ಹಬ್ಬದ ಸೀಸನ್‌ನಲ್ಲಿ ಎಲ್ಲರೂ ಡಿಸ್ಕೌಂಟ್ ನೀಡುವಾಗ ಬೆಲೆ ಏರಿಕೆ ಮಾಡಿದ ಎಂಜಿ: ಏನಿದರ ಹಿಂದಿನ ತಂತ್ರ?

ಹಬ್ಬದ ಸೀಸನ್‌ನಲ್ಲಿ ಎಲ್ಲಾ ಕಾರು ತಯಾರಕ ಕಂಪನಿಗಳು ಮಾರಾಟವನ್ನು ಹೆಚ್ಚಿಸಲು ತಮ್ಮ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದ್ದಾರೆ. ಆದರೆ ಎಂಜಿ ಮೋಟಾರ್ ಕಂಪನಿಯು ತಮ್ಮ ಕಾರುಗಳ ಬೆಲೆಯನ್ನ್ನು ಹೆಚ್ಚಿಸಿದೆ. ಎಂಜಿ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಗಳ ನಂತರ, ಎಂಜಿ ಸಹ ಆಸ್ಟರ್ ಮಿಡ್ ಎಸ್‍ಯುವಿಯ ಬೆಲೆಯನ್ನು ಕೂಡ ಹೆಚ್ಚಿಸಿದ್ದಾರೆ. ಈ ಎಂಜಿ ಆಸ್ಟರ್ (MG Astor) ಮಿಡ್ ಎಸ್‍ಯುವಿಯ ಆಯ್ದ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಈ ಎಂಜಿ ಆಸ್ಟರ್ ಎಸ್‍ಯುವಿಯ ಬೆಲೆಯನ್ನು ರೂ.27,000 ವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಕಳೆದ ಜೂನ್‌ನಲ್ಲಿಯೂ ಎಂಜಿ ಆಸ್ಟರ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿತ್ತು. ಎಂಜಿ ಆಸ್ಟರ್ ಎಸ್‍ಯುವಿಯು ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಎಸ್‍ಯುವಿಯು ಬ್ಲ್ಯಾಕ್ ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಹವಾನಾ ಗ್ರೇ ಮತ್ತು ಕ್ಯಾಂಡಿ ವೈಟ್ ಜೊತೆಗೆ ಸ್ಟಾರ್ರಿ ಬ್ಲ್ಯಾಕ್ ರೂಫ್‌ನಂತಹ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

MG Astor

ಈ ಎಂಜಿ ಆಸ್ಟರ್ ಎಸ್‍ಯುವಿಯ ಮಾದರಿಯು ಆಕರ್ಷಕ ಬೆಲೆ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಎಂಜಿ ಆಸ್ಟರ್ ಎಸ್‍ಯುವಿ 1.5 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಒಳಗೊಂಡಿರುತ್ತವೆ. ಇದು 110 PS ಪವರ್ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚುವರಿಯಾಗಿ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪ್ರತ್ಯೇಕವಾಗಿ Savvy Pro ಟ್ರಿಮ್‌ಗಾಗಿ ಕಾಯ್ದಿರಿಸಲಾಗಿದೆ. ಈ ಎಂಜಿ ಆಸ್ಟರ್ ಮಾದರಿಯು ಐವರಿ ಮತ್ತು ಸಾಂಗ್ರಿಯಾ ಎಂಬ ಎರಡೂ ಬಾಹ್ಯ ಬಣ್ಣಗಳು ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿವೆ. ಎಂಜಿ ಆಸ್ಟರ್ ಆಟೋ IRVM ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳ ನವೀಕರಣಗಳನ್ನು ಹೊಂದಿದೆ.

MG Astor

ಇದು Savvy Pro ಟ್ರಿಮ್‌ಗಾಗಿ ಪ್ರತ್ಯೇಕವಾಗಿ ಲಭ್ಯವಿದೆ. ಸೆಲೆಕ್ಟ್ ಟ್ರಿಮ್‌ನಿಂದ ಪ್ರಾರಂಭಿಸಿ, ಈ ಎಸ್‍ಯುವಿ i-Smart 2.0 ಸಂಪರ್ಕಿತ ತಂತ್ರಜ್ಞಾನ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಪನರೊಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ನೀಡುತ್ತದೆ. ಹೊಸ ಎಂಜಿ ಆಸ್ಟರ್ ಎಸ್‍ಯುವಿಯು ಲೆವೆಲ್ 2 ADAS ತಂತ್ರಜ್ಞಾನವನ್ನು ಉಳಿಸಿಕೊಂಡಿದೆ, 14 ಸುಧಾರಿತ ಸುರಕ್ಷತಾ ಫೀಚರ್ಸ್ ಗಳನ್ನು ಹೋಂದಿರುತ್ತದೆ.

ಈ ಎಸ್‍ಯುವಿಯಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಅಪ್ಹೋಲ್‌ಸ್ಟರಿ ಮತ್ತು ಲೆದರ್ ನಿಂದ ಸುತ್ತುವರೆದ ಸ್ಟೀರಿಂಗ್ ವ್ಹೀಲ್ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಅನ್ನು ಹೊಂದಿದೆ. ಇದರೊಂದಿಗೆ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳು, 6-ವೇ ಪವರ್-ಹೊಂದಾಣಿಕೆ ಡ್ರೈವರ್ ಸೀಟ್, 6-ಸ್ಪೀಕರ್ ಮತ್ತು ಟ್ವೀಟರ್‌ಗಳನ್ನು ಹೊಂದಿವೆ.

ಇದರೊಂದಿಗೆ ಲೇನ್ ಚೇಂಜ್ ಅಸಿಸ್ಟ್, ಹಿಂಬದಿಯ ಅಡ್ಡ-ಟ್ರಾಫಿಕ್ ಎಚ್ಚರಿಕೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಆಸ್ಟರ್ ಫೇಸ್‌ಲಿಫ್ಟ್‌ನ ಸಂಪೂರ್ಣ ವಿನ್ಯಾಸವು ಇತ್ತೀಚೆಗೆ ಸೋರಿಕೆಯಾಗಿದ್ದು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ. ಹೊಸ ಆಸ್ಟರ್ ಫೇಸ್‌ಲಿಫ್ಟ್ ಬಾಹ್ಯ ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಗಮನಾರ್ಹವಾದ ನವೀಕರಣಗಳನ್ನು ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 18, 2024, 11:42 [IST]
English summary
Mg astor suv prices increased in india details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+