ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ನೊಂದಿಗೆ ಬಂದಿರುವ ಲೇಟೆಸ್ಟ್ ಕಾರುಗಳು! ನಿಮ್ಮ ಬಜೆಟ್‌ನಲ್ಲಿ ಸಿಗಲಿವೆ!
ಭಾರತದ ಆಟೋ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಶೀಘ್ರದಲ್ಲೇ ಚೀನಾ, ಜಪಾನ್, ಅಮೆರಿಕಾದಂತಹ ದೇಶಗಳಿಗೆ ಪೈಪೋಟಿ ನೀಡುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದ ಕಾರು ಮಾದರಿಗಳಲ್ಲಿ ಲಭ್ಯವಿರುವ ಆಧುನಿಕ ಫೀಚರ್‌ಗಳನ್ನು ಕಡಿಮೆ ಬೆಲೆಗೆ ಭಾರತದಲ್ಲಿ ಈಗ ಒದಗಿಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ADAS ತುಂಬಾ ಸದ್ದು ಮಾಡುತ್ತಿದೆ.
ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆಂಟ್ ಸಿಸ್ಟಮ್ (ADAS) ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ADAS ಈಗ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾರುಗಳಲ್ಲಿ ಲಭ್ಯವಿದೆ. ನಿಮ್ಮ ಬಜೆಟ್ ರೂ. 20 ಲಕ್ಷದವರೆಗೆ ಇದ್ದರೆ, ನೀವು ADAS ನೊಂದಿಗೆ ಕಾರನ್ನು ಖರೀದಸಬಹುದು. ಭಾರತೀಯರಿಗೆ ರೂ. 20 ಲಕ್ಷವೆಂಬುದು ದುಬಾರಿ ಮೊತ್ತ, ಆದ್ರೆ ADAS ಹೊಂದಿರುವ ಕಾರುಗಳು ವಿದೇಶಗಳಲ್ಲಿ ಇನ್ನೂ ದುಬಾರಿ ಎಂಬುದನ್ನು ಇಲ್ಲಿ ಗಮನಿಸಬೇಕು.

ಹುಂಡೈ ವೆರ್ನಾ ಫೇಸ್‌ಲಿಫ್ಟ್: ಹ್ಯುಂಡೈ ವೆರ್ನಾ (ಫೇಸ್‌ಲಿಫ್ಟ್) ಹೊಸ ಮಾದರಿಯು 2023 ರಲ್ಲಿ ಬಿಡುಗಡೆಯಾಗಿದೆ. ಹೊಸ ತಲೆಮಾರಿನ ವೆರ್ನಾ ADAS ಅನ್ನು ಸಹ ಒಳಗೊಂಡಿದೆ. ಹ್ಯುಂಡೈ ADAS ಅನ್ನು SX (O) CVT, SX (O) ಟರ್ಬೊದಲ್ಲಿ ಮಾತ್ರ ನೀಡುತ್ತದೆ. ಹುಂಡೈ ವೆರ್ನಾ ಫೇಸ್‌ಲಿಫ್ಟ್ ಬೆಲೆಯು ರೂ. 10.96 ಲಕ್ಷದಿಂದ ರೂ. 17.38 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಇದೆ.
ಹೋಂಡಾ ಸಿಟಿ ಫೇಸ್‌ಲಿಫ್ಟ್: ನವೀಕರಿಸಿದ ಹೋಂಡಾ ಸಿಟಿ ಮಾರ್ಚ್ 2023 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ADAS ಫೀಚರ್ ಒದಗಿಸಲಾಗಿದೆ. ಹಿಂದಿನ ADAS ಅದರ ಹೈಬ್ರಿಡ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿತ್ತು. ಈಗ ADAS ಹೋಂಡಾ ಸಿಟಿ ಎರಡನೇ ಬೇಸ್ V ರೂಪಾಂತರದಲ್ಲೂ ಲಭ್ಯವಿದೆ. ಇದರ ಬೆಲೆ ರೂ. 11.71 ಲಕ್ಷದಿಂದ ರೂ. 16.19 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಇದೆ.

ಹೋಂಡಾ ಎಲಿವೇಟ್: ಹೋಂಡಾ ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ADAS ಅನ್ನು ಸಹ ನೀಡಲಾಗಿದೆ. ಹೋಂಡಾ ತನ್ನ ಟಾಪ್ ಸ್ಪೆಕ್ ZX ಟ್ರಿಮ್‌ನಲ್ಲಿ ಮಾತ್ರ ADAS ಅನ್ನು ನೀಡುತ್ತದೆ. ಇದರ ಬೆಲೆ ರೂ.11.58 ಲಕ್ಷದಿಂದ ರೂ.16.20 ಲಕ್ಷದವರೆಗೆ ಇರುತ್ತದೆ. ಹೋಂಡಾ ಸಿಟಿಯ ನಂತರ, ಇದು ADAS ಅನ್ನು ಪರಿಚಯಿಸಿರುವ ಹೋಂಡಾದ ಎರಡನೇ ಕಾರಾಗಿದೆ.
ಹುಂಡೈ ಕ್ರೆಟಾ ಫೇಸ್‌ಲಿಫ್ಟ್: ಹೊಸ 2024 ಹ್ಯುಂಡೈ ಕ್ರೆಟಾ ಬೆಲೆ ರೂ. 10,99,900 ದಿಂದ 20,14,900 ವರೆಗೆ ಇದೆ. ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಸಹ ADAS ಒಳಗೊಂಡಿದೆ. ಈಗಾಗಲೇ ಹೊಸ ಕ್ರೆಟಾದ ವಿತರಣೆ ಕೂಡ ಪ್ರಾರಂಭವಾಗಿದೆ. ಇದೇ ಜನವರಿಯಲ್ಲು ಹೊಸ ಕ್ರೆಟಾವನ್ನು ಬಿಡುಗಡೆ ಮಾಡಲಾಯಿತು. ADAS ಅನ್ನು ಇದರ ಮೊದಲ ಎರಡು ಟ್ರಿಮ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್: ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಜುಲೈ 2023 ರಲ್ಲಿ ಬಿಡುಗಡೆಯಾಗಿದೆ. ಇದು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ADAS ಭಾಗವಾಗಿ 17 ಫೀಚರ್‌ಗಳನ್ನು ಹೊಂದಿದೆ. ADAS ಅದರ ಟಾಪ್-ಸ್ಪೆಕ್ GTX+, X-ಲೈನ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ. ಕಿಯಾ ಸೆಲ್ಟೋಸ್ ಬೆಲೆ ರೂ. 10.90 ಲಕ್ಷದಿಂದ ರೂ. 20.30 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








