ಮಹೀಂದ್ರಾ ಥಾರ್ ಎದುರು ಮಾರಾಟದಲ್ಲಿ ಮಕಾಡೆ ಮಲಗಿದ ಮಾರುತಿ ಜಿಮ್ನಿ!

ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಎಷ್ಟು ಜನಪ್ರಿಯ ಅಂದರೆ, ಆಫ್-ರೋಡ್ ಎಸ್‍ಯುವಿ ಹೇಳಿದಾದಗ ಭಾರತೀಯರಿಗೆ ಮೊದಲು ನೆನಪಿಗೆ ಬರುವುದು ಮಹೀಂದ್ರಾ ಥಾರ್ ಹೆಸರು ಆಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ (Mahindra Thar) ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಇತ್ತೀಚೆಗೆ, ಏಪ್ರಿಲ್ ತಿಂಗಳಲ್ಲಿ ವಾಹನ ಮಾರಾಟದ ಅಂಕಿಅಂಶಗಳನ್ನುಎಲ್ಲಾ ಕಂಪನಿಗಳು ಬಿಡುಗಡೆ ಮಾಡಲಾಗಿದೆ. ಅಂಕಿಅಂಶಗಳ ಪ್ರಕಾರ, ಮಹೀಂದ್ರಾ ಥಾರ್ ಮಾದರಿಯ ಮಾರಾಟವು ಮಾರುತಿ ಜಿಮ್ನಿ ಗಿಂತ 24 ಪಟ್ಟು ಹೆಚ್ಚಾಗಿದೆ. ಕಳೆದ ತಿಂಗಳು ಮಹೀಂದ್ರಾ ಥಾರ್ ಮಾದರಿಯ 6,160 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಥಾರ್ ಎಸ್‍ಯುವಿಯ 5,302 ಯುನಿಟ್‌ಗಳ ಮಾರಾಟವಾಗಿತ್ತು. ಇದು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ 16 ಪ್ರತಿಶತದಷ್ಟು ವಾರ್ಷಿಕ ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ.

Mahindra Thar Vs Maruti Jimny

ಮಾರುತಿ ಜಿಮ್ನಿಯ (Maruti Jimny) ಮಾರಾಟದ ವಿಶ್ಲೇಷಣೆಗೆ ಬರುವುದಾದರೆ, ಕಳೆದ ತಿಂಗಳಿನಲ್ಲಿ ಜಿಮ್ನಿಯು ಮಾರಾಟದಲ್ಲಿ ಕುಸಿತ ಕಂಡಿದೆ. ಮಾರುತಿ ಸುಜುಕಿ ಎಪ್ರಿಲ್‌ನಲ್ಲಿ 257 ಯುನಿಟ್‌ಗಳ ಮಾರಾಟವನ್ನು ಮಾತ್ರ ಮಾರಾಟ ಮಾಡಿದೆ. 2023ರ ಜೂನ್ ತಿಂಗಳಿನಲ್ಲಿ ಜಿಮ್ನಿ ಮಾಡೆಲ್ ಅನ್ನು ಬಿಡುಗಡೆ ಮಾಡಿದ್ದರಿಂದ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಅಂಕಿ ಅಂಶವಿಲ್ಲ.

ತಿಂಗಳ-ತಿಂಗಳ ವಿಶ್ಲೇಷಣೆಗೆ ಸಂಬಂಧಿಸಿದಂತೆ, ಜಿಮ್ನಿ 19 ಪ್ರತಿಶತದಷ್ಟು ಮಾರಾಟದಲ್ಲಿ ಕುಸಿತವನ್ನು ಅನುಭವಿಸಿತು. ಮಾರ್ಚ್ ತಿಂಗಳಲ್ಲಿ, ಜಿಮ್ನಿಯ ಒಟ್ಟು ಮಾರಾಟವು 318 ಯುನಿಟ್‌ಗಳಷ್ಟಿತ್ತು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಜಿಮ್ನಿಯ ಮಾರಾಟವು ಕುಸಿಯುತ್ತಿದೆ. ಮತ್ತೊಂದಡೆ ಎದುರಾಳಿ ಮಹೀಂದ್ರಾ ಥಾರ್ ಮಾರಾಟದಲ್ಲಿ ಹೊಸ ದಾಖಲೆಗಳನ್ನು ಬರೆದು ಮುನ್ನುಗುತ್ತಿದೆ.

Mahindra Thar Vs Maruti Jimny

ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಇದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಕೆಲವು ಪ್ರಭಾವಶಾಲಿ ಸ್ಪೆಕ್ಸ್‌ಗಳನ್ನು ಹೊಂದಿದೆ. ಮಹೀಂದ್ರಾ ಥಾರ್ ದೊಡ್ಡ ಪ್ಲಸ್ ಪಾಯಿಂಟ್ ಅದರ ರಗಡ್ ವಿನ್ಯಾಸವಾಗಿದೆ. ಆದರೆ ಜಿಮ್ನಿ ವಿನ್ಯಾಸವು ಹೆಚ್ಚು ಜನರಿಗೆ ಇಷ್ಟವಾಗಿಲ್ಲ.

ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Mahindra Thar Vs Maruti Jimny

ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಈ ಥಾರ್ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ಮಾರುತಿ ಸುಜುಕಿ ಜಿಮ್ನಿಯಲ್ಲಿ ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 104.8 ಪಿಎಸ್ ಪವರ್ ಹಾಗೂ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 10, 2024, 13:51 [IST]
English summary
Mahindra thar vs maruti jimny sales in april 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+