ಒದ್ದಾಡುತ್ತಿದ್ದ 6 ಟನ್ ತೂಕದ ಟ್ರಕ್ ಎಳೆದ ಮಾರುತಿ ಜಿಮ್ನಿ: ಟೀಕಾಕಾರರ ಬಾಯಿ ಮುಚ್ಚಿಸಿದ ರಣಬೇಟೆಗಾರ!
ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ ಮಾರುತಿ ಕಾರುಗಳನ್ನು ಟೀಕೆ ಮಾಡುವವರೇ ಹೆಚ್ಚು. ಗಟ್ಟಿಯಾಗಿರದ, ಅಂಡರ್ ಪರ್ಫಾಮೆನ್ಸ್ ನೀಡುತ್ತದೆ ಎಂದು ಹಲವರು, ಹಲವು ಸಂಧರ್ಭಗಳಲ್ಲಿ ಮಾರುತಿ ಕಾರುಗಳನ್ನು ತೆಗಳುವವರೇ ಹೆಚ್ಚು. ಆದರೆ ಇವುಗಳನ್ನು ಮಾರುತಿ ಕಾರುಗಳು ಆಗಾಗ ಮೆಟ್ಟಿ ನಿಲ್ಲುತ್ತಲೇ ಬಂದಿದೆ. ಇದೀಗ ಈ ಪಟ್ಟಿಗೆ ಜಿಮ್ನಿಯೂ ಸೇರುತ್ತಿದೆ.
ಹೌದು, ಇಲ್ಲೊಂದು ಕಡೆ ಮಾರುತಿ ಸುಜುಕಿ ಜಿಮ್ನಿ ಬಹುದೊಡ್ಡ ಟ್ರಕ್ ಒಂದನ್ನು ಎಳೆದು ಸಹಾಯ ಮಾಡಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಂಜುಗಡ್ಡೆಯಿಂದ ಕೂಡಿದ್ದ ರಸ್ತೆಯಲ್ಲಿ ಸುಮಾರು ೬ ಟನ್ ತೂಕವಿದ್ದ ಟ್ರಕ್ ಮುಂದಕ್ಕೆ ಹೋಗಲು ಹೆಣಗಾಡುತ್ತಿತ್ತು. ಅಲ್ಲಿದ್ದ ಫಾರ್ಚ್ಯೂನರ್ ಸಹ ಇದೇ ರೀತಿ ಮುಂದಕ್ಕೆ ಹೋಗಲು ಸಾಧ್ಯವಾಗದೇ ಒದ್ದಾಡುತ್ತಿತ್ತು.

ಈ ಸಂಧರ್ಬದಲ್ಲಿ ಸಹಾಯಕ್ಕೆ ಆಗಮಿಸಿದ ಜಿಮ್ನಿ, ಈ ಎರಡೂ ವಾಹನಗಳನ್ನು ಒಂದೇ ಸಮಯದಲ್ಲಿ ಎಳೆಯಲು ಪ್ರಯತ್ನಿಸಿತು. ಸತತ ಪ್ರಯತ್ನಗಳ ನಂತರ ಮಾರುತಿ ಸುಜುಕಿ ಜಿಮ್ನಿ ಈ ಎರಡೂ ವಾಹನಗಳನ್ನು ಎಳೆತರುವಲ್ಲಿ ಸಫಲವಾಯಿತು ಎಂದೇ ಹೇಳಬಹುದು. ಈ ಮೂಲಕ ಘಟಾನುಘಟಿಗಳ ಮುಂದೆ ತನ್ನ ಶಕ್ತಿಯನ್ನು ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಸಾಬಿತು ಮಾಡಿತು ಎನ್ನಬಹುದು.
ವಿಡಿಯೋದಲ್ಲಿ ಕಾಣುವ ಫಾರ್ಚ್ಐನರ್ ಸಹ ಸಾಮಾನ್ಯ ವಾಹನವಲ್ಲ. ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

ಇನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








