ಭಾರತದಲ್ಲಿ ಅರ್ಭಟಿಸಿ ಮರೆಯಾದ 'ಮಗಧೀರ' ಫೋರ್ಡ್ ಎಂಡೀವರ್ ಮರಳಿ ಬರುತ್ತಿದೆಯೇ?
ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ (Ford) 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಈ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಫೋರ್ಡ್ ಕಂಪನಿಯು ನಷ್ಟದಿಂದ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿದ್ದರು.
ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಭಾರತೀಯ ಮಾರುಕಟ್ಟೆಗೆ ಫೋರ್ಡ್ ರಿ-ಎಂಟ್ರಿ ಬಗ್ಗೆ ವದಂತಿಗಳು ಹರಡಿವೆ. ತಮಿಳುನಾಡಿನಲ್ಲಿ ಫೋರ್ಡ್‌ನ ಉತ್ಪಾದನಾ ಸೌಲಭ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದ JSW ಗ್ರೂಪ್‌ನೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಈ ಊಹಾಪೋಹಗಳಿಗೆ ತೆರೆ ಎಳೆದರು. ಮುಸ್ತಾಂಗ್ ಮಾರ್ಚ್-ಇ ಎಲೆಕ್ಟ್ರಿಕ್ ಕ್ರಾಸ್ಒವರ್, ಹೊಸ ಎಂಡೀವರ್ ಮತ್ತು ಮಿಡ್ ಗಾತ್ರದ ಎಸ್‍ಯುವಿಯಂತಹ ಮಾದರಿಗಳಿಗೆ ಇತ್ತೀಚಿನ ಪೇಟೆಂಟ್ಗಳು ಊಹಾಪೋಹವನ್ನು ಹೆಚ್ಚಿಸಿದೆ.

ಹೊಸ ಫೋರ್ಡ್ ಎವರೆಸ್ಟ್ ಅನ್ನು (ಭಾರತದಲ್ಲಿ ಫೋರ್ಡ್ ಎಂಡೀವರ್ ಎಂದು ಕರೆಯಲಾಗುತ್ತದೆ) ಚೆನ್ನೈನಲ್ಲಿ ಟವ್ ಟ್ರಕ್‌ನಲ್ಲಿ ಸಾಗಿಸುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಥೈಲ್ಯಾಂಡ್‌ನಲ್ಲಿ ಈಗಾಗಲೇ ಲಭ್ಯವಿರುವ ಎವರೆಸ್ಟ್ ಮಾದರಿಯಾಗಿದೆ. ವರದಿಗಳ ಪ್ರಕಾರ, ಫೋರ್ಡ್ ಎಂಡೀವರ್ (Ford Endeavour) ಕಂಪನಿಯ ಚೆನ್ನೈ ಸ್ಥಾವರದಲ್ಲಿ ಜೋಡಿಸಲಾದ ಕಂಪ್ಲೀಟ್ಲಿ ಬಿಲ್ಟ್ ಅಪ್ (CBU) ಯುನಿಟ್ ಆಗಿ ಭಾರತಕ್ಕೆ ಮರಳಬಹುದು.
ಈ ತಂತ್ರವು ಅದರ ಹಿಂದಿನದಕ್ಕೆ ಹೋಲಿಸಿದರೆ ಹೆಚ್ಚಿನ ಬೆಲೆಗೆ ಕಾರಣವಾಗಬಹುದು. ಫೋರ್ಡ್‌ನ ಇಂಡಿಯಾ ರಿಟರ್ನ್ ಮತ್ತು ಉತ್ಪನ್ನದ ಕಾರ್ಯತಂತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಹೊಸ ಫೋರ್ಡ್ ಎಂಡೀವರ್ ಲ್ಯಾಡರ್-ಫ್ರೇಮ್ ಆರ್ಕಿಟೆಕ್ಚರ್ ಮತ್ತು ಅದರ ಪೂರ್ವವರ್ತಿಯಿಂದ ಕೆಲವು ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದೆ, ಇದು ರೇಂಜರ್‌ನೊಂದಿಗೆ ಕೆಲವು ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುತ್ತದೆ.

ಗಮನಾರ್ಹ ವೈಶಿಷ್ಟ್ಯಗಳೆಂದರೆ ಇಂಟಿಗ್ರೇಟೆಡ್ ಸಿ-ಆಕಾರದ DRLಗಳೊಂದಿಗೆ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ವಿಸ್ತರಿಸಿದ ಮುಂಭಾಗದ ಗ್ರಿಲ್, 21-ಇಂಚಿನ ಅಲಾಯ್ ವ್ಹೀಲ್ ಗಳು, L- ಆಕಾರದ ಟೈಲ್‌ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಅನ್ನು ಹೊಂದಿದೆ.
ಇನ್ನು ಹೊಸ ಎಂಡೀವರ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 12-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.4-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆದರ್ ಸುತ್ತಿದ ಸ್ಟೀರಿಂಗ್ ವೀಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವಿಹಂಗಮ ಸನ್‌ರೂಫ್ ಅನ್ನು ಹೊಂದಿದೆ. ADAS ತಂತ್ರಜ್ಞಾನ, ಒಂಬತ್ತು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳು ಎಸ್‍ಯುವಿಯ ಸುರಕ್ಷತೆಯ ಹೆಚ್ಚಿಸುವ ನಿರೀಕ್ಷೆಯಿದೆ.
ಅಂತರಾಷ್ಟ್ರೀಯವಾಗಿ, ಹೊಸ ಫೋರ್ಡ್ ಎವರೆಸ್ಟ್ (ಎಂಡೀವರ್) ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170 bhp ಮತ್ತು 405 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಹೆಚ್ಚುವರಿಯಾಗಿ, 2.0-ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 210 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‍ಯುವಿಯು ಆರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ ಮತ್ತು 4X2 ಮತ್ತು 4X4 ಡ್ರೈವ್‌ಟ್ರೇನ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.
Source: Autocar India


Click it and Unblock the Notifications








