'ಕ್ಲೌಡ್ ಇವಿ' ಬಿಡುಗಡೆ ದಿನಾಂಕ ಖಚಿತಪಡಿಸಿದ JSW MG ಮೋಟಾರ್: ಬೆಲೆ, ವಿಶೇಷತೆಗಳೇನು?
JSW MG ಮೋಟಾರ್ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ತನ್ನ ಮೂರನೇ ಎಲೆಕ್ಟ್ರಿಕ್ ಕಾರಾದ ಕ್ಲೌಡ್ ಇವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರನ್ನು ನಿನ್ನೆ (ಜುಲೈ 17) ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಆಟೋ ಶೋನಲ್ಲಿ ಪ್ರದರ್ಶಿಸಲಾಗಿದೆ. ಮುಂದಿನ 12 ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್‌ನ ಐದು ಹೊಸ ಕಾರುಗಳಲ್ಲಿ ಕ್ಲೌಡ್ ಇವಿ ಕೂಡ ಒಂದಾಗಿದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಈ ಮುಂಬರುವ ಎಲೆಕ್ಟ್ರಿಕ್ ಕಾರನ್ನು ಅಕ್ಟೋಬರ್ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.
JSW ಗ್ರೂಪ್‌ನೊಂದಿಗೆ ಕೈಜೋಡಿಸಿದ ನಂತರ, ಎಂಜಿ ಮೋಟಾರ್ ಹಲವಾರು ಹೊಸ ಮಾದರಿಗಳನ್ನು ಪರಿಚಯಿಸಲು ಜೋರು ಸಿದ್ದತೆಗಳನ್ನು ಮಾಡಿಕೊಂಡಿದೆ. ಮುಂಬರುವ ಐದು ಹೊಸ ಕಾರುಗಳಲ್ಲಿ ಎರಡು ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳು ಆಗಿರುತ್ತವೆ. ಬಿಡುಗಡೆಯಾಗಲಿರುವ ಈ ಐದು ಕಾರುಗಳಲ್ಲಿ ಕ್ಲೌಡ್ ಇವಿ ಮೊದಲನೆಯದು ಎಂದು ತಿಳಿದುಬಂದಿದೆ. ಈಗಾಗಲೇ ರಸ್ತೆ ಪರೀಕ್ಷೆಗಳು ನಡೆಯುತ್ತಿದ್ದು, ಫೋಟೋಗಳು ಕೂಡ ವೈರಲ್ ಆಗಿವೆ.

MG ಮೋಟಾರ್‌ನ ಶ್ರೇಣಿಯಲ್ಲಿ ಕಾಮೆಟ್ EV ಮತ್ತು ZS EV ನಡುವೆ ಕ್ಲೌಡ್ EV ಅನ್ನು ಇರಿಸುವ ಸಾಧ್ಯತೆಯಿದೆ. ಕಾರು ತಯಾರಕರು ಸುಮಾರು ರೂ. 20 ಲಕ್ಷದ ಆರಂಭಿಕ ಬೆಲೆಯಲ್ಲಿ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ನೀಡಬಹುದು (ಎಕ್ಸ್ ಶೋ ರೂಂ). ಕ್ಲೌಡ್ EV ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 ನಂತಹ ಕೆಲವು ಜನಪ್ರಿಯ ಎಲೆಕ್ಟ್ರಿಕ್ SUV ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ.
ಈ ಎಲೆಕ್ಟ್ರಿಕ್ ಕಾರನ್ನು ಪ್ರಸ್ತುತ ಚೀನಾದಲ್ಲಿ ವುಲಿಂಗ್ ಬ್ಯಾಡ್ಜಿಂಗ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಇವಿ ಕಾರು ಕೆಲವು ನಿರ್ದಿಷ್ಟ ಬದಲಾವಣೆಗಳಿಗೆ ಒಳಗಾಗಲಿದ್ದು, ಕಾರು ತಯಾರಕರು ಆ ಬಗ್ಗೆ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾಡೆಲ್ 50.6 kWh ಬ್ಯಾಟರಿಯೊಂದಿಗೆ ಒಂದೇ ಚಾರ್ಜ್‌ನಲ್ಲಿ 460 ಕಿ.ಮೀ ರೇಂಜ್ ನೀಡುತ್ತದೆ.

DC ಫಾಸ್ಟ್ ಚಾರ್ಜರ್‌ಗಳ ಮೂಲಕ ಈ ಎಲೆಕ್ಟ್ರಿಕ್ ಕಾರನ್ನು ಕೇವಲ ಅರ್ಧ ಗಂಟೆಯಲ್ಲಿ ಶೇಕಡಾ 30 ರಿಂದ 100 ರಷ್ಟು ಚಾರ್ಜ್ ಮಾಡಬಹುದು. ಗ್ರಾಹಕರ ಅನುಕೂಲಕ್ಕಾಗಿ ಕಾರಿನಲ್ಲಿ ಎರಡು ಚಾರ್ಜಿಂಗ್ ಪಾಯಿಂಟ್‌ಗಳನ್ನು ನೀಡಲಾಗಿದೆ. ಒಂದನ್ನು ಮುಂಭಾಗದಲ್ಲಿ ಮತ್ತು ಇನ್ನೊಂದನ್ನು ವಾಹನದ ಹಿಂಭಾಗದ ಬಲಭಾಗದಲ್ಲಿ ನೀಡಲಾಗಿದೆ.
ವರದಿಯ ಪ್ರಕಾರ, MG ಮೋಟಾರ್‌ನ ಅಧಿಕಾರಿಯೊಬ್ಬರು ಮಾತನಾಡಿ, ಹೊಸ ಎಲೆಕ್ಟ್ರಿಕ್ ಕಾರನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. MG ಮೋಟಾರ್ ಇಂಡಿಯಾ ಅಧ್ಯಕ್ಷ ರಾಜೀವ್ ಚಾಬಾ ಮಾತನಾಡಿ, "ನಮ್ಮ ಮೊದಲ ಬಿಡುಗಡೆಯು ಸೌಕರ್ಯ ಮತ್ತು ಉಪಯುಕ್ತತೆ ಎರಡಕ್ಕೂ ವಿನ್ಯಾಸಗೊಳಿಸಲಾಗಿದ್ದು, ಇದು ವೈಶಿಷ್ಟ್ಯ ಭರಿತ ಕ್ರಾಸ್ಒವರ್ SUV ಆಗಿರುತ್ತದೆ ಎಂದು ಹೇಳಿದ್ದಾರೆ.

ಈ ಎಲೆಕ್ಟ್ರಿಕ್ ಕಾರು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 18 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. EV ಯ ಅತ್ಯಂತ ವಿಶಿಷ್ಟವಾದ ವೈಶಿಷ್ಟ್ಯವೆಂದರೆ ಮುಂಭಾಗದ ಎರಡು ಆಸನಗಳನ್ನು ಪೂರ್ಣ ಫ್ಲಾಟ್ ಅಥವಾ 180 ಡಿಗ್ರಿಗಳಷ್ಟು ಒರಗಿಸಬಹುದು. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








