Kia Sonet: ಕಿಯಾ ಸೋನೆಟ್ ಫೇಸ್‌ಲಿಫ್ಟ್ ಮೈಲೇಜ್ ಬಹಿರಂಗ, ಇನ್ನೂ ಶೋರೂಂ ತುಂಬಲಿವೆ!
ಕಿಯಾ ಇಂಡಿಯಾ (Kia India) ಸೋನೆಟ್ ಫೇಸ್‌ಲಿಫ್ಟ್ (Sonet Facelift) ಮೈಲೇಜ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದೆ ಎಂಬ ವಿವರಗಳು ಲಭ್ಯವಾಗಿದೆ. ಇದರಿಂದ ಶೀಘ್ರದಲ್ಲೇ ಈ ಎಸ್‌ಯುವಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ಸುಲಭವಾಗಿ ತಿಳಿಯುತ್ತದೆ. ಈಗಾಗಲೇ, ಬುಕ್ಕಿಂಗ್ ಕೂಡ ಶುರುವಾಗಿದೆ. ಆಸಕ್ತ ಗ್ರಾಹಕರು, ರೂ.25,000 ಪಾವತಿಸಿ ಆರ್ಡರ್ ಮಾಡಬಹುದು.
ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet Facelift) ಎಸ್‌ಯುವಿಯ ಪೆಟ್ರೋಲ್ ರೂಪಾಂತರಗಳು ಎಂಜಿನ್‌ಗೆ ಅನುಗುಣವಾಗಿ 18.70 kmpl - 19.20 kmpl, ಡೀಸೆಲ್ ರೂಪಾಂತರಗಳು 18.60 kmpl - 22.30 kmpl ಮೈಲೇಜ್ ನೀಡುತ್ತವೆ ಎಂಬ ವಿವರಗಳು ಸಿಕ್ಕಿದೆ. ಇಂಧನ ದಕ್ಷತೆ ಹೆಚ್ಚಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಗ್ರಾಹಕರು, ಈ ಕಾರನ್ನು ಇಷ್ಟಪಟ್ಟು ಖರೀದಿಸಬಹುದು.

ಕಿಯಾ ಇಂಡಿಯಾ ನೂತನ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಗಾಗಿ ಡಿಸೆಂಬರ್ 20ರ ಮಧ್ಯರಾತ್ರಿಯಿಂದ ಬುಕ್ಕಿಂಗ್ ಆರಂಭಿಸಿತ್ತು. ಸದ್ಯ ಖರೀದಿದಾರರು ತಾಮುಂದು, ನಾಮುಂದು ಎಂದು ಆರ್ಡರ್ ಮಾಡುತ್ತಾರೆ. ನೀವು ಕೂಡ ಈ ಕಾರನ್ನು ಕೊಂಡುಕೊಳ್ಳಲು ಆಸಕ್ತಿ ಹೊಂದಿದ್ದರೆ, ರೂ.25,000 ಮುಂಗಡ ಹಣ ಪಾವತಿಸಿ ಕಿಯಾದ ಅಧಿಕೃತ ವೆಬ್‌ಸೈಟ್ ಅಥವಾ ವಿವಿಧ ರಾಜ್ಯಗಳಲ್ಲಿರುವ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಬುಕ್ ಮಾಡಬಹುದು.
ನೂತನ ಕಿಯಾ ಸೋನೆಟ್ ಕಾರಿನ ಎಂಜಿನ್ ಕುರಿತು ಮಾತನಾಡುವುದಾದರೆ, ಇದು 1.5-ಲೀಟರ್ ಡಿಸೇಲ್, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಪಡೆದಿದೆ. ಅದಕ್ಕೆ ತಕ್ಕಂತೆ ಪವರ್ ಹೊರಹಾಕುತ್ತದೆ. 5-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೂ ಲಭ್ಯವಿದೆ.

ಹೊಚ್ಚ ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್, ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಒಳಗೊಂಡಂತೆ 7 ರೂಪಾಂತರಗಳು, ಗ್ಲೇಸಿಯರ್ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲೂ, ಕ್ಲಿಯರ್ ವೈಟ್, ಪ್ಯೂಟರ್ ಆಲಿವ್ ಸೇರಿದಂತೆ 11 ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ವಿನ್ಯಾಸದ ದೃಷ್ಟಿಯಿಂದಲ್ಲೂ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಮುಂಭಾಗ - ಹಿಂಭಾಗ ಹೆಚ್ಚು ಅತ್ಯಾಕರ್ಷಕವಾಗಿದೆ. ಅತ್ಯಾಧುನಿಕ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲೈಟ್, ಎಲ್ಇಡಿ ಫಾಗ್ ಲೈಟ್ಸ್, ಆಲ್-ವೀಲ್ ಡಿಸ್ಕ್ ಬ್ರೇಕ್ಸ್, 16 - ಇಂಚಿನ ಅಲಾಯ್ ವೀಲ್ಸ್ ಅನ್ನು ಒಳಗೊಂಡಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಡ್ರೈವ್ ಮೋಡ್ಸ್, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಒಟಿಎ ಅಪ್‌ಡೇಟ್ ಅನ್ನು ಒಳಗೊಂಡಿದೆ. ಬಹುತೇಕ ಈ ತಿಂಗಳು ಸೋನೆಟ್ ವಿತರಣೆಗಳು ಶುರುವಾಗುವ ನಿರೀಕ್ಷೆಯಿದೆ. ಬೆಲೆ ಕೂಡ ಕೆಲವೇ ದಿನಗಳಲ್ಲಿ ಘೋಷಣೆಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








