ಹೆಂಡತಿ ಮಕ್ಕಳೊಂದಿಗೆ ದುಬಾರಿ ರೇಂಜ್‌ ರೋವರ್ ಖರೀದಿಸಿದ ನಟ: ಬೆಲೆ ಕೇಳಿದ್ರೆ ಶಾಕ್‌ ಆಗುವುದು ಪಕ್ಕಾ!

ಭಾರತೀಯ ಸೆಲೆಬ್ರಿಟಿಗಳಿಗೆ ತಮ್ಮ ಗ್ಯಾರೇಜಿನಲ್ಲಿ ಎಷ್ಟೆ ಕಾರುಗಳಿದ್ದರೂ, ರೇಂಜ್‌ ರೋವರ್ ಕಂಪನಿಯ ಯಾವುದಾದರೊಂದು ಎಸ್‌ಯುವಿ ಇರಲೇಬೇಕು. ಇಲ್ಲದಿದ್ದರೆ ಅವರಿಗೆ ತಮ್ಮ ಕಾರು ಕಲೆಕ್ಷನ್‌ ಅಪೂರ್ಣವೇ ಸರಿ. ನೀವು ಯಾವ ಸೆಲೆಬ್ರಿಟಿಗಳನ್ನು ತೆಗೆದುಕೊಂಡರೂ, ಬಹುತೇಕರ ಗ್ಯಾರೇಜಿನಲ್ಲಿ ಒಂದಾದರೂ ರೇಂಜ್‌ ರೋವರ್‌ ಕಂಪನಿಯ ಎಸ್‌ಯುವಿಗಳನ್ನು ಕಾಣಬಹುದಾಗಿದೆ.

ಈ ಸಾಲಿಗೆ ಇದೀಗ ಮತ್ತೊಂದು ನಟನ ಹೆಸರು ಸೇರ್ಪಡೆಯಾಗಿದೆ. ಚುತ್ರರಂಗಕ್ಕೆ ಬಂದು ಹಲವಾರು ವರ್ಷಗಳಾಗಿದ್ದು, ಹಲವಾರು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹೊಚ್ಚ ಹೊಸ ರೇಂಜ್‌ ರೋವರ್ ಸ್ಪೋರ್ಟ್‌ ಆಟೋಬಯೋಗ್ರಫಿ ಎಸ್‌ಯುವಿಯನ್ನು ಖರೀದಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂದ ಹಾಗೆ ಹೊಸ ರೇಂಜ್‌ ರೋವರ್ ಸ್ಪೋರ್ಟ್‌ ಆಟೋಬಯೋಗ್ರಫಿ ಎಸ್‌ಯುವಿಯನ್ನು ಖರೀದಿ ಮಾಡಿರುವ ಮಾಲಿವುಡ್‌ ನಟನ ಹೆಸರು ಜಯಸೂರ್ಯ.

Mollywood Star Jayasurya Bought Brand New Range Rover Autobiography SUV

ಹಲವು ವರ್ಷಗಳಿಂದ ಮಲಯಾಳಂ ಇಂಡಸ್ಟ್ರೀಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟ ಜಯಸೂರ್ಯ ಅವರ "ಆಡು' ಎನ್ನುವ ಚಿತ್ರ ಸಾಕಷ್ಟು ಸದ್ದು ಮಾಡಿದೆ. ಇದೀಗ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ತೆರಳಿ ಹೊಸ ರೇಂಜ್‌ ರೋವರ್ ಸ್ಪೋರ್ಟ್‌ ಆಟೋಬಯೋಗ್ರಫಿ ಎಸ್‌ಯುವಿಯ ಡೆಲಿವರಿ ತೆಗೆದುಕೊಳ್ಳುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಂದ ಭರಪೂರ ಅಭಿನಂದನೆಗಳ ಮಹಾ ಪೂರವೇ ಹರಿದು ಬರುತ್ತಿದೆ.

ಜಯಸೂರ್ಯ ಖರೀದಿಸಿರುವ ಹೊಸ ರೇಂಜ್‌ ರೋವರ್ ಸ್ಪೋರ್ಟ್‌ ಆಟೋಬಯೋಗ್ರಫಿ ಬಗ್ಗೆ ನೋಡುವುದಾದರೆ, ಸಾಂಟೋರಿನಿ ಬ್ಲಾಕ್‌ ಬಣ್ಣದ್ದಾಗಿದ್ದು, ಈ ಕಾರು ಹಲವು ಸೆಲೆಬ್ರಿಟಿಗಳ ನೆಚ್ಚಿನ ಕಾರಾಗಿದೆ. ರೇಂಜ್​ ರೋವರ್ ಬಗ್ಗೆ ಹೇಳುವುದಾದರೆ, ಹೊಸ ರೇಂಜ್​ ರೋವರ್ ಎಸ್‍ಯುವಿಯ ಬೆಲೆಯು ಸುಮಾರು ರೂ.2.39 - 4.17 ಕೋಟಿಯಾಗಿದೆ. ರೇಂಜ್ ರೋವರ್ ಅನ್ನು ಹೊಸ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸ ಮಾದರಿಯು ಅದರ ಹಿಂದಿನ ಹೆಚ್ಚಿನ ಶೈಲಿಯನ್ನು ಉಳಿಸಿಕೊಂಡಿದೆ. ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

Mollywood Star Jayasurya Bought Brand New Range Rover Autobiography SUV

ಈ ಕಾರಿನ ಎಂಜಿನ್‌ಗಳಿಗೆ ಸಂಬಂಧಿಸಿದಂತೆ, ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯಲ್ಲಿ (Range Rover Autobiography SUV) 3 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದು 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0-ಲೀಟರ್ ಟರ್ಬೊ-ಡೀಸೆಲ್ ಮತ್ತು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಗಳಾಗಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟರ್ಬೊ-ಡೀಸೆಲ್ ಎಂಜಿನ್ 346 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಟ್ವಿನ್-ಟರ್ಬೊ ವಿ8 ಎಂಜಿನ್ 523 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು ಸುಮಾರು 80 ಕಿ.ಮೀ ರೇಂಜ್ ಹೊಂದಿರಲಿದೆ. ಎಲ್ಲಾ ಮಾದರಿಗಳು ಆಲ್-ವೀಲ್ ಡ್ರೈವ್ ಮತ್ತು ಸಕ್ರಿಯ-ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಜೊತೆಗೆ ಸ್ಟ್ಯಾಂಡರ್ಡ್ ಬರುತ್ತವೆ.

ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 2, 2024, 10:08 [IST]
English summary
Mollywood star jayasurya bought brand new range rover autobiography suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+