ಮಾರುತಿ ಫ್ರಾಂಕ್ಸ್‌ VS ಟೊಯೋಟಾ ಟೈಸರ್: ಎಲ್ಲೆಲ್ಲೂ ನಾನೇ ಎಂಬಂತಿದೆ ಅಂದ ನೆಟ್ಟಿಗರು!

ಮಾರುತಿ ಸುಜುಕಿ ಫ್ರಾಂಕ್ಸ್‌ ಸದ್ಯಕ್ಕೆ ಮಾರುತಿ ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಹಾಟ್‌ ಕೇಕ್‌. ಕೆಲವು ದಿನಗಳ ಹಿಂದೆಯಷ್ಟೇ ಟೊಯೋಟಾ ಕಂಪನಿ ಇದೇ ಕಾರಿನ ತನ್ನ ಆವೃತ್ತಿಯನ್ನು ಅನ್ನು ಅರ್ಬನ್‌ ಕ್ರೂಸರ್‌ ಟೈಸರ್‌ ಎಂಬ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ನಿಮಗೆಲ್ಲಾ ತಿಳಿದಿರುವಂತೆ ಮಾರುತಿ ಸುಜುಕಿಯ ಕೆಲವು ಕಾರುಗಳನ್ನು ಟೊಯೋಟಾ ಮತ್ತು ಟೊಯೋಟಾದ ಕೆಲವು ಕಾರುಗಳನ್ನು ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಸರು ಮತ್ತು ಇನ್ನಿತರ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಮಾರಾಟ ಮಾಡುತ್ತಿದೆ. ಟೈಸರ್ ಸಹ ಅದೇ ಸಾಲಿಗೆ ಸೇರುತ್ತಿದ್ದು, ಇಂದಿನ ಈ ಲೇಖನದಲ್ಲಿ ಫ್ರಾಂಕ್ಸ್‌ ಮತ್ತು ಟೈಸರ್‌ ಕಾರುಗಳ ನಡುವಿನ ವ್ಯತ್ಯಾಸವೇನೆಂದು ನೊಡೋಣ.

Maruti Suzuki Fronx VS Toyota Urban Cruiser Taisor Main Differences To Compare

ಡಿಸೈನ್: ಫ್ರಾಂಕ್ಸ್‌ (Maruti Suzuki Fronx) ಮತ್ತು ಟೈಸರ್‌ ನಡುವೆ ಇರುವ ವ್ಯತ್ಯಾಸಗಳೇನು ಎಂದು ನೊಡಿದಾಗ ಮೊದಲು ಕಾಣುವುದೇ ಈ ಎರಡೂ ಕಾರುಗಳ ನಡುವೆ ಇರುವಂತಹ ಡಿಸೈನ್‌. ಕಾರಿನ ಮುಂಭಾಗದಲ್ಲಿ ಗ್ರಿಲ್‌ಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಕೂಪ್-ಶೈಲಿಯ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಹೊಸ ಮತ್ತು ದಪ್ಪವಾದ ಹನಿಕೂಬ್ ಮೆಶ್ ಗ್ರಿಲ್ ಅನ್ನು ಗ್ಲೋಸ್ ಬ್ಲ್ಯಾಕ್‌ನ ಫಿನಿಶಿಂಗ್ ಅನ್ನು ಟೈಸರ್‌ ಹೊಂದಿದೆ.

ಬೆಲೆ: ಫ್ರಾಂಕ್ಸ್‌ ಮತ್ತು ಟೈಸರ್‌ ನಡುವೆ ಇರುವ ಮತ್ತೊಂದು ವ್ಯತ್ಯಾಸವೆಂದರೆ ಇದರ ಬೆಲೆ. ಮಾರುತಿ ಸುಜುಕಿ ಫ್ರಾಂಕ್ಸ್‌ ಆರಂಭಿಕ ಬೆಲೆ 7.52 ಲಕ್ಷ ಎಕ್ಸ್‌ ಶೋರೂಮ್‌. ಅದೇ ಸಂಧರ್ಭದಲ್ಲಿ ಟೊಯೋಟಾ ಅರ್ಬನ್‌ ಕ್ರೂಸರ್ ಟೈಸರ್‌ (Toyota Urban Cruiser Taisor) ಆರಂಭಿಕ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 7.74 ಲಕ್ಷ ರೂಪಾಯಿಗಳು. ಸಾಧಾರಣವಾಗಿ ಟೊಯೋಟಾ ಕಂಪನಿಯ ಕಾರುಗಳ ಬೆಲೆ ಮಾರುತಿ ಕಾರುಗಳಿಗಿಂತ ಹೆಚ್ಚೇ ಇರುತ್ತದೆ.

Maruti Suzuki Fronx VS Toyota Urban Cruiser Taisor Main Differences To Compare

ಇದು ಬಿಟ್ಟು ಉಳಿದೆಲ್ಲಾ ವಿಷಯಗಳು ಎರಡೂ ಕಾರಿನಲ್ಲಿ ಒಂದೇ ಆಗಿದೆ. ಈ ಟೈಸರ್ ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ, ಕನಕ್ಟಿವಿಟಿ ಕಂಟ್ರೋಲ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ, 360-ಡಿಗ್ರಿ ಕ್ಯಾಮೆರಾ, ಹೆಡ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಡಿಆರ್‌ಎಲ್‌ಗಳೊಂದಿಗೆ ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಇತರ ಫೀಚರ್‌ಗಳು ಮಾರುತಿ ಫ್ರಾಂಕ್ಸ್‌ನಲ್ಲಿಯೂ ಸಿಗುತ್ತದೆ.

ಈ ಎರಡೂ ಕಾರಿನಲ್ಲಿ 1.2-ಲೀಟರ್ ನ್ಯಾಚುರಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಸ್‍ಯುವಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ 89 bhp ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 bhp ಮತ್ತು 148 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿವೆ.

Maruti Suzuki Fronx VS Toyota Urban Cruiser Taisor Main Differences To Compare

ಈ ಎಂಜಿನ್ ಗಳೊಂದಿಗೆ ಟ್ರಾನ್ಸ್‌ಮಿಷನ್ ಆಯ್ಕೆಗಳು ಎರಡೂ ಪವರ್ ಮಿಲ್‌ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅನ್ನು ಒಳಗೊಂಡಿವೆ. ಆದರೆ ನ್ಯಾಚುರಲ್ ಎಂಜಿನ್ 5-ಸ್ಪೀಡ್ AMT ಅನ್ನು ಹೊಂದಿದೆ. ಇನ್ನು ಟರ್ಬೊ ಪೆಟ್ರೋಲ್ 6-ಸ್ಪೀಡ್ ಟಾರ್ಕ್ ಕರ್ನಟವಾರ್ ಅನ್ನು ಪಡೆಯುತ್ತದೆ. ಸಿಎನ್‌ಜಿ ಪವರ್ ಟ್ರೈನ್ ಕೂಡ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 5, 2024, 12:35 [IST]
English summary
Maruti suzuki fronx vs toyota urban cruiser taisor main differences to compare
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+