ಬೈಕ್‌ನಂತೆ ಮೈಲೇಜ್ ಕೊಡುವ ಗ್ರ್ಯಾಂಡ್ ವಿಟಾರಾಗೆ ಭರ್ಜರಿ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ!
ಮಾರುತಿ ಸುಜುಕಿಯ ಪ್ರಸಿದ್ದ ಹೈಬ್ರಿಡ್ ಕಾರು ಮಾದರಿಯಲ್ಲಿ ಗ್ರಾಂಡ್ ವಿಟಾರಾ ಎಲ್ಲರ ಫೇವರೀಟ್. ಒಂದು ದೊಡ್ಡ ಫೈವ್ ಸೀಟರ್ ಮಾರುತಿ ಸುಜುಕಿ ಕಂಪನಿಯ ಕಾರು ಬೇಕೆನ್ನುವವರಿಗೆ, ಮೈಲೇಜ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರಿಗೆ ಗ್ರ್ಯಾಂಡ್ ವಿಟಾರಾ ಹೇಳಿ ಮಾಡಿಸಿದ ಕಾರು ಎಂಬುದು ಪರಿಣಿತರ ಅಭಿಪ್ರಾಯ.
ಇದೀಗ ಈ ಕಾರು ಕೊಳ್ಳುವವರಿಗೆ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಹೀಗೆನ್ನಲು ಕಾರಣವೇನೆಂದರೆ ಮಾರುತಿ ಸುಜುಕಿಯು ಈ ಕಾರಿಗೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡುತ್ತಿದೆ. 1.5-ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್ ನೊಂದಿಗೂ ದೊರೆಯುತ್ತದೆ. ಪೆಟ್ರೋಲ್ ರೂಪಾಂತರಗಳು 19.38 - 27.97 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 26.6 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ.

ಮಾಹಿತಿಗಳ ಪ್ರಕಾರ ಕಂಪನಿಯು ಈ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಕಾರಿಗೆ ಸುಮಾರು 74 ಸಾವಿರ ರೂಗಳ ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಇದರಲ್ಲಿ 20000 ರೂ ಕ್ಯಾಶ್ ಡಿಸ್ಕೌಂಟ್ ಮತ್ತು 50000 ರೂಗಳ ಎಕ್ಸ್‌ಚೇಂಜ್ ಬೋನಸ್ ಸೇರಿದ್ದು, ಇದರಲ್ಲಿ 4 ಸಾವಿರ ರೂಗಳ ಕಾರ್ಪೋರೇಟ್ ಬೋನಸ್ ಸಹ ಸೇರಿದೆ. ಈ ಕಾರಿನ ಡೆಲ್ಟಾ ವೇರಿಯಂಟ್‌ಗೆ 44000 ರೂಗಳ ಡಿಸ್ಕೌಂಟ್ ಲಭ್ಯವಿದೆ.
ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಪೆಟ್ರೋಲ್ ಚಾಲಿತ ಸಿಗ್ಮಾ ರೂ.13.71 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿಯೂ ಹೊರಹೊಮ್ಮಿದೆ. ಇನ್ನುಳಿದ ಪೆಟ್ರೋಲ್ ರೂಪಾಂತರಗಳಾದ ಡೆಲ್ಟಾ ರೂ.15.20 ಲಕ್ಷ, ಡೆಲ್ಟಾ ಎಟಿ ರೂ.16.93 ಲಕ್ಷ, ಜಿಟಾ ರೂ.17.44 ಲಕ್ಷ ಹಾಗೂ ಆಲ್ಫಾ ರೂ.19.29 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ.

ಹಾಗೆಯೇ ಆಲ್ಫಾ ಡಿಟಿ ರೂ.19.49 ಲಕ್ಷ, ಆಲ್ಫಾ ಎಟಿ ರೂ.21.02 ಲಕ್ಷ, ಆಲ್ಫಾ ಎಡಬ್ಲ್ಯೂಡಿ ರೂ.21.14 ಲಕ್ಷ, ಆಲ್ಫಾ ಎಟಿ ಡಿಟಿ ರೂ.21.22 ಲಕ್ಷ, ಆಲ್ಫಾ ಎಡಬ್ಲ್ಯೂಡಿ ಡಿಟಿ ರೂ.21.34 ಲಕ್ಷ, ಜಿಟಾ ಪ್ಲಸ್ ಹೈಬ್ರಿಡ್ ಸಿವಿಟಿ ರೂ.22.90 ಲಕ್ಷ ಮತ್ತು ಜಿಟಾ ಪ್ಲಸ್ ಹೈಬ್ರಿಡ್ ಸಿವಿಟಿ ಡಿಟಿ ರೂ.23.10 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ.
ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ ರೂ.24.75 ಲಕ್ಷ, ಟಾಪ್ ಮಾಡೆಲ್ (ಗರಿಷ್ಠ ಶ್ರೇಣಿ) ಆಲ್ಫಾ ಪ್ಲಸ್ ಹೈಬ್ರಿಡ್ ಸಿವಿಟಿ ಡಿಟಿ ರೂ.25.17 ಲಕ್ಷ, ಹೆಚ್ಚಿನ ಗ್ರಾಹಕರು ಖರೀದಿಸುವ ಸಿಎನ್‌ಜಿ ಚಾಲಿತ ಡೆಲ್ಟಾ (ಬೇಸ್ ವೇರಿಯೆಂಟ್) ರೂ.16.37 ಲಕ್ಷ ಹಾಗೂ ಜಿಟಾ ಸಿಎನ್‌ಜಿ ಮಾದರಿಯು ರೂ.18.61 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ.
ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ FWD (ಫ್ರಂಟ್ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications