ಮಧ್ಯಮ ವರ್ಗದ ಕಾರು ಕನಸನ್ನು ನನಸು ಮಾಡಿದ ಮಾರುತಿ 800 ರೋಚಕ ಕಥೆ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತವು ಆಗಸ್ಟ್ 15, 1947ರಲ್ಲಿ ಸ್ವಾತಂತ್ರವನ್ನು ಕಂಡಿತು. ಈ ವರ್ಷ ಭಾರತವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ತಯಾರಿ ನಡೆಸುತ್ತಿದೆ. ಈ ವೇಳೆ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ ಕಾರಿನ ಬಗ್ಗೆ ಸ್ವಲ್ಪ ತಿಳಿಯೋಣ. ಅದು ಬೇರೆಯಾವುದು ಅಲ್ಲ ಐಕಾನಿಕ್ ಮಾರುತಿ 800 ಆಗಿದೆ. ಭಾರತದಲ್ಲಿ ಮಾರುತಿ 800 ಕಾರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಐಕಾನಿಕ್ ಮಾರುತಿ 800 (Maruti 800) ಒಂದು ಕಾಲದಲ್ಲಿ ಭಾರತದ ರಸ್ತೆಗಳಲ್ಲಿ ರಾಜನಂತೆ ಮೆರೆದ ಕಾರು.

ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ನನಸು ಮಾಡಿದ ಕೀರ್ತಿ ಮಾರುತಿ 800ಗೆ ಸಲ್ಲುತ್ತದೆ. ಮಾರುತಿ 800 ಭಾರತ ಕಂಡ ಐಕಾನಿಕ್ ಕಾರು ಮತ್ತು ಮಧ್ಯಮ ವರ್ಗದ ಮೆಚ್ಚಿನ ಕಾರ್ ಆಗಿತ್ತು. ಪ್ರೀಮಿಯರ್ ಪದ್ಮಿನಿ, ಹಿಂದೂಸ್ತಾನ್ ಅಂಬಾಸಿಡರ್ ಕಾರುಗಳೇ ಮುಖ್ಯವಾಗಿದ್ದ ಕಾಲದಲ್ಲಿ ಮಾರುತಿ 800 ಕಾರು ಭಾರತದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಮಾರುತಿ ಕಂಪನಿ 2014ರಲ್ಲೇ ಮಾರುತಿ 800 ಕಾರು ಉತ್ಪಾದನೆಯನ್ನು ನಿಲ್ಲಿಸಿದೆ.

Maruti 800

ಆದರೆ, ಈಗಲೂ ನೀವು ಮಾರುತಿ 800 ಕಾರುಗಳು ಓಡಾಡುವುದನ್ನು ನೋಡಬಹುದು. ಅಷ್ಟರ ಮಟ್ಟಿಗೆ ಭಾರತೀಯರಿಗೆ ಮಾರುತಿ 800ರ ಮೇಲೆ ಮೋಹವಿದೆ. ಈಗಲೂ ಈ ಕಾರುಗಳಿಗೆ ಬೇಡಿಕೆ ಇದೆ. ಆದರೆ, ಬದಲಾದ ನಿಯಮಗಳು ಮತ್ತು ಗ್ರಾಹಕರ ಅಭಿರುಚಿಯ ಹಿನ್ನೆಲೆಯಲ್ಲಿ ಕಂಪನಿ ಸ್ಥಗಿತಗೊಳಿಸಬೇಕಾಯಿತು. ಮಾರುತಿ ಸುಜುಕಿಯ ಈ ಚಿಕ್ಕ ಹ್ಯಾಚ್‌ಬ್ಯಾಕ್ ಕಾರು ತಯಾರಕರಿಗೆ ಯಶಸ್ಸಿನ ಹಾದಿಗೆ ಮೊದಲ ಹೆಚ್ಚೆಯಾಗಿತ್ತು.

ಒಂದು ಸಲ ಹಿಂತಿರುಗಿ ನೋಡಿದರೆ, ಭಾರತದಲ್ಲಿ 1980ರ ದಶಕದಲ್ಲಿ ಕಾರು ಹೊಂದುವುದು ಕೇವಲ ಅತ್ಯಂತ ಶ್ರೀಮಂತರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ಆ ಕಾಲದಲ್ಲಿ ಮಾರುತಿ 800 ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ತಾಂತ್ರಿಕವಾಗಿ ಮುಂದುವರಿದಿತ್ತು. ಇದು ಚಿಕ್ಕದಾಗಿ ಹಗುರವಾಗಿತ್ತು ಮತ್ತು ಓಡಿಸಲು ಮತ್ತು ನಿರ್ವಹಿಸಲು ಸುಲಭವಾಗಿತ್ತು. ಅಲ್ಲದೇ ಈ ಕಾರು ಉತ್ತಮ ಮೈಲೇಜ್ ಅನ್ನು ನೀಡಿತು.

Maruti 800

ಈ ಸಣ್ಣ ಕಾರು ಬಜಾಜ್ ಸ್ಕೂಟರ್ ಅನ್ನು ಭಾರತೀಯ ಮಧ್ಯಮ ವರ್ಗದ ಕನಸಿನ ವಾಹನವಾಗಿ ಬದಲಾಯಿಸಿತು. 1983ರ ಏಪ್ರಿಲ್ 9 ರಂದು ಮಾರುತಿ 800 ಕಾರು ಬುಕಿಂಗ್ ಅನ್ನು ತೆರೆದಾಗ, ಅದು ತಕ್ಷಣವೇ ಭಾರತೀಯ ಖರೀದಿದಾರರನ್ನು ಸೆಳೆಯಿತು. ಜೂನ್ 8 ರ ಹೊತ್ತಿಗೆ, ಬುಕಿಂಗ್ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ, ಆರ್ಡರ್‌ಗಳು 1.35 ಲಕ್ಷ ಯುನಿಟ್‌ಗಳನ್ನು ದಾಟಿತು.

ಮಾರುತಿ 800 ಶೀಘ್ರವಾಗಿ ಶ್ರೀಮಂತರು ಮತ್ತು ಮಧ್ಯಮ ವರ್ಗದ ಪ್ರಿಯವಾಯಿತು. ಅದರ ವಿಶ್ವಾಸಾರ್ಹತೆ ಮತ್ತು ನಿರ್ವಹಣೆಯ ಸುಲಭತೆಯು ಭಾರತೀಯರ ಹೃದಯವನ್ನು ಗೆದ್ದಿದೆ. ಜನರು ಈ ಕಾರನ್ನು ಹೊಂದಲು ಎಷ್ಟು ಉತ್ಸುಕರಾಗಿಸಿತು. ಬಿಡುಗಡೆಯ ಸಮಯದಲ್ಲಿ, ಮಾರುತಿ 800 ಕಾರಿಗೆ ರಾಜಧಾನಿಯಲ್ಲಿ ಬೆಲೆಯು 52,500 ರೂ. ಆಗಿತ್ತು. 1983ರ ಡಿಸೆಂಬರ್ 14 ರಂದು ಸಂಜಯ್ ಗಾಂಧಿಯವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾರಿನ ವಿತರಣೆಯನ್ನು ಪ್ರಾರಂಭಿಸಿದರು.

Maruti 800

ಮೊದಲ ಹತ್ತು ಗ್ರಾಹಕರು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಂದಲೇ ತಮ್ಮ ಕೀಗಳನ್ನು ಪಡೆದರು. ಮಾರುತಿ 800 ಖರೀದಿಸಲು ಫಿಯೆಟ್ ಅನ್ನು ಮಾರಾಟ ಮಾಡಿದ ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿ ಹರ್ಪಾಲ್ ಸಿಂಗ್ ಮೊದಲ ಕಾರನ್ನು ಪಡೆದರು. ಮಾರುತಿ 800 ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ತನ್ನ ಜೀವಿತಾವಧಿಯಲ್ಲಿ ನವೀಕರಣಗಳನ್ನು ಪಡೆಯುತ್ತಲೇ ಇತ್ತು. 1986-87ರಲ್ಲಿ ಒಂದು ಲಕ್ಷ ಯೂನಿಟ್‌ಗಳ ಸಂಚಿತ ಉತ್ಪಾದನೆಯನ್ನು ಸಾಧಿಸಿತು ಮತ್ತು 1992-93ರ ವೇಳೆಗೆ ಐದು ಲಕ್ಷ ಯೂನಿಟ್‌ಗಳನ್ನು ದಾಟಿತು.

1996-97ರ ವೇಳೆಗೆ ಇದು ಹತ್ತು ಲಕ್ಷ ಯೂನಿಟ್‌ಗಳಿಗೆ ದ್ವಿಗುಣಗೊಂಡಿತು ಮತ್ತು 1999-2000ರ ವೇಳೆಗೆ ಹದಿನೈದು ಲಕ್ಷ ಯೂನಿಟ್‌ಗಳನ್ನು ತಲುಪಿತು. ಈ ಮಾರುತಿ 800 ಉತ್ಪಾದನೆಯು 2002-03ರಲ್ಲಿ 20 ಲಕ್ಷ ಯುನಿಟ್‌ಗಳನ್ನು ಮತ್ತು 2005-06ರಲ್ಲಿ 25 ಲಕ್ಷ ಯುನಿಟ್‌ಗಳನ್ನು ದಾಟುವುದರೊಂದಿಗೆ ಹೊಸ ಕ್ರಾಂತಿ ಮಾಡಿತು. ಟಾಟಾ ನ್ಯಾನೋದಂತಹ ಇತರರು ನಂತರ ಅದನ್ನು ಸವಾಲು ಹಾಕಲು ಪ್ರಯತ್ನಿಸಿದರೂ, ಇದರ ಪಾರುಪತ್ಯ ನಿಂತಿರಲಿಲ್ಲ.

ಈ ಸಣ್ಣ ಕಾರಿನ ಯಶಸ್ಸಿನಿಂದಾಗಿ ಆ ಸಮಯದಲ್ಲಿ ಸಾರ್ವಜನಿಕ ವಲಯದ ಉದ್ಯಮವಾದ ಮಾರುತಿ ಉದ್ಯೋಗ್ ಲಿಮಿಟೆಡ್ ವಾಹನೋದ್ಯಮದಲ್ಲಿ ಪ್ರಬಲ ಶಕ್ತಿಯಾಯಿತು. ಭಾರತದಾದ್ಯಂತ 27 ಲಕ್ಷ ಯೂನಿಟ್‌ಗಳಷ್ಟು ಮಾರುತಿ 800 ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಿದ ನಂತರ ಮತ್ತು ಲೆಕ್ಕವಿಲ್ಲದಷ್ಟು ಕಿಲೋಮೀಟರ್‌ಗಳನ್ನು ಕ್ರಮಿಸಿದ ನಂತರ, ಕಟ್ಟುನಿಟ್ಟಾದ BS4 ಹೊರಸೂಸುವಿಕೆಯ ಮಾನದಂಡಗಳಿಂದಾಗಿ ಮಾರುತಿ 800 ಉತ್ಪಾದನೆಯು ಅಂತಿಮವಾಗಿ 2014 ರಲ್ಲಿ ಕೊನೆಗೊಂಡಿತು.

More from DriveSpark

Article Published On: Friday, August 2, 2024, 14:05 [IST]
English summary
Maruti 800 revolutionised indian automobile industry details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+