ಬೈಕಿನಂತೆ ಮೈಲೇಜ್ ನೀಡುವ ಸಾಮಾನ್ಯ ಜನರ ಅಂಬಾರಿಗೆ ಗ್ರಾಹಕರಿಂದ ನಿರೀಕ್ಷಿಸದ ಟ್ವಿಸ್ಟ್!

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಬರೊಬ್ಬರಿ ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ಮಾರುತಿ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಇದು ಉತ್ತಮ ಬೇಡಿಕೆಯಿಂದ ಮಾರಾಟ ಆಗುತ್ತಿದೆ. ಆದರೆ 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಗನ್ಆರ್ ಮಾದರಿಯ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಕಳೆದ ತಿಂಗಳು ಮಾರುತಿ ಸುಜುಕಿ (Maruti Suzuki) ಕಂಪನಿಯ ವ್ಯಾಗನ್‍ಆರ್ ಮಾದರಿಯ 13,339 ಯುನಿಟ್ ಗಳು ಮಾರಾಟವಾಗಿವೆ.

ಇನ್ನು 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಗನ್ಆರ್ ಮಾದರಿಯ 16,250 ಯುನಿಟ್ ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18 ರಷ್ಟು ಕುಸಿತವನ್ನು ಕಂಡಿದೆ. ಈ ಮಾರುತಿ ವ್ಯಾಗನ್ಆರ್ (Maruti WagonR) ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನ ಆರಂಭಿಕ ಬೆಲೆಯು ಕೇವಲ 5.55 ಲಕ್ಷವಾಗಿದೆ.

Maruti Suzuki Wagonr

ಸದ್ಯಕ್ಕೆ ಮಾರುತಿ ಸುಜುಕಿ ವ್ಯಾಗನ್‍ಆರ್ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾರುತಿ ವ್ಯಾಗನ್ಆರ್ ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಮೋಟಾರ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ.

ಎಲ್ಲಾ ತಂತ್ರಜ್ಞಾನಗಳು ಅದರ ಮೈಲೇಜ್ ಅನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ 1.0 ಲೀಟರ್ ಲೀಟರ್, ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. 1.0 ಲೀಟರ್ ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Maruti Suzuki Wagonr

ಈ ಕಾರಿನಲ್ಲಿ ದೊಡ್ಡ 1.2ಲೀಟರ್ ಇನ್‌ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ 88 bhp ಪವರ್ ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು Apple CarPlay ಕನೆಕ್ಟಿವಿಯೊಂದಿಗೆ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟ್ಯಾಕೋಮೀಟರ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳನ್ನು ಕೂಡ ಒಳಗೊಂಡಿವೆ.

ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಸ್ವಲ್ಪ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ಮಾರುತಿ ಸುಜುಕಿ ವ್ಯಾಗನ್ ಆರ್ ಅತ್ಯುತ್ತಮ ಮೈಲೇಜ್ ಅನ್ನು ಸಹ ನೀಡುತ್ತದೆ. ಮಾರುತಿ ಸುಜುಕಿ ವ್ಯಾಗನ್ ಆರ್‌ನ ಪೆಟ್ರೋಲ್-ಮ್ಯಾನ್ಯುವಲ್ ರೂಪಾಂತರಗಳು 24.35 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಈ ಕಾರಿನ ಪೆಟ್ರೋಲ್-ಎಜಿಎಸ್ ರೂಪಾಂತರಗಳು ಪ್ರತಿ ಲೀಟರ್‌ಗೆ 25.19 ಕಿಮೀ ಮೈಲೇಜ್ ನೀಡಲಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

Maruti Suzuki Wagonr

ಇವೆಲ್ಲವುಗಳ ಮೇಲೆ, ಮಾರುತಿ ಸುಜುಕಿ ವ್ಯಾಗನ್ ಆರ್‌ನ ಸಿಎನ್‌ಜಿ ರೂಪಾಂತರಗಳು ಪ್ರತಿ ಕೆಜಿಗೆ 33.47 ಕಿಮೀ ಮೈಲೇಜ್ ನೀಡುತ್ತವೆ ಎಂದು ವರದಿಯಾಗಿದೆ. ಇದರಿಂದಾಗಿ ಅನೇಕ ಜನರು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಇದರ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಆದರೆ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಏರಿಕೆಯನ್ನು ಕಾಣಬಹುದು. ಮಾರುತಿ ವ್ಯಾಗನ್‍ಆರ್ ಕಡಿಮೆ ಬೆಲೆಗೆ ಲಭ್ಯವಿರುವುದು ಮತ್ತು ಹೆಚ್ಚಿನ ಮೈಲೇಜ್ ನೀಡುತ್ತಿರುವುದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಗ್ರಾಹಕರಲ್ಲಿ ಭಾರೀ ಸ್ವೀಕಾರ ಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಮಾರುತಿ ಸುಜುಕಿ ಕಂಪನಿಯು ಟಾಲ್-ಬಾಯ್ ಹ್ಯಾಚ್‌ಬ್ಯಾಕ್‌ನ ಫ್ಲೆಕ್ಸ್-ಫ್ಯೂಯಲ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ , ಇದರ ಉತ್ಪಾದನೆಯು 2025 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

Article Published On: Wednesday, October 9, 2024, 16:57 [IST]
English summary
Maruti suzuki wagonr sales in sep 2024 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+