ಭಾರತದಲ್ಲಿ ಮೂರನೇ ಮರ್ಸಿಡಿಸ್ ಕನ್ವರ್ಟಿಬಲ್ ಕಾರು ಬಿಡುಗಡೆ: ವಿಶೇಷತೆಗಳೇನು?

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗೆ ಸಿಎಲ್ಇ ಕ್ಯಾಬ್ರಿಯೋಲೆಟ್ ಕಾರನ್ನು ಬಿಡುಗಡೆ ಮಾಡಿದೆ. ಇದನ್ನು ಒಂದೇ ವೇರಿಯೆಂಟ್‌ನಲ್ಲಿ ನೀಡಲಾಗುತ್ತದ್ದು, ಇದರ ಬೆಲೆಯು ರೂ.1.10 ಕೋಟಿ (ಎಕ್ಸ್ ಶೋರೂಂ) ಆಗಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಕಾರನ್ನು ಬುಕ್ ಮಾಡಬಹುದು. ಇ 53 ಕ್ಯಾಬ್ರಿಯೋಲೆಟ್ ಮತ್ತು ಎಸ್‌ಎಲ್ 55 ರೋಡ್‌ಸ್ಟರ್ ನಂತರ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಪರಿಚಯಿಸಿರುವ ಮೂರನೇ ಕನ್ವರ್ಟಿಬಲ್ ಮಾದರಿಯಾಗಿದೆ. ಸಿಎಲ್ಇ ಕ್ಯಾಬ್ರಿಯೋಲೆಟ್ ಅನ್ನು ಜುಲೈ 2023 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಗಿದ್ದು, ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ.

ಇದು ಮರ್ಸಿಡಿಸ್ ಮಾಡ್ಯುಲರ್ ರಿಯರ್ ಆರ್ಕಿಟೆಕ್ಚರ್ (ಎಂಆರ್ಎ) ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ವಿನ್ಯಾಸದ ವಿಷಯದಲ್ಲಿ, ಸಿಎಲ್ಇ ಈಗ ಮಾರಾಟದಲ್ಲಿರುವ ಇ-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೋಲೆಟ್‌ಗೆ ಹೋಲುತ್ತದೆ. ಇದು ಶಾರ್ಕ್-ಮೂಗಿನಂತಹ ಉದ್ದನೆಯ ಬಾನೆಟ್ ಹೊಂದಿರುವ ದೊಡ್ಡ ಗ್ರಿಲ್ ಅನ್ನು ಮುಂಭಾಗದಲ್ಲಿ ಪಡೆದಿದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.

mercedes-benz-cle-cabriolet-price-features-specifications

ಸಿಎಲ್ಇ ಕ್ಯಾಬ್ರಿಯೋಲೆಟ್ ವಿಶೇಷತೆಗಳು: ಇದನ್ನು ಒಂದೇ ವೇರಿಯೆಂಟ್‌ನಲ್ಲಿ ನೀಡಲಾಗುತ್ತೆದೆಯಾದರೂ ಗ್ರೇ / ಬ್ಲಾಕ್, ಪವರ್ ರೆಡ್ / ಬ್ಲಾಕ್ ಎಂಬ ಮೂರು ಲೆದರ್ ಅಪ್ಹೋಲ್ಸ್ಟರಿಯೊಂದಿಗೆ ನೀಡಲಾಗುತ್ತದೆ. ಸಾಫ್ಟ್ ಟಾಪ್ ಅನ್ನು ಬ್ಲಾಕ್ ಮತ್ತು ರೆಡ್ ಎಂಬ ಎರಡು ಫ್ಯಾಬ್ರಿಕ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಕ್ಯಾಬ್ರಿಯೋಲೆಟ್ 2 + 2 ಆಸನ ವಿನ್ಯಾಸವನ್ನು ಹೊಂದಿದೆ, ಕ್ಯಾಬಿನ್‌ನ ಮುಖ್ಯ ಹೈಲೈಟ್ 11.9-ಇಂಚಿನ ಪೋರ್ಟ್ರೇಟ್ ಶೈಲಿಯ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ ಮತ್ತು ಸಂಪೂರ್ಣ ಡಿಜಿಟಲ್ 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಗಿದೆ. ಜೊತೆಗೆ ಟಿಲ್ಟಬಲ್ ಇನ್ಫೋಟೈನ್ಮೆಂಟ್ ಸ್ಕ್ರೀನ್, ಎಎಂಜಿ ಸ್ಪೋರ್ಟ್ಸ್ ಸೀಟ್‌ಗಳು, ಪ್ಯಾಡಲ್‌ಗಳೊಂದಿಗೆ ಎಎಂಜಿ ನಪ್ಪಾ ಲೆದರ್ ಸ್ಟೀರಿಂಗ್ ವೀಲ್ ನೀಡಲಾಗಿದೆ.

mercedes-benz-cle-cabriolet-price-features-specifications

17 ಸ್ಪೀಕರ್‌ಗಳೊಂದಿಗೆ ಬರ್ಮಸ್ಟರ್ 3ಡಿ ಸೌಂಡ್ ಸಿಸ್ಟಮ್, ಎಆರ್ ನ್ಯಾವಿಗೇಷನ್, ಎಚ್‌ಯುಡಿ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ಪಾರ್ಕ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಅಸಿಸ್ಟ್ ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೆಗ್ಮೆಂಟ್ ಫಸ್ಟ್ ಸೆಂಟರ್ ಏರ್ ಬ್ಯಾಗ್ ಅನ್ನು ಸಹ ಪಡೆದುಕೊಂಡಿದೆ.

ಸಿಎಲ್ಇ ಕ್ಯಾಬ್ರಿಯೋಲೆಟ್ 2.0-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 255 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. 4ಮ್ಯಾಟಿಕ್ ಎಡಬ್ಲ್ಯುಡಿ ಸಿಸ್ಟಂ, ಎಎಂಜಿ ಸ್ಪೋರ್ಟ್ಸ್ ಸಸ್ಪೆಂಷನ್ ಮತ್ತು ಸ್ಪೋರ್ಟ್ಸ್ ಡೈರೆಕ್ಟ್ ಸ್ಟೀರಿಂಗ್ ಸಿಸ್ಟಂ ಇತರ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ.

mercedes-benz-cle-cabriolet-price-features-specifications

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಮರ್ಸಿಡಿಸ್ ಸಿಎಲ್ ಇ ಕ್ಯಾಬ್ರಿಯೋಲೆಟ್ ಜೊತೆಗೆ ಎಎಂಜಿ ಜಿಎಲ್ ಸಿ 43 4ಮ್ಯಾಟಿಕ್ ಕೂಪೆ ಕಾರನ್ನು ಕೂಡ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ವರ್ಷ ಮರ್ಸಿಡಿಸ್ ಬೆಂಝ್ ಸರಣಿಯಲ್ಲಿರುವ ಆರು ಹೊಸ ಬಿಡುಗಡೆಗಳಲ್ಲಿ ಈ ಎರಡೂ ಕಾರುಗಳು ಸೇರಿವೆ. ಸಿಬಿಯು ಮಾರ್ಗದ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, August 10, 2024, 9:30 [IST]
English summary
Mercedes benz cle cabriolet price features specifications
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+