MG ಫುಲ್‌ಸೈಜ್ SUV ಬಿಡುಗಡೆಗೆ ಸಜ್ಜು... ಪರೀಕ್ಷೆ ವೇಳೆ ಕ್ಯಾಮರಾ ಕಣ್ಣಿಗೆ ಬಿತ್ತು!

ಎಂಜಿ ಮೋಟಾರ್ ಇಂಡಿಯಾ ಶೀಘ್ರದಲ್ಲೇ ಹೊಸ ಫುಲ್‌ಸೈಜ್ ಎಸ್‌ಯುವಿಯಾದ ಗ್ಲೋಸ್ಟರ್‌ನ ಫೇಸ್ ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ರಸ್ತೆ ಪರೀಕ್ಷೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಹೊಸ ಎಸ್‌ಯುವಿಯು ದೆಹಲಿ - ಜೈಪುರ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ಕಂಪನಿಯು ಫೇಸ್‌ಲಿಫ್ಟ್‌ ಆವೃತ್ತಿಯನ್ನು ಸೂಕ್ಷ್ಮ ಇಂಟೀರಿಯರ್ ಪರಿಷ್ಕರಣೆಗಳೊಂದಿಗೆ ಗಮನಾರ್ಹ ವಿನ್ಯಾಸ ನವೀಕರಣಗಳನ್ನು ನೀಡಿ ಬಿಡುಗಡೆ ಮಾಡಲಿದೆ. ಎಂಜಿ ಮೋಟಾರ್ ಶೀಘ್ರದಲ್ಲೇ ಕಾರಿನ ಕುರಿತ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ. ಅದಕ್ಕೂ ಮುನ್ನ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಬಗ್ಗೆ ನಮಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.

ಹೊಸ ಮುಂಬರಲಿರುವ ಗ್ಲೋಸ್ಟರ್‌ನ ಫೇಸ್ ಲಿಫ್ಟ್ ಆವೃತ್ತಿಯು ಈ ಹಿಂದೆ ಬೆಂಗಳೂರು ಸೇರಿದಂತೆ ಹಲವೆಡೆ ರೋಡ್ ಟೆಸ್ಟ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು. ಇದೀಗ ದೆಹಲಿ - ಜೈಪುರ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ಫೋಟೋಗಳ ಆಧಾರದ ಮೇಲೆ ಅದರ ವಿನ್ಯಾಸ ಹಾಗೂ ವಿಶೇಷತೆಗಳನ್ನು ವಿವರಿಸುತ್ತಿದ್ದೇವೆ.

new-2024-mg-gloster-facelift-spotted-on-delhi-jaipur-highway

ಮೊದಲಿಗೆ ಪ್ರಸ್ತುತ ಮಾರಾಟದಲ್ಲಿರುವ ಎಂಜಿ ಗ್ಲೋಸ್ಟರ್ ಬಗ್ಗೆ ನೋಡೋಣ, ಈ ಕಾರು ಭಾರತದಲ್ಲಿ ಎಂಜಿ ಮೋಟಾರ್‌ ಲೈನ್‌ಅಪ್‌ನಲ್ಲಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈಗ ಭಾರತದಲ್ಲಿ ಮಾರಾಟದಲ್ಲಿರುವ MG ಗ್ಲೋಸ್ಟರ್ SUV ಬೆಲೆಯು ರೂ. 48.39 ಲಕ್ಷದಿಂದ ರೂ. 54.66 ಲಕ್ಷವಿದ್ದು, 9 ರೂಪಾಂತರಗಳಲ್ಲಿ ಲಭ್ಯವಿದೆ. ಸುರಕ್ಷತೆಯಲ್ಲಿ 5-ಸ್ಟಾರ್‌ NCAP ರೇಟಿಂಗ್ ಗಳಿಸಿದೆ. 6 ಏರ್‌ಬ್ಯಾಗ್‌ಗಳೊಂದಿಗೆ ಬರುವ ಈ ಕಾರು 4 ಬಣ್ಣಗಳಲ್ಲಿ ಲಭ್ಯವಿದೆ.

ಎಲ್ಲದರಲ್ಲೂ ಉತ್ತಮ ಪ್ರಶಂಸೆ ಗಳಿಸಿರುವ ಈ ಪ್ರೀಮಿಯಂ ಎಸ್‌ಯುವಿಯ ಫೇಸ್‌ಲಿಫ್ಟ್‌ ಆವೃತ್ತಿ ಹೇಗಿರಲಿದೆ ಎಂಬುದನ್ನು ಬಹಿರಂಗಗೊಂಡ ಫೋಟೋಗಳ ಆಧಾರದ ಮೇಲೆ ಇಲ್ಲಿ ಹೇಳುತ್ತಿದ್ದೇವೆ. ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಬೃಹತ್ ಮೂರು - ಸ್ಲಾಟ್ ಗ್ರಿಲ್ ಮತ್ತು ಬ್ರಾಂಡ್ ಲೋಗೋವನ್ನು ಕೇಂದ್ರಬಿಂದುವಾಗಿ ಮುಂಭಾಗದಲ್ಲಿ ಹೊಂದಿದೆ.

new-2024-mg-gloster-facelift-spotted-on-delhi-jaipur-highway

ಇದಲ್ಲದೆ, ಹೆಡ್ ಲೈಟ್‌ಗಳು ಕ್ಯೂಬ್ ಆಕಾರದ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟಪ್‌ನೊಂದಿಗೆ ಹೊಸ ಆಕರ್ಷಕ ವಿನ್ಯಾಸವನ್ನು ಪಡೆದಿವೆ. ನಂತರ, ಎಲ್ಇಡಿ ಡಿಆರ್ಎಲ್‌ಗಳು ಗ್ರಿಲ್‌ವೆರಗೆ ವಿಸ್ತರಿಸಿವೆ. ಇವು ನವೀಕರಿಸಿದ ಗ್ಲೋಸ್ಟರ್‌ನ ಮುಂಭಾಗದ ಪ್ರೊಫೈಲ್‌ಗೆ ಮತ್ತಷ್ಟು ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಒಟ್ಟಾರೆ ಫ್ರಂಟ್ ಲುಕ್ ಐರಾವತದಂತೆ ಕಾಣುತ್ತದೆ.

ಬದಿಗಳಲ್ಲಿ ಡಿಸೈನ್ ಅನ್ನು ನೋಡಿದ್ರೆ ಈಗ ಮಾರಾಟದಲ್ಲಿರುವ ಎಂಜಿ ಗ್ಲೋಸ್ಟರ್‌ನಂತೆ ಅದೇ ಅಲಾಯ್ ವೀಲ್‌ಗಳನ್ನು ಹೊಂದಿದೆ. ಆದರೆ ಈ ಮಾದರಿಯು ಬಿಡುಗಡೆಯ ಸಮಯದಲ್ಲಿ ಹೊಸ ಅಲಾಯ್ ವೀಲ್‌ಗಳನ್ನು ಪಡೆಯುವ ಸಾಧ್ಯತೆ ಕೂಡ ಇದೆ. ಹಿಂಭಾಗದಲ್ಲಿ, ಪೂರ್ಣ ಗಾತ್ರದ ಎಸ್‌ಯುವಿ ಕನೆಕ್ಟಿಂಗ್ ಲೈಟ್ ಬಾರ್‌ನೊಂದಿಗೆ ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ.

ಎಂಜಿನ್ ಬಗ್ಗೆ ಹೇಳುವುದಾದ್ರೆ, ಮುಂಬರಲಿರುವ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ. ಅದೇ 2.0-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಈ ಎಂಜಿನ್ ಅನ್ನು ಟರ್ಬೊ ಮತ್ತು ಟ್ವಿನ್ ಟರ್ಬೊ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುವುದು, ಇದು 213 ಬಿಹೆಚ್‌ಪಿ ಪವರ್ ಮತ್ತು 478 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಗ್ಲೋಸ್ಟರ್ ಫೇಸ್‌ಲಿಫ್ಟ್ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಸ್ಮಾರ್ಟ್ ಫೋನ್ ಕನೆಕ್ಷನ್, ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್ ರೂಫ್, ವೈರ್‌ಲೆಸ್ ಚಾರ್ಜರ್, 360 ಡಿಗ್ರಿ ಸರೌಂಡ್ ಕ್ಯಾಮೆರಾ ಮತ್ತು ಲೆವೆಲ್ 2 ADAS ಸೂಟ್ ಅನ್ನು ಹೊಂದಿರಲಿದೆ.

More from DriveSpark

Article Published On: Thursday, July 4, 2024, 16:59 [IST]
English summary
New 2024 mg gloster facelift spotted on delhi jaipur highway
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+