Maruti Suzuki: ಕಡಿಮೆ ಬೆಲೆಯ 3 ಕಾರುಗಳು ಬಿಡುಗಡೆ ಸಜ್ಜಾಗುತ್ತಿವೆ!
ಭಾರತದಲ್ಲಿ ಮಾರುತಿ ಸುಜುಕಿಯು 2024 - 2025ರ ನಡುವೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಮೂರು ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಎಲೆಕ್ಟ್ರಿಕ್ ಮಾದರಿಗಳು ಸೇರಿದಂತೆ ಹೊಸ ಪ್ಯಾಸೆಂಜರ್ ವಾಹನಗಳನ್ನು ಕೂಡ ಅಭಿವೃದ್ಧಿಪಡಿಸುತ್ತಿದೆ. ಮೂರು ಕಾರುಗಳ ಮಾಹಿತಿ ಇಲ್ಲಿದೆ.
1.ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್ ಲಿಫ್ಟ್: ಆಂತರಿಕವಾಗಿ ವೈಟಿಬಿ ಎಂದು ಕರೆಯಲ್ಪಡುವ ನವೀಕರಿಸಿದ ಮಾರುತಿ ಸುಜುಕಿ ಫ್ರಾಂಕ್ಸ್ 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. ಈ ಮಿಡ್ - ಲೈಫ್ ನವೀಕರಣವು ಬ್ರಾಂಡ್ ನ ಹೆಚ್ಚು ಸ್ಥಳೀಕರಿಸಿದ ಹೈಬ್ರಿಡ್ ಎಲೆಕ್ಟ್ರಿಕ್ ಪವರ್ ಟ್ರೇನ್ ಅನ್ನು ಪರಿಚಯಿಸಲಿದೆ.

ಈ ನವೀಕರಣದ ಪ್ರಮುಖ ಹೈಲೈಟ್ ಎಂದರೆ 1.2 ಲೀಟರ್ ಝಡ್ ಸರಣಿಯ ಪೆಟ್ರೋಲ್ ಎಂಜಿನ್ ಆಗಿದ್ದು, ಇದು ವರ್ಧಿತ ದಕ್ಷತೆಗಾಗಿ ರೇಂಜ್ ಎಕ್ಸ್ಟೆಂಡರ್ ಆಗಿ ಕಾರ್ಯನಿರ್ವಹಿಸಲಿದೆ. ಈ ಕಾರಿನಲ್ಲಿ ಯಾವುದೇ ಬಾಹ್ಯ ಮತ್ತು ಒಳಾಂಗಣ ಬದಲಾವಣೆಗಳು ಇರುವುದಿಲ್ಲ. ಕೆಲವು ಕಾಸ್ಮೆಟಿಕ್ ಬದಲಾವಣೆಗಳು ಮಾತ್ರ ಇರಲಿವೆ ಎಂದು ಹೇಳಲಾಗುತ್ತಿದೆ.
2. ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್: ಇದೇ ವರ್ಷದ ಮಧ್ಯದಲ್ಲಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ತನ್ನ ಒಡಹುಟ್ಟಿದ ಸ್ವಿಫ್ಟ್ ಮಾದರಿ ಜೊತೆಗೆ ಫೇಸ್‌ಲಿಫ್ಟ್ ಪಡೆದುಕೊಂಡು ಬಿಡುಗಡೆಯಾಗಲಿದೆ. ಡಿಜೈರ್ ದೀರ್ಘಕಾಲದವರೆಗೆ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್ ಆಗಿದೆ. ಹೊಸ ಮಾದರಿಯು ಅಗ್ರಸ್ಥಾನದಲ್ಲಿ ತನ್ನ ನಿಲುವನ್ನು ಬಲಪಡಿಸಲು ಮಾತ್ರ ಸಹಾಯ ಮಾಡುತ್ತದೆ. ಎರಡೂ ಮಾದರಿಗಳು ಆರಂಭಿಕ ಬಿಡುಗಡೆಯಿಂದಲೇ ಸಿಎನ್‌ಜಿ ರೂಪಾಂತರಗಳೊಂದಿಗೆ ಲಭ್ಯವಿರುತ್ತವೆ.

ಭಾರತದಲ್ಲಿ ಸನ್ ರೂಫ್ ಪಡೆದ ಮೊದಲ ಸಬ್-4 ಮೀಟರ್ ಸೆಡಾನ್ ಆಗಲಿದೆ ಎಂದು ಸೂಚಿಸುತ್ತಿದೆ. ಮುಂಬರುವ ಸ್ವಿಫ್ಟ್ ಗಿಂತ ಭಿನ್ನವಾಗಿ ಹೊರಭಾಗವು ಬದಲಾವಣೆಗಳನ್ನು ಹೊಂದಿರುತ್ತದೆ. 1.2 ಲೀಟರ್ ಝಡ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಎಂಟಿ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ನೀಡಲಾಗುವುದು.
3. ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್: ಕಳೆದ ವರ್ಷದ ಕೊನೆಯಲ್ಲಿ ಟೋಕಿಯೊದಲ್ಲಿ ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಈಗ ಭಾರತೀಯ ರಸ್ತೆಗಳಿಗೆ ಇಳಿಯಲು ಸಜ್ಜಾಗುತ್ತಿದೆ. ಇದು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಒಳಗೆ ಮತ್ತು ಹೊರಗೆ ಭರವಸೆ ನೀಡುವ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳಿಂದ ತುಂಬಿರುತ್ತದೆ ಎನ್ನಲಾಗಿದೆ.

ಹೊಸ 1.2 ಲೀಟರ್ ಝಡ್ ಸರಣಿಯ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೂಡ ಈ ಸಾಲಿಗೆ ಸೇರಲಿದೆ ಎಂಬ ವದಂತಿಗಳಿವೆ. ಇದರ ಮತ್ತೊಂದು ಹೈಲೆಟ್ ಎಂದರೆ ಈ ಕಾರು ಭರ್ಜರಿ ಮೈಲೇಜ್ ನೀಡಲಿದೆ ಎಂದು ಹೇಲಲಾಗುತ್ತಿದೆ. ಮೂಲಗಳ ಪ್ರಕಾರ ಇದು ಬರೋಬ್ಬರಿ 30 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಲಲಾಗುತ್ತಿದೆ. ಈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications