ಹತ್ತು ಲಕ್ಷಕ್ಕೂ ಅಧಿಕ ಮಾರಾಟವಾದ ಎಸ್‌ಯುವಿಗಳು ಯಾವುದು ಗೊತ್ತೇ?: ಟಾಟಾದ ಯಾವ ಕಾರೂ ಇಲ್ಲ!
ಭಾರತ ಎಸ್‌ಯುವಿಗೆ ಒರುವ ಅತೀ ದೊಡ್ಡ ಮಾರುಕಟ್ಟೆ. ವಿಶ್ವದ ಇತರ ಎಲ್ಲೆಡೆಗಿಂತಲೂ ಭಾರತದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಯುವಿ ಮಾದರಿ ಕಾರುಗಳು ಮಾರಾಟವಾಗುತ್ತದೆ. ಇಂತಹ ಭಾರತದಲ್ಲಿ ಕೇವಲ ಮೂರೇ ಮೂಉ ಎಸ್‌ಯುವಿಗಳು ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಅವುಗಳ ಕುರಿತಾಗಿ ನೊಡೋಣ ಬನ್ನಿ.
1. ಮಾರುತಿ ಸುಜುಕಿ ಬ್ರೆಝಾ: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಮಾರುತಿ ಸುಜುಕಿ ಬ್ರೆಝಾ (Maruti Brezza) ಸಹ ಒಂದು. ಈ ಕಾರು ಭಾರತದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ 6 ಮೊನೊಟೋನ್, 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
2. ಹ್ಯುಂಡೈ ಕ್ರೇಟಾ: ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಟ್ರಂಪ್ ಕಾರ್ಡ್ ಈ ಕ್ರೇಟಾ. ಈ ವರ್ಷದ ಆರಂಭದಲ್ಲಿ ಈ ಕಾರಿನ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿತ್ತು. ಈ ಕಾರಿನ ಮೊದಲ ತಲೆಮಾರು ಬಿಡುಗಡೆ ಆದಾಗಿನಿಂದ ಇಲ್ಲಿಯವರೆಗೆ ಸುಮಾರು ೧ ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವ ಈ ಕಾರು, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಕೂಡ ಪಡೆದಿದೆ.
3. ಮಹೀಂದ್ರಾ ಸ್ಕಾರ್ಪಿಯೋ: ಭಾರತೀಯ ಮಾರುಕಟ್ಟೆಯಲ್ಲಿ ಒಂದು ಮಿಲಿಯನ್‌ಗೂ ಅಧಿಕ ಮಾರಾಟವಾದ ಮೂರನೇ ಎಸ್‌ಯುವಿ ಎಂದರೆ ಅದು ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ. ಬಿಡುಗಡೆ ಆದಾಗಿನಿಂದ ಇಲ್ಲಿನವರೆಗೆ ಸದಾ ಸುದ್ದಿಯಾಗುತ್ತಿರುವ ಈ ಕಾರು ಸಾಕಷ್ಟು ಸಂಖ್ಯೆಯಲ್ಲಿ ಈ ಕಾರು ಹೆದ್ದಾರಿಗಳಲ್ಲಿ ಕಾಣ ಸಿಗುತ್ತದೆ.

ಮಹೀಂದ್ರಾ ಕಂಪನಿಯು ಈ ಪ್ರಸಿದ್ದ ಸ್ಕಾರ್ಪಿಯೋವನ್ನು ಮೊದಲ ಬಾರಿಗೆ 2002 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರು ಮಾರುಕಟ್ಟೆಗೆ ಬಂದ ಆ ಕಾಲದಿಂದ ಇಲ್ಲಿಯವರೆಗೆ ಜನಮಾನಸದಲ್ಲಿ ಭಾರೀ ಹೆಸರನ್ನು ಮಾಡಿದೆ. ಇನ್ನು ಕಂಪನಿಯು 2022 ರಲ್ಲಿ ಸ್ಕಾರ್ಪಿಯೋ ಎನ್ ಎಂಬ ಮಾಡೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು.
ಇನ್ನು 2022 ರಲ್ಲಿ ಸ್ಕಾರ್ಪಿಯೋ ಎನ್ (Mahindra Scorpio N) ಅನ್ನು ಮಾರುಕಟ್ಟೆಗೆ ತಂದಾಗ ಜನರಿಂದ ಭಾರೀ ಸ್ಪಂದನೆ ದೊರಕಿತ್ತು. ಈ ಮೂಲಕ ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಭಾರೀ ಅಲೆಯನ್ನು ಎಬ್ಬಿಸಿದೆ. ಸದ್ಯ ಭಾರತದಲ್ಲಿ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಮಾಡೆಲ್‌ಗಳು ಮಾರಾಟಕ್ಕೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








