ಎಂಜಿ ಹೆಕ್ಟರ್ ಸ್ನೋಸ್ಟಾರ್ಮ್, ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೆನು?
ಜೆಎಸ್ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಹೆಕ್ಟರ್ ಸ್ನೋಸ್ಟಾರ್ಮ್ ಮತ್ತು 2024ರ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಹೆಕ್ಟರ್ ಸ್ನೋಸ್ಟಾರ್ಮ್ 5, 6 ಮತ್ತು 7-ಸೀಟರ್ ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.21,52,800 ಗಳಾಗಿದೆ. ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ 2024 ಲಿಮಿಟೆಡ್ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.13,44,800ಗಳಾಗಿದೆ. ಎರಡೂ ಕಾರುಗಳ ಇಂಟೀರಿಯರ್ ಹಾಗೂ ಎಕ್ಸ್‌ಟೀರಿಯರ್ ಡಿಸೈನ್ ಸೆರಿದಂತೆ ಫೀಚರ್‌ಗಳನ್ನು ಇಲ್ಲಿ ತಿಳಿಯೋಣ.
ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಇಂಟೀರಿಯರ್: ಒಳಾಂಗಣವು ಕಾಂಟ್ರಾಸ್ಟ್ ರೆಡ್ ಸ್ಟಿಚಸ್‌ಗಳೊಂದಿಗೆ ಬ್ಲಾಕ್ ಸೀಟ್ ಅಪ್ಹೋಲ್ಸ್ಟರಿ, ಬ್ಲಾಕ್ ಫ್ಲೋರ್ ಕನ್ಸೋಲ್, ರೆಡ್ ಸ್ಟಿಚಸ್‌ಗಳೊಂದಿಗೆ ಸ್ಟೀರಿಂಗ್ ವೀಲ್, ಸಾಂಗ್ರಿಯಾ ರೆಡ್-ಥೀಮ್ ಎಸಿ ವೆಂಟ್‌ಗಳು, ಜೆಬಿಎಲ್ ಸ್ಪೀಕರ್‌ಳೊಂದಿಗೆ ಡೋರ್ ಟ್ರಿಮ್‌ಗಳನ್ನು ಹೊಂದಿದೆ. ಖರೀದಿದಾರರು ಪರ್ಸನಲ್ ಎಐ ಅಸಿಸ್ಟೆಂಟ್, ಡಿಜಿಟಲ್ ಕಾರ್ ಕೀ, 49 ಸೇಫ್ಟಿ ಮತ್ತು 80ಕ್ಕೂ ಹೆಚ್ಚು ಐ-ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಸಹ ಪಡೆಯಬಹುದು.

ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಡಿಸೈನ್: ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಹೊಸ ಡಿಸೈನ್ ಬಗ್ಗೆ ಹೇಳುವುದಾದರೆ, ಗ್ಲಾಸಿ ಬ್ಲ್ಯಾಕ್ ಡೋರ್ ಅಲನ್, ಬ್ಲ್ಯಾಕ್ ಸೈಡ್ ಡೋರ್ ಕ್ಲಾಡಿಂಗ್, ಬ್ಲಾಕ್ ರೂಫ್ ರೇಲ್ಸ್, ಮುಂಭಾಗದ ಫೆಂಡರ್‌ನಲ್ಲಿ ಬ್ಲ್ಯಾಕ್ ಸ್ಟಾರ್ಮ್ ಲಾಂಛನ(emblem), ಬ್ಲಾಕ್ ಹನಿಕೋಂಬ್ ಗ್ರಿಲ್, ಬ್ಲಾಕ್-ಫಿನಿಶ್ಡ್ ಹೆಡ್ ಲ್ಯಾಂಪ್‌ಗಳು, ಮುಂಭಾಗದಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.
ಹೆಕ್ಟರ್ ಸ್ನೋಸ್ಟಾರ್ಮ್ ಡಿಸೈನ್: ಡ್ಯುಯಲ್-ಟೋನ್ ವೈಟ್ ಬಾಹ್ಯ ಬಣ್ಣದೊಂದಿಗೆ, ಬ್ಲಾಕ್ ರೂಫ್ ಹೊಂದಿದೆ. ಬ್ರಾಂಡ್ ಲೋಗೋ ಮತ್ತು ಹೆಕ್ಟರ್ ಲಾಂಛನ (emblem) ಸೇರಿದಂತೆ ಡಾರ್ಕ್ ಕ್ರೋಮ್ ಅಕ್ಸೆಂಟ್‌ಗಳನ್ನು ಹೊಂದಿದೆ. ಇದು ಆರ್ಗೈಲ್ ಪ್ರೇರಿತ ಡೈಮಂಡ್ ಮೆಶ್ ಫ್ರಂಟ್ ಗ್ರಿಲ್, ಡಾರ್ಕ್ ಕ್ರೋಮ್ ಸರೌಂಡ್, ಆಕರ್ಷಕ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಹೊಂದಿದೆ.

ಪಿಯಾನೋ ಬ್ಲಾಕ್ ರೂಫ್ ರೇಲ್‌ಗಳು, ಬ್ಲಾಕ್ ಟೈಲ್ ಲ್ಯಾಂಪ್‌ಗಳು, ಡಾರ್ಕ್ ಕ್ರೋಮ್ ಟೈಲ್‌ಗೇಟ್, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ಪಿಯಾನೋ ಬ್ಲ್ಯಾಕ್ ಹೆಡ್‌ಲ್ಯಾಂಪ್‌ಗಳೊಂದಿಗೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ. ಜೊತೆಗೆ ರೆಡ್ ಕ್ಯಾಲಿಪರ್ ಗಳೊಂದಿಗೆ ಸ್ಪೋರ್ಟಿ 18-ಇಂಚಿನ ಆಲ್-ಬ್ಲ್ಯಾಕ್ ಅಲಾಯ್ ವೀಲ್‌ಗಳು ಮತ್ತು ಹೊರಗಿನ ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಸೇರಿದಂತೆ ಬ್ಲಾಕ್ ಹೈಲೈಟ್‌ಗಳು ಇವೆ.
ಇಂಟೀರಿಯರ್: ಒಳಭಾಗದಲ್ಲಿ ಎಲ್ಲವೂ-ಬ್ಲ್ಯಾಕ್ ಕ್ಯಾಬಿನ್ನೊಂದಿಗೆ ಡಿಸೈನ್ ಮಾಡಲಾಗಿದ್ದು, ಇನ್ಸ್‌ಟ್ರೂಮೆಂಟ್ ಪ್ಯಾನಲ್, ಎಸಿ ವೆಂಟ್ ಸರೌಂಡ್‌ಗಳು, ಡಿಬೋಸ್ಡ್ ಫ್ರಂಟ್ ಸೀಟ್‌ಗಳು, ಡೋರ್ ಹ್ಯಾಂಡಲ್‌ಗಳು, ಸ್ಟೀರಿಂಗ್ ವೀಲ್, ಹೆಡ್ ಯೂನಿಟ್, ಗೇರ್ ನಾಬ್ ಮತ್ತು ಫ್ಲೋರ್ ಕನ್ಸೋಲ್ ನಂತಹ ವಿವಿಧ ಅಂಶಗಳ ಮೇಲೆ ಗನ್ ಮೆಟಲ್ ಅಕ್ಸೆಂಟ್‌ಗಳನ್ನು ಹೊಂದಿದೆ.

14-ಇಂಚಿನ ಎಚ್‌ಡಿ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಲೆದರ್ ಸ್ಟೀರಿಂಗ್ ವ್ಹೀಲ್ ಸೇರಿವೆ. ಹೆಚ್ಚುವರಿಯಾಗಿ, ಇದು ಫಾಗ್ ಲ್ಯಾಂಪ್ ಗಾಗಿ ರೆಡ್ಇಂಟೇಕ್‌ಗಳು, ಡ್ಯುಯಲ್-ಪ್ಯಾನ್ ಸನ್‌ರೂಫ್, ಮುಂಭಾಗದ ಹೆಡ್ರೆಸ್ಟ್‌ಗಳಲ್ಲಿ ಸ್ನೋಸ್ಟಾರ್ಮ್ ಡಿಬೋಸಿಂಗ್, ರೆಡ್ ಒಆರ್ ವಿಎಂ ಪ್ರೊಟೆಕ್ಟರ್ ಮತ್ತು ರೆಡ್ ಟೈಲ್ ಗೇಟ್ ಡಿಸೈನ್ ಒಳಗೊಂಡಿರುವ ಅಕ್ಸೆಸೊರಿ ಪ್ಯಾಕೇಜ್‌ನೊಂದಿಗೆ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








