Maruti Suzuki: ಈ ಕಾರಿಗೆ ದೊಡ್ಡ ಡಿಸ್ಕೌಂಟ್.. 5.49 ಲಕ್ಷ ಆರಂಭಿಕ ಬೆಲೆ.. 5-ಸೀಟರ್, 20 ಕಿ.ಮೀ ಮೈಲೇಜ್!

ಮಾರುತಿ ಸುಜುಕಿ (Maruti Suzuki) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ನೆಕ್ಸಾ (NEXA) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಇಗ್ನಿಸ್ (Ignis) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಅಕ್ಟೋಬರ್‌ನಲ್ಲಿ ಈ ಕಾರಿಗೆ ದೊಡ್ಡಮಟ್ಟ ರಿಯಾಯಿತಿ ಕೂಡ ಲಭ್ಯವಿದ್ದು, ದೀಪಾವಳಿ ಹಬ್ಬಕ್ಕೆ ಹೊಸ ಇಗ್ನಿಸ್ ಹ್ಯಾಚ್‌ಬ್ಯಾಕ್‌ನ್ನು ತೆಗೆದುಕೊಳ್ಳಬೇಕು ಎಂದಿರುವ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬನ್ನಿ.. ನೂತನ ಕಾರು ಪಡೆದಿರುವ ಹಣಕಾಸಿನ ಪ್ರಯೋಜನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಹ್ಯಾಚ್‌ಬ್ಯಾಕ್ ಸಿಗ್ಮಾ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರ ಒಟ್ಟು ರೂ.56,100 ವರೆಗೆ ರಿಯಾಯಿತಿ ಹೊಂದಿದೆ. ಅದರಲ್ಲಿ ರೂ.35,000 ಗ್ರಾಹಕ ಕೊಡುಗೆ (Consumer Offer) ಹಾಗೂ ರೂ.15,000 ವಿನಿಮಯ ಬೋನಸ್ (Exchange Bonus) ಸೇರಿದಂತೆ ಹಲವು ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿದೆ.

Maruti Suzuki Ignis Car Have Big Discount Details

ಈ ಇಗ್ನಿಸ್ ಕಾರಿನ ಸಿಗ್ಮಾ (Sigma) ಹೊರತುಪಡಿಸಿದ ಎಲ್ಲ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರಗಳು, ಬರೋಬ್ಬರಿ ರೂ.46,100 ವರೆಗೆ ರಿಯಾಯಿತಿ ಪಡೆದಿವೆ. ಇದರೊಳಗೆ ರೂ.25,000 ಗ್ರಾಹಕ ಕೊಡುಗೆ ಅಥವಾ ನಗದು ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಒಳಗೊಂಡಂತೆ ಹಲವು ಹಣಕಾಸಿನ ಪ್ರಯೋಜನಗಳು ಕೂಡ ಸೇರಿವೆ.

ಇದೇ ಮಾರುತಿ ಇಗ್ನಿಸ್ ಹ್ಯಾಚ್‌ಬ್ಯಾಕ್‌ನ ಎಲ್ಲ ಎಎಂಟಿ (ಆಟೋಮೇಟೆಡ್ ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರಗಳು ಒಟ್ಟು ರೂ.51,100 ರಿಯಾಯಿತಿ ಹೊಂದಿವೆ. ಅದರಲ್ಲಿ ರೂ.30,000 ಗ್ರಾಹಕ ಕೊಡುಗೆ ಮತ್ತು ರೂ.15,000 ವಿನಿಮಯ ಬೋನಸ್ ಸೇರಿದಂತೆ ವಿವಿಧ ಹಣಕಾಸಿನ ಪ್ರಯೋಜನಗಳು ಇವೆ. ಕಳೆದ ತಿಂಗಳು (ಸೆಪ್ಟೆಂಬರ್ - 2024) 2,514 ಯುನಿಟ್ ಇಗ್ನಿಸ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಆಗಸ್ಟ್‌ನಲ್ಲಿ ಮಾರಾಟಗೊಳಿಸಿದ 2,464 ಯುನಿಟ್‌ಗೆ ಹೋಲಿಕೆ ಮಾಡಿದರೆ, ತಿಂಗಳಿಂದ ತಿಂಗಳಿಗೆ ಶೇಕಡ 1.99% ಬೆಳವಣಿಗೆಯಾಗಿದೆ.

ಸದ್ಯ, ದೇಶೀಯ ಗ್ರಾಹಕರಿಗೆ ಲಭ್ಯವಿರುವ ಮಾರುತಿ ಸುಜುಕಿ ಇಗ್ನಿಸ್ ಹ್ಯಾಚ್‌ಬ್ಯಾಕ್ ರೂ.5.49 ರಿಂದ ರೂ.8.06 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್ ಮತ್ತು ಗ್ಲಿಸ್ಟೆನಿಂಗ್ ಗ್ರೇ ಒಳಗೊಂಡಂತೆ ಹತ್ತಾರು ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಇಗ್ನಿಸ್ ಕಾರು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 20.89 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 - ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಪ್ರವಾಸದ ವೇಳೆಯಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 260 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ನೂತನ ಮಾರುತಿ ಸುಜುಕಿ ಇಗ್ನಿಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಫ್ರಂಟ್ ಡುಯಲ್ ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, October 13, 2024, 9:00 [IST]
English summary
Maruti suzuki ignis car have big discount details
Read more on maruti suzuki india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+