ಮಾರುತಿಯ ಪ್ರೀಮಿಯಂ ಕಾರು ಕೇವಲ 6.6 ಲಕ್ಷ ರೂ... 30 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್
ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಕೈಗೆಟುಕುವ ಬೆಲೆಗೆ ಅತ್ಯುತ್ತಮ ಕಾರುಗಳನ್ನು ನೀಡುತ್ತಿರುವ ಏಕೈಕ ಬ್ರಾಂಡ್ ಆಗಿದೆ. ಕಂಪನಿಯ ಸ್ಟೈಲಿಷ್ ಹಾಗೂ ಉತ್ತಮ ಮೈಲೇಜ್ ನೀಡುವ ಬಲೆನೋ ಕುರಿತು ಈ ಲೇಖನದಲ್ಲಿ ವಿವರವಾದ ಮಾಹಿತಿಯನ್ನು ತಿಳಿಸಿದ್ದೇವೆ. ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.66 ಲಕ್ಷದಿಂದ ರೂ.9.83 ಲಕ್ಷಗಳಾಗಿದೆ. ಬಲೆನೊ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹಾಗೆಯೇ ಬಲೆನೋ ನಿಮಗೆ ಸಿಎನ್‌ಜಿ ಆಯ್ಕೆಯಲ್ಲೂ ಖರೀದಿಗೆ ಸಿಗುತ್ತದೆ.
ವೈಶಿಷ್ಟ್ಯಗಳು: ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳನ್ನು ಹೊಂದಿರುವ ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಕೀಲೆಸ್ ಎಂಟ್ರಿ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಹಿಲ್-ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ, ಐಎಸ್ ಒಫಿಕ್ಸ್ ಆಂಕೋರೇಜ್‌ಗನ್ನು ಒಳಗೊಂಡಿದೆ.
ಬಣ್ಣದ ಆಯ್ಕೆಗಳು: ಮಾರುತಿ ಬಲೆನೊ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪ್ಯೂಲಂಟಿ ರೆಡ್, ಲಕ್ಸ್ ಬೀಜ್ ಮತ್ತು ಬ್ಲೂಯಿಶ್ ಬ್ಲ್ಯಾಕ್ ಸೇರಿದಂತೆ ಏಳು ಮೊನೊಟೋನ್ ಬಣ್ಣಗಳನ್ನು ಒಳಗಪೊಂಡಿದೆ. ಬಲೆನೊ 318 ಲೀಟರ್ ಬೂಟ್ ಸ್ಪೇಸ್ ಹೊಂದಿದೆ, ಹಾಗೆಯೇ ಇದರ ಸಿಎನ್‌ಜಿ ವೇರಿಯೆಂಟ್‌ನಲ್ಲಿ 55 ಲೀಟರ್ ಬೂಟ್ ಇದೆ.

ಎಂಜಿನ್: 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಅದೇ ಎಂಜಿನ್ ಸಿಎನ್‌ಜಿ ಆವೃತ್ತಿಯು 77.5 ಪಿಎಸ್ ಪವರ್ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಲಭ್ಯವಿದೆ.
ಮೈಲೇಜ್: ಮಾರುತಿ ಸುಜುಕಿ ಬಲೆನೋ 1.2-ಲೀಟರ್ ಮ್ಯಾನುವಲ್ ಕಾರಿನಲ್ಲಿ 22.35 ಕಿ.ಮೀ. ಮೈಲೇಜ್, 1.2-ಲೀಟರ್ ಆಟೋಮ್ಯಾಟಿಕ್ ಕಾರಿನಲ್ಲಿ 22.94 ಕಿ.ಮೀ. ಮೈಲೇಜ್ ಹಾಗೂ 1.2-ಲೀಟರ್ ಸಿಎನ್‌ಜಿ ಮ್ಯಾನುವಲ್ ಕಾರು ಒಂದು ಕೆ.ಜಿ ಸಿಎನ್‌ಜಿನಲ್ಲಿ 30 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಮಾರುತಿ ಬಲೆನೊ ಕಾರು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗಲು ಅದರ ಕೈಗೆಟುಕುವ ಬೆಲೆ ಹಾಗೂ ಮೈಲೇಜ್ ಕಾರಣವಾಗಿದೆ. ಇಂತಹ ಕಾರಿಗೆ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಟೊಯೊಟಾ ಗ್ಲಾಂಝಾ ಮತ್ತು ಸಿಟ್ರೋನ್ ಸಿ3 ಕಾರುಗಳು ಪೈಪೋಟಿ ನೀಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications