ಹೊಸ ಜೀಪ್‌ ರಾಂಗ್ಲರ್‌ ಸಂಪೂರ್ಣ ರಿವ್ಯೂ ವಿಡಿಯೋ: ಆಫ್‌ರೋಡ್‌ನಲ್ಲಿ ಇದನ್ನು ಮೀರಿಸುವವರಿಲ್ಲ!

2024 ಜೀಪ್ ರಾಂಗ್ಲರ್ ಫೇಸ್‌ಲಿಫ್ಟ್‌‌ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಜೀಪ್‌ ಕಂಪನಿಯ ಪ್ರಸಿದ್ಧ ಕಾರುಗಳಲ್ಲಿ ರಾಂಗ್ಲರ್‌ ಸಹ ಒಂದು. ಈ ಕಾರನ್ನು ನಮ್ಮ ತಂಡ ಚಲಾಯಿಸಿ ನೋಡಿದ್ದು, ಈ ಕುರಿತಾದ ಸಂಪೂರ್ಣ ಅನುಭವವನ್ನು ವಿಡಿಯೋ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇವೆ.

ಜೀಪ್‌ ರಾಂಗ್ಲರ್‌ನಲ್ಲಿ (2024 Jeep Wrangler) ಈ ಹಿಂದಿನ ಮಾದರಿಗೆ ಏನು ಬದಲಾಗಿದೆ ಮತ್ತು ಬದಲಾಗಿಲ್ಲ ಎಂದು ನೊಡುವುದಾದರೆ, ಈ ಕಾರಿನ ಹೊರಾಂಗಣ ವಿಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಯಷ್ಟೇ ಆಗಿದೆ. ಹೊಸ ಅಪ್‌ಟೆಟೆಟ್‌ ಗ್ರಿಲ್‌, 17 ಮತ್ತು 18 ಇಂಚ್‌ ಅಯ್ಕೆಯಲ್ಲಿನ ಲಾಯ್‌ ವ್ಹೀಲ್‌ಗಳು, ಮತ್ತು ನೀವು ಆಯ್ದುಕೊಳ್ಳುವ ಆಯ್ಕೆಯ ಆಧಾರದ ಮೇಲೆ ಗೊರಿಲ್ಲಾ ಗ್ಲಾಸ್‌ ವಿಂಡ್‌ ಶೀಲ್ಡ್‌ಗಳು ಈ ಕಾರಿನಲ್ಲಿ ಹೊಸದಾಗಿ ಲಭ್ಯವಿದೆ.

New Jeep Wrangler Facelift Review Video Engine Offroad Perfomence And More To Watch

ಈ ಕಾರಿನ ಒಳಭಾಗದಲ್ಲಿ ಕಳೆದ ಬಾರಿಯ ರಾಂಗ್ಲರ್‌ಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ. ಇದೀಗ ಹೊಸದಾಗಿ 12.3 ಇಂಚ್‌ನ ಇನ್ಪೋಟೇನ್‌ಮೆಂಟ್‌ ಡಿಸ್ಪ್ಲೇ ಈ ಕಾರಿನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಜೀಪ್‌ನ ಇತ್ತೀಚಿನ ಅನ್‌ಕನೆಕ್ಟ್‌ 5 ಆಪರೆಟಿಂಗ್‌ ಸಿಸ್ಟಂ ಅನ್ನು ಕಾಣಬಹುದಾಗಿದೆ. ಇನ್ನು ಈ ಡಿಸ್ಪ್ಲೇಯು ವೈರ್‌ಲೆಸ್‌ ಆ್ಯಂಡ್ರಾಯ್ಡ್‌ ಆಟೋ ಮತ್ತು ಆ್ಯಪಲ್‌ ಕಾರ್‌ಪ್ಲೇ ಬೆಂಬಲಿತವಾಗಿದೆ.

ಸುರಕ್ಷತೆಯಲ್ಲಿ ಜೀಪ್‌ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ. 2024 ಜೀಪ್‌ ರಾಂಗ್ಲರ್‌ನ (Jeep Wrangler Facelift) ಸುರಕ್ಷತೆಯ ಬಗ್ಗೆ ಮಾತನಾಡುವುದಾದರೆ, ಅತ್ಯಾಧುನಿಕ ಟ್ರೈವರ್‌ ಅಸಿಸ್ಟೆಂಟ್‌ ಸಿಸ್ಟಂ/ಅಡಾಸ್‌ ಅನ್ನು ಅಳವಡಿಸಲಾಗಿದೆ. ಅದೇ ರೀತಿ ಸಾಧಾರಣವಾಗಿ ಈ ಕಾರಿನಲ್ಲಿ ಸಿಗುವಂತಹ ಇತರ ಸೇಫ್ಟಿ ಫೀಚರ್‌ಗಳಾದ ೬ ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌, ಹಿಲ್‌ ಡಿಸೆಂಟ್‌ ಕಂಟ್ರೋಲ್ಗಳನ್ನು ನಾವು ಕಾಣಬಹುದು.

ಹೊಸ ಜೀಪ್‌ ರಾಂಗ್ಲರ್‌ನಲ್ಲಿ 2.0-ಲೀಟರ್‌ ಟರ್ಬೋ ಪೆಟ್ರೋಲ್‌ ಫಿಯಟ್‌ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಲಭ್ಯವಿರುವ ರಾಂಗ್ಲರ್‌ಗೆ ೮ ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಗೇರ್‌ ಬಾಕ್ಸ್‌ ಆಯ್ಕೆಯಾಗಿ ಲಬ್ಯವಾಗಲಿದೆ. ಈ ಎಂಜಿನ್‌ ಸಹಾಯದಿಂದ ಜೀಪ್‌ ರಾಂಗ್ಲರ್‌ ಸುಮಾರು 270bhp ಮತ್ತು 400Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಇದು ಫೋರ್‌ ವ್ಹೀಲ್‌ ಟ್ರೈವ್‌ ಬೆಂಬಲಿತವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 25, 2024, 12:36 [IST]
English summary
New jeep wrangler facelift review video engine offroad performance and more to watch
Read more on ಜೀಪ್ jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+