ಥೀಮ್ ಅನ್ನು ಅನುಸರಿಸುತ್ತದೆ. ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟೆಡ್ ಮಾಡೆಲ್ ಅದರ ಸ್ಪೋರ್ಟಿ ವಿನ್ಯಾಸದ ಅಂಶಗಳೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿದೆ.

Kia Seltos

ನವೀಕರಿಸಿದ ಮಾದರಿಯ ಒಳಭಾಗದಲ್ಲಿ ಅದರ ಹೊಸ ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಹೆಚ್ಚು ಹೈಟೆಕ್ ಆಗಿ ಕಾಣುತ್ತದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಗ್ಗೆ ಹೇಳುವುದಾದರೆ, ಪ್ರಮುಖ ಅಂಶವೆಂದರೆ ಈಗ ಲೆವೆಲ್-2 ADAS ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್-ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

More from DriveSpark

Article Published On: Friday, April 5, 2024, 19:14 [IST]
English summary
Kia seltos suv prices hiked in april 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+