ವಾಹನ ಪ್ರೇಮಿಗಳಿಗಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ 2024ರ ಕಿಯಾ ಸೆಲ್ಟೋಸ್ ಡೀಸೆಲ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ನವೀಕರಿಸಿದ 2024ರ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಈಗ ಕಿಯಾ ಸೆಲ್ಟೋಸ್ ಎಸ್‍ಯುವಿಯ ಡೀಸೆಲ್ ಮ್ಯಾನುವಲ್ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಇವುಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11,99,900 ರಿಂದ ರೂ.18,27,900 ಆಗಿದೆ.
ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯ ಹೊಸ ಡೀಸೆಲ್ ರೂಪಾಂತರಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ನೀಡಲಾಗಿದೆ.

ಗ್ರಾಹಕರು ಈಗ HTE, HTK, HTK+, HTX, ಮತ್ತು HTX+ ಸೇರಿದಂತೆ ಐದು ವಿಭಿನ್ನ ರೂಪಾಂತರಗಳಲ್ಲಿ 6-ಸ್ಪೀಡ್ ಡೀಸೆಲ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದು. ಸುರಕ್ಷತೆ ಮತ್ತು ಅತ್ಯಾಧುನಿಕತೆಯನ್ನು ಖಚಿತಪಡಿಸಿಕೊಳ್ಳಲು ಸೆಲ್ಟೋಸ್ ಅನ್ನು ನಿಖರವಾಗಿ ರಚಿಸಲಾಗಿದೆ, 32 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ಯಾಕಿಂಗ್ ಮಾಡಲಾಗಿದೆ. ಇವುಗಳಲ್ಲಿ, 15 ಹೈ-ಸುರಕ್ಷತಾ ಅಂಶಗಳು ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿ ಬರುತ್ತವೆ,
ಆದರೆ 17 ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮುಂದಕ್ಕೆ ಇರಿಸುತ್ತದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯು ಸುರಕ್ಷತೆ ಮತ್ತು ಅತ್ಯಾಧುನಿಕತೆಯಿಂದ ಕೂಡಿದೆ. ಈ ಕಿಯಾ ಎಸ್‍ಯುವಿಯಲ್ಲಿ 32 ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಇವುಗಳಲ್ಲಿ, 15 ಹೈ-ಸುರಕ್ಷತಾ ಅಂಶಗಳು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಇದರೊಂದಿಗೆ 17 ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮತ್ತೊಂದು ಲೆವೆಲ್ ಆಗಿದೆ.

ಈ ಹೊಸ ಸೆಲ್ಟೋಸ್ ಕೇವಲ ಸುರಕ್ಷತೆ ಮಾತ್ರವಲ್ಲದೇ ಸುಧಾರಿತ ತಂತ್ರಜ್ಞಾನ ಮತ್ತು ಐಷಾರಾಮಿ ಮಿಶ್ರಣವಾಗಿದೆ. ಈ ಎಸ್‍ಯುವಿಯಲ್ಲಿ 10.25-ಇಂಚಿನ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಮತ್ತು ಅದೇ ಗಾತ್ರದ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಒಳಗೊಂಡಿರುವ ಡ್ಯುಯಲ್-ಸ್ಕ್ರೀನ್ ಪನೋರಮಿಕ್ ಡಿಸ್‌ಪ್ಲೇಯಿಂದ ಕೂಡಿದೆ.
ಡ್ಯುಯಲ್ ಝೋನ್ ಸಂಪೂರ್ಣ ಆಟೋಮ್ಯಾಟಿಕ್ ಏರ್ ಕಂಡಿಷನರ್ ಕ್ಯಾಬಿನ್‌ನಲ್ಲಿ ನೀಡಿದೆ. ಇನ್ನು ಈ ಎಸ್‍ಯುವಿಯ ಮತ್ತೊಂದು ಪ್ರಮುಖ ಆಕರ್ಷಣೆ 17-ಇಂಚಿನ ಅಲಾಯ್ ವ್ಹೀಲ್ ಆಗಿದೆ. ಆದರೆ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ವಿವರಗಳಿಗೆ ಕಿಯಾದ ಗಮನಕ್ಕೆ ಪ್ರಮುಖ ಉದಾಹರಣೆಗಳಾಗಿವೆ. ಇದರೊಂದಿಗೆ 360-ಡಿಗ್ರಿ ಕ್ಯಾಮೆರಾ ಸಿಸ್ಟಂ, ಆರು ಏರ್‌ಬ್ಯಾಗ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಹೊಂದಿದೆ.
ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಕಾರ್ಯತಂತ್ರದ ಅಧಿಕಾರಿಯಾದ ಮ್ಯುಂಗ್-ಸಿಕ್ ಸೊಹ್ನ್ ಅವರು ಮಾತನಾಡಿ, ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯ ಡ್ರೈವಿಂಗ್ ಆಯ್ಕೆಗಳನ್ನು ನೀಡಿ ಕಂಪನಿಯ ಸಮರ್ಪಣೆಯನ್ನು ಒತ್ತಿ ಹೇಳಿದರು. ಮ್ಯಾನುವಲ್ ಗೇರ್ ಬಾಕ್ಸ್ ಗಾಗಿ ಹಲವಾರು ಗ್ರಾಹಕರ ಬೇಡಿಕೆ ಇಟ್ಟಿದರು, ಇದೀಗ ಕಂಪನಿಯು ಕಿಯಾ ಸೆಲ್ಟೋಸ್‌ನ ಡೀಸೆಲ್ ರೂಪಾಂತರಗಳಲ್ಲಿ ಈ ಆಯ್ಕೆಗಳನ್ನು ಪರಿಚಯಿಸುವ ಮೂಲಕ ಪ್ರತಿಕ್ರಿಯಿಸಿದೆ.
2019ರಿಂದ ಬಿಡುಗಡೆಯಾದಗಿನಿಂದ, ಭಾರತದ ಗ್ರಾಹಕರು ಹೊಸ ಸೆಲ್ಟೋಸ್ ಎಸ್‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಈ ರಿಫ್ರೆಶ್ ಮಾಡೆಲ್ ಕಿಯಾ ಸೆಲ್ಟೋಸ್ ಎಸ್‍ಯುವಿ ಮಾದರಿಯು ಸೋರ್ಟಿ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications