2024 ಫೋರ್ಸ್ ಗೂರ್ಖಾ ಡೆಲಿವರಿ ಪ್ರಾರಂಭ: ಥಾರ್ 5-ಡೋರ್ ಬಿಡುಗಡೆ ಮುನ್ನವೇ ಪೈಪೋಟಿ!

ಫೋರ್ಸ್ ಮೋಟಾರ್ಸ್' ಸೋಷಿಯಲ್ ಮೀಡಿಯಾದಲ್ಲಿ ತನ್ನ 2024ರ ಹೊಸ ಫೋರ್ಸ್ ಗೂರ್ಖಾ ಡೆಲಿವರಿಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಅದರ ಹಿಂದಿನ ಮಾಡಲ್‌ಗೆ ಹೋಲಿಸಿದರೆ, ಹೊಸ 2024 ಗೂರ್ಖಾ ಗಮನಾರ್ಹ ನವೀಕರಣಗಳನ್ನು ಪಡೆದಿದೆ. ಹೊಸ 2024ರ ಗೂರ್ಖಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 16.75 ಲಕ್ಷಗಳಾದರೆ, 5 - ಡೋರ್ ಮಾದರಿಯ ಬೆಲೆಯು ರೂ. 18 ಲಕ್ಷಗಳಾಗಿದೆ. ಇದು ತನ್ನ ಅಡ್ವೆಂಚರ್ ವಿಭಾಗದಲ್ಲಿ ಮಹೀಂದ್ರಾ ಥಾರ್ ಮತ್ತು ಮಾರುತಿ ಜಿಮ್ನಿಯಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಹೆಚ್ಚು ಆಸಕ್ತಿದಾಯಕ ಕಾರು ಪೈಪೋಟಿಗಳಲ್ಲಿ ಅಡ್ವೆಂಚರ್ ಎಸ್‌ಯುವಿ ವಿಭಾಗ ಕೂಡ ಒಂದು. ಭಾರತೀಯ ಅಡ್ವೆಂಚರ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಆಕರ್ಷಿಸಲು, ಫೋರ್ಸ್ ಮೋಟಾರ್ಸ್ ತನ್ನ 2024 ಗೂರ್ಖಾವನ್ನು ಬಿಡುಗಡೆ ಮಾಡಿತು. ಮಹೀಂದ್ರಾ ಮತ್ತು ಫೋರ್ಸ್ ಮೋಟಾರ್ಸ್ ಕಂಪಗಳ ನಡುವೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ಪರ್ಧೆ ಇದೆ.

new-2024-force-gurkha-deliveries-start-details

ಮಹೀಂದ್ರಾ 2020 ರಲ್ಲಿ ಹೊಸ ಥಾರ್ ಅನ್ನು ಬಿಡುಗಡೆ ಮಾಡಿತು. ಮಾರಾಟದಲ್ಲಿ ಗಮನಾರ್ಹ ಹೆಚ್ಚಳವನ್ನು ಗಳಿಸಿ, ಗೂರ್ಖಾವನ್ನು ಹಿಂದಿಕ್ಕಿತ್ತು. ಈ ಪೈಪೋಟಿ ನಿರಂತರ ಮುಂದುವರಿಯುತ್ತಿದೆ. ಸದ್ಯ ಮಹೀಂದ್ರಾ ಮೂರು ಬಾಗಿಲಿನ ಥಾರ್ ಅನ್ನು ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ 5-ಡೋರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಆದರೆ ಈಗ ಫೋರ್ಸ್ ಮೋಟಾರ್ಸ್' ಪೈಪೋಟಿ ಹೆಚ್ಚಿಸಲು 2024 ರಲ್ಲಿ ಮೊದಲ 5-ಡೋರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಮಾದರಿಯನ್ನು 3-ಡೋರ್ ಮತ್ತು 5-ಡೋರ್ ರೂಪಾಂತರಗಳಲ್ಲಿ ಗಮನಾರ್ಹ ನವೀಕರಣಗಳೊಂದಿಗೆ ನೀಡಲಾಗುತ್ತಿದೆ. ಗೂರ್ಖಾ ತನ್ನ ಪ್ರಸ್ತುತ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ವಾಹನವಾಗಿ ಹೊರಹೊಮ್ಮಿದೆ. ಎಲ್ಲಾ ಹೆಚ್ಚುವರಿ ಆಫ್-ರೋಡ್ ಸಾಮರ್ಥ್ಯಗಳನ್ನು ಒಳಗೊಂಡಿದೆ.

new-2024-force-gurkha-deliveries-start-details

2024 ಫೋರ್ಸ್ ಗೂರ್ಖಾ ವಿಶೇಷತೆಗಳು: 2024ರ ಗೂರ್ಖಾ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 9 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಟಿಪಿಎಂಎಸ್ ರೀಡ್ ಔಟ್ ನೊಂದಿಗೆ ಸಂಪೂರ್ಣ ಡಿಜಿಟಲ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್ ಸೇರಿದಂತೆ ಹೆಚ್ಚಿನವುಗಳನ್ನು ಹೊಂದಿದೆ.

5-ಡೋರ್ ಗೂರ್ಖಾ 3 -ನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳೊಂದಿಗೆ ಬರುತ್ತದೆ. ಎಲ್ಇಡಿ ಹೆಡ್ ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳು, ಜಿ ವ್ಯಾಗನ್ ನಂತಹ ಫೆಂಡರ್-ಮೌಂಟೆಡ್ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಕಾರ್ನರಿಂಗ್ ಫಂಕ್ಷನ್ ಹೊಂದಿರುವ ಫಾಗ್ ಲೈಟ್‌ಗಳು, ಫಂಕ್ಷನಲ್ ರೂಫ್ ರ್ಯಾಕ್, ಫಂಕ್ಷನಲ್ ಲ್ಯಾಡರ್, ಸೈಡ್-ಸ್ಟೆಪ್, 18 ಇಂಚಿನ ಅಲಾಯ್ ವ್ಹೀಲ್‌ಗಳು, 255-ಸೆಕ್ಷನ್ ಟೈರ್‌ಗಳನ್ನು ಹೊಂದಿದೆ.

new-2024-force-gurkha-deliveries-start-details

ಪವರ್ ಟ್ರೇನ್: ಇತರ ಫೋರ್ಸ್ ವಾಹನಗಳಂತೆ ಅದೇ ಎಫ್ಎಂ 2.6 ಸಿಆರ್ ಟರ್ಬೊ ಡೀಸೆಲ್ ಘಟಕವನ್ನು ಹೊಂದಿದೆ. ಹೊಸ 2024 ಗೂರ್ಖಾ 140 ಬಿಹೆಚ್‌ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಾನಿಕ್ ಶಿಫ್ಟ್-ಆನ್-ದಿ-ಫ್ಲೈ 4X4 ವರ್ಗಾವಣೆ ಕೇಸ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಲಾಕಿಂಗ್ ಡಿಫರೆನ್ಶಿಯಲ್‌ಗಳು ಗಮನಾರ್ಹ ವೈಶಿಷ್ಟ್ಯಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, June 18, 2024, 13:42 [IST]
English summary
New 2024 force gurkha deliveries start details
Read more on india force motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+