ವಿಶ್ವದ ಅತಿದೊಡ್ಡ ಕಾರು ಕಂಪನಿಗಳಿವು! ಭಾರತಕ್ಕಿದೆಯೇ ಸ್ಥಾನ? ಈ ಬ್ರಾಂಡ್‌ಗಳು ನಿಮಗೂ ಗೊತ್ತಾ?

ವಿಶ್ವದ ಅತಿ ದೊಡ್ಡ ಕಾರು ತಯಾರಕರು ಯಾರು, ಯಾವೆಲ್ಲಾ ಕಂಪನಿಗಳು ಮುಂಚೂಣಿಯಲ್ಲಿವೆ ಎಂಬುದರ ಬಗ್ಗೆ ಆಸಕ್ತಿಯಿರುವವರಿಗಾಗಿ ಈ ಲೇಖನ ತರಲಾಗಿದೆ. ಇವಿಗಳಿಂದ ಹಿಡಿದು ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕರವರೆಗೆ, ಮಾರ್ಚ್ 29, 2024ರ ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ವಿಶ್ವದ ಟಾಪ್ 10 ಕಾರು ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ.

1. ಟೆಸ್ಲಾ ( $ 559.85 ಬಿಲಿಯನ್): ಟೆಸ್ಲಾ ಪ್ರಧಾನ ಕಚೇರಿ ಅಮೆರಿಕಾದ ಆಸ್ಟಿನ್‌ನಲ್ಲಿದೆ, ಎಲಾನ್ ಮಸ್ಕ್ ಸ್ಥಾಪಿಸಿದ ಟೆಸ್ಲಾ, ಎಲೆಕ್ಟ್ರಿಕ್ ವಾಹನಗಳು ಮತ್ತು ಸುಸ್ಥಿರ ಇಂಧನ ಪರಿಹಾರಗಳ ಶ್ರೇಣಿಯೊಂದಿಗೆ ಆಟೋಮೋಟಿವ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಅದ್ಭುತ ತಂತ್ರಜ್ಞಾನಕ್ಕೆ ಹೆಸರುವಾಸಿಯಾದ ಟೆಸ್ಲಾ, ಬ್ಯಾಟರಿ ತಂತ್ರಜ್ಞಾನ ಮತ್ತು ಸ್ವಾಯತ್ತ ಚಾಲನೆಯ ಪ್ರಗತಿಯೊಂದಿಗೆ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಮಾಡೆಲ್ ವೈ ನಂತಹ ಜನಪ್ರಿಯ ಕಾರುಗಳನ್ನು ಉತ್ಪಾದಿಸುತ್ತಿದೆ.

largest-car-companies-in-the-world-tesla-ferrari-benz-bmw-byd

2. ಟೊಯೊಟಾ ($ 339.23 ಬಿಲಿಯನ್): ಸದ್ಯ ಟೊಯೊಟಾ ಸಿಇಒ 'ಕೋಜಿ ಸಾಟೊ' ಆಗಿದ್ದಾರೆ, ಪ್ರಧಾನ ಕಚೇರಿ ಜಪಾನ್‌ನ ಟೊಯೊಟಾ ಸಿಟಿಯಲ್ಲಿದೆ. ಜಾಗತಿಕವಾಗಿ ಅತಿದೊಡ್ಡ ವಾಹನ ತಯಾರಕರಲ್ಲಿ ಒಂದಾದ ಟೊಯೊಟಾ ಪ್ರಿಯಸ್‌ನಂತಹ ಮೈಲೇಜ್ ನೀಡುವ ಹೈಬ್ರಿಡ್‌ಗಳಿಂದ ಹಿಡಿದು ಟಕೋಮಾದಂತಹ ಒರಟಾದ ಟ್ರಕ್‌ಗಳವರೆಗೆ ವ್ಯಾಪಕ ಶ್ರೇಣಿಯ ವಾಹನಗಳನ್ನು ಉತ್ಪಾದಿಸುತ್ತದೆ. ಗುಣಮಟ್ಟ ಮತ್ತು ನಾವೀನ್ಯತೆಗೆ ಬದ್ಧತೆಯೊಂದಿಗೆ ಟೊಯೊಟಾ ತನ್ನದೇ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ.

3. ಪೋರ್ಷೆ ($ 90.57 ಬಿಲಿಯನ್): 'ಆಲಿವರ್ ಬ್ಲೂಮ್' ಎಂಬುವರು ಪೋರ್ಷೆ ಸಿಇಒ ಆಗಿದ್ದಾರೆ, ಕಂಪನಿಯ ಪ್ರಧಾನ ಕಚೇರಿ ಜರ್ಮನಿಯ ಸ್ಟಟ್ಗಾರ್ಟ್‌ನಲ್ಲಿದೆ. ಪೋರ್ಷೆ ಆಟೋಮೋಟಿವ್ ಎಂಜಿನಿಯರಿಂಗ್ ಮತ್ತು ವಿನ್ಯಾಸದ ಸಾರಾಂಶವನ್ನು ಪ್ರತಿನಿಧಿಸುತ್ತದೆ. ಐಕಾನಿಕ್ 911 ನಿಂದ ಹಿಡಿದು ಕೇಯೆನ್ ಎಸ್‌ಯುವಿಯವರೆಗೆ, ಪೋರ್ಷೆ ವಾಹನಗಳು ಶಕ್ತಿ ಮತ್ತು ನಿಖರತೆಯನ್ನು ಬೆರೆಸುತ್ತವೆ. ಫೋಕ್ಸ್ ವ್ಯಾಗನ್ ಗ್ರೂಪ್‌ನ ಭಾಗವಾಗಿ, ಪೋರ್ಷೆ ಆಟೋಮೋಟಿವ್ ಉನ್ನತ ಪರ್ಫಾಮೆನ್ಸ್ ಕಾರುಗಳನ್ನು ನೀಡುತ್ತಲೇ ಇದೆ.

largest-car-companies-in-the-world-tesla-ferrari-benz-bmw-byd

4. ಸ್ಟೆಲ್ಲಾಂಟಿಸ್ ($ 85.19 ಬಿಲಿಯನ್): 'ಕಾರ್ಲೋಸ್ ತಾವರೆಸ್' ಸ್ಟೆಲ್ಲಾಂಟಿಸ್‌ನ ಸಿಇಒ ಆಗಿದ್ದಾರೆ, ಕಂಪನಿಯ ಪ್ರಧಾನ ಕಚೇರಿ ನೆದರ್ಲ್ಯಾಂಡ್ಸ್‌ನ ಹೂಫ್ಡಾರ್ಪ್‌ನಲ್ಲಿದೆ. ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್ ಮತ್ತು ಪಿಎಸ್ಎ ಗ್ರೂಪ್‌ನ ವಿಲೀನದಿಂದ ರೂಪುಗೊಂಡ ಸ್ಟೆಲ್ಲಾಂಟಿಸ್, ಜೀಪ್ ಮತ್ತು ರಾಮ್‌ನಂತಹ ಅಮೇರಿಕನ್ ಬ್ರಾಂಡ್‌ಗಳಿಂದ ಹಿಡಿದು ಪ್ಯೂಜೊ ಮತ್ತು ಸಿಟ್ರನ್‌ನಂತಹ ಯುರೋಪಿಯನ್‌ಗಳವರೆಗೆ, ಸ್ಟೆಲ್ಲಾಂಟಿಸ್ ವಿಶ್ವಾದ್ಯಂತ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವ್ಯಾಪಕ ಶ್ರೇಣಿಯ ವಾಹನಗಳನ್ನು ನೀಡುತ್ತಿದೆ.

5. ಮರ್ಸಿಡಿಸ್ ಬೆಂಝ್ ($ 85.07 ಬಿಲಿಯನ್): 'ಓಲಾ ಕಾಲೆನಿಯಸ್' ಪ್ರಸ್ತುತ ಮರ್ಸಿಡಿಸ್ ಬೆಂಝ್ ಸಿಇಒ ಆಗಿದ್ದಾರೆ. ಇದರ ಪ್ರಧಾನ ಕಚೇರಿ ಜರ್ಮನಿಯ ಸ್ಟಟ್ಗಾರ್ಟ್ ನಲ್ಲಿದೆ. ಸೊಗಸಾದ ಸೆಡಾನ್‌ಗಳಿಂದ ಹಿಡಿದು ಪವರ್‌ಫುಲ್‌ ಎಸ್‌ಯುವಿಗಳು ಮತ್ತು ಹೆಚ್ಚಿನ ಪರ್ಫಾಮೆನ್ಸ್ ಎಎಂಜಿ ಮಾದರಿಗಳವರೆಗೆ, ಮರ್ಸಿಡಿಸ್ ಬೆಂಝ್ ವಾಹನಗಳು ಅತ್ಯಾಧುನಿಕತೆ ಮತ್ತು ಎಂಜಿನಿಯರಿಂಗ್ ಉತ್ಕೃಷ್ಟತೆಗೆ ಉದಾಹರಣೆಯಾಗಿವೆ. ಒಂದು ಶತಮಾನಕ್ಕೂ ಹೆಚ್ಚು ಪರಂಪರೆಯನ್ನು ಹೊಂದಿರುವ ಮರ್ಸಿಡಿಸ್ ಬೆಂಝ್ ಆಟೋಮೋಟಿವ್ ಐಷಾರಾಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಲೇ ಇದೆ.

largest-car-companies-in-the-world-tesla-ferrari-benz-bmw-byd

6. ಫೆರಾರಿ ($ 78.62 ಬಿಲಿಯನ್): ಫೆರಾರಿ ಸಿಇಒ 'ಬೆನೆಡೆಟ್ಟೊ ವಿಗ್ನಾ', ಕಂಪನಿಯ ಪ್ರಧಾನ ಕಚೇರಿಯು ಇಟಲಿಯ ಮರನೆಲ್ಲೊ, ಎಮಿಲಿಯಾ-ರೊಮಾಗ್ನಾದಲ್ಲಿದೆ. ಫೆರಾರಿ ಆಟೋಮೋಟಿವ್ ಜಗತ್ತಿನಲ್ಲಿ ಪರ್ಫಾಮೆನ್ಸ್ ಮತ್ತು ಪ್ರತ್ಯೇಕತೆಗೆ ಸಮಾನಾರ್ಥಕವಾಗಿದೆ. ಸೂಪರ್ ಕಾರುಗಳು ಮತ್ತು ರೇಸಿಂಗ್ ಕಾರುಗಳಿಗೆ ಜನಪ್ರಿಯತೆ ಪಡೆದಿದೆ. ರೇಸಿಂಗ್ ಪರಂಪರೆ ಮತ್ತು ರಾಜಿಯಾಗದ ಗುಣಮಟ್ಟದ ಬದ್ಧತೆಯೊಂದಿಗೆ, ಫೆರಾರಿ ವಿಶ್ವಾದ್ಯಂತ ಉತ್ಸಾಹಿಗಳನ್ನು ಆಕರ್ಷಿಸುತ್ತಲೇ ಇದೆ.

7. BYD ($ 78.21 ಬಿಲಿಯನ್): ವಾಂಗ್ ಚುವಾನ್ಫು ಎಂಬುವರು ಪ್ರಸ್ತುತ ಬಿವೈಡಿ ಕಂಪನಿಯ ಸಿಇಒ ಆಗಿದ್ದಾರೆ. ಪ್ರಧಾನ ಕಚೇರಿಯು ಚೀನಾದ ಶೆನ್ಜೆನ್, ಗುವಾಂಗ್ಡಾಂಗ್‌ನಲ್ಲಿದೆ. ಬಿವೈಡಿ (ಬಿಲ್ಡ್ ಯುವರ್ ಡ್ರೀಮ್ಸ್) ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು ಮತ್ತು ನವೀಕರಿಸಬಹುದಾದ ಇಂಧನ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ಚೀನಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಎಲೆಕ್ಟ್ರಿಕ್ ಕಾರುಗಳು ಮತ್ತು ಬಸ್ಸುಗಳಿಂದ ಹಿಡಿದು ಇಂಧನ ಶೇಖರಣಾ ಪರಿಹಾರಗಳವರೆಗೆ, ಬಿವೈಡಿ ಹಸಿರು ಭವಿಷ್ಯಕ್ಕೆ ಪರಿವರ್ತನೆಯನ್ನು ನಡೆಸುತ್ತಿದೆ.

largest-car-companies-in-the-world-tesla-ferrari-benz-bmw-byd

8. BMW ($ 76.12 ಬಿಲಿಯನ್): ಜರ್ಮನಿಯ ಮ್ಯೂನಿಚ್, ಬವೇರಿಯಾದಲ್ಲಿ ನೆಲೆಗೊಂಡಿರುವ ಕಂಪನಿಗೆ ಪ್ರಸ್ತುತ ಆಲಿವರ್ ಜಿಪ್ಸೆ ಎಂಬುವವರು ಸಿಇಒ ಆಗಿದ್ದಾರೆ. ಬಿಎಂಡಬ್ಲ್ಯು ಐಷಾರಾಮಿ, ಪರ್ಫಾಮೆನ್ಸ್ ಮತ್ತು ನಾವೀನ್ಯತೆಯನ್ನು ಸಂಯೋಜಿಸುವ ಪ್ರೀಮಿಯಂ ವಾಹನಗಳಿಗೆ ಹೆಸರುವಾಸಿಯಾಗಿದೆ. 3 ಸೀರಿಸ್ ನಂತಹ ಸ್ಪೋರ್ಟಿ ಸೆಡಾನ್‌ಗಳಿಂದ ಹಿಡಿದು ಎಕ್ಸ್ 5 ನಂತಹ ಸೊಗಸಾದ ಎಸ್‌ಯುವಿಗಳವರೆಗೆ, ಬಿಎಂಡಬ್ಲ್ಯು ವ್ಯಾಪಕ ಶ್ರೇಣಿಯ ಕಾರುಗಳನ್ನು ನೀಡುತ್ತದೆ.

9. ಫೋಕ್ಸ್ ವ್ಯಾಗನ್ ($ 72.33 ಬಿಲಿಯನ್): ಫೋಕ್ಸ್ ವ್ಯಾಗನ್ ಪ್ರಧಾನ ಕಚೇರಿಯು ಜರ್ಮನಿಯ ವೂಲ್ಫ್ಸ್ಬರ್ಗ್, ಲೋವರ್ ಸ್ಯಾಕ್ಸನಿಯಲ್ಲಿದೆ. ಪ್ರಸ್ತುತ ಆಲಿವರ್ ಬ್ಲೂಮ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಗುಣಮಟ್ಟ, ಸುರಕ್ಷತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ. ಫೋಕ್ಸ್ ವ್ಯಾಗನ್, ಆಡಿ ಮತ್ತು ಪೋರ್ಷೆ ಬ್ರಾಂಡ್‌ಗಳ ಅಡಿಯಲ್ಲಿ ವೈವಿಧ್ಯಮಯ ಶ್ರೇಣಿಯ ವಾಹನಗಳನ್ನು ಹೊಂದಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಸುಸ್ಥಿರ ಸಾರಿಗೆಯಲ್ಲಿ ನಾಯಕನಾಗಿ, ಫೋಕ್ಸ್ ವ್ಯಾಗನ್ ಭವಿಷ್ಯವನ್ನು ರೂಪಿಸುತ್ತಲೇ ಇದೆ.

largest-car-companies-in-the-world-tesla-ferrari-benz-bmw-byd

10. ಹೋಂಡಾ ($ 60.59 ಬಿಲಿಯನ್): ಹೋಂಡಾ ಜಾಗತಿಕ ವಾಹನ ತಯಾರಕ ಕಂಪನಿಯಾಗಿದ್ದು, 'ತೋಶಿಹಿರೊ ಮಿಬೆ' ಎಂಬುವರು ಪ್ರಸ್ತುತ ಸಿಇಒ ಆಗಿದ್ದಾರೆ. ಕಂಪನಿಯ ಪ್ರಧಾನ ಕಚೇರಿ ಜಪಾನ್‌ನ ಮಿನಾಟೊ, ಟೋಕಿಯೊದಲ್ಲಿದೆ. ವೈವಿಧ್ಯಮಯ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳೊಂದಿಗೆ, ತನ್ನನ್ನು ತಾನು ಗುರ್ತಿಸಿಕೊಂಡಿದೆ. ಹೋಂಡಾ ವಾಹನಗಳು ತಮ್ಮ ಗುಣಮಟ್ಟ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿವೆ.

More from DriveSpark

Article Published On: Tuesday, April 2, 2024, 15:41 [IST]
English summary
Largest car companies in the world tesla ferrari benz bmw byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+