Maruti: ಹೊಸ ಮಾರುತಿ ಡಿಜೈರ್ ಶೀಘ್ರದಲ್ಲೇ ಸನ್‌ರೂಫ್‌ನೊಂದಿಗೆ ಬರಲಿದೆ! ಭರ್ಜರಿ ವಿಶೇಷತೆಗಳು

ಭಾರತದಲ್ಲಿ ಸದ್ಯ ಎಸ್‌ಯುವಿಗಳಿಗೆ ಸಖತ್ ಬೇಡಿಕೆ ಇದೆ, ಸೆಡಾನ್‌ಗಳ ವಿಷಯಕ್ಕೆ ಬಂದರೆ ಕೆಲವೇ ಕಾರುಗಳು ಮಾತ್ರ ತಮ್ಮ ವಿಭಾಗದಲ್ಲಿ ಪ್ರಾಬಲ್ಯ ಹೊಂದಿವೆ. ಅಂಥವುಗಳಲ್ಲಿ ಮಾರುತಿ ಡಿಜೈರ್ ಕೂಡ ಒಂದು, ಈಗ ಪೈಪೋಟಿ ಹೆಚ್ಚಾಗುತ್ತಿರುವ ಕಾರಣ ಇರುವ ಬೇಡಿಕೆಯನ್ನು ಉಳಿಸಿಕೊಳ್ಳಲು ಹೊಸ ಫೀಚರ್‌ಗಳೊಂದಿಗೆ ಡಿಜೈರ್ ಅನ್ನು ಪರಿಚಯಿಸುವ ಅನಿವಾರ್ಯತೆ ಕಂಪನಿಗಿದೆ.

ಸೆಡಾನ್‌ಗಳಿಗೆ ಸಂಬಂಧಿಸಿದಂತೆ, ನವೆಂಬರ್ 2023 ರಲ್ಲಿ 16 ಸಾವಿರ ಯುನಿಟ್‌ಗಳು ಮಾರಾಟವಾಗಿದ್ದರೆ ಅದರಲ್ಲಿ ಡಿಜೈರ್ ಹೆಚ್ಚು ಮಾರಾಟವಾಗುವ ವಾಹನವಾಗಿ ಗುರ್ತಿಸಿಕೊಂಡಿದೆ. ಇದೇ ಕಾರಣಕ್ಕೆ 4ನೇ ಜನ್ ಡಿಜೈರ್‌ನೊಂದಿಗೆ, ಮಾರುತಿ ಸುಜುಕಿ (Maruti Suzuki) ತನ್ನ ಆಕರ್ಷಣೆಯನ್ನು ಹೆಚ್ಚಿಸಲು ಮತ್ತು ಆಧುನಿಕ ಫೀಚರ್‌ಗಳನ್ನು ಕೇಳುತ್ತಿರುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಿಡುಗಡೆ ಮಾಡಲು ನೋಡುತ್ತಿದೆ.

new-maruti-dzire-will-come-with-a-sunroof-and-more-features

ಮೂಲಗಳ ಪ್ರಕಾರ ಟ್ರೆಂಡಿ ವೈಶಿಷ್ಟ್ಯಗಳನ್ನು ನೀಡುವ ಮೂಲಕ 4ನೇ ಜನ್ ಮಾರುತಿ ಡಿಜೈರ್ ಅನ್ನು ಹೆಚ್ಚು ಅಪೇಕ್ಷಣೀಯಗೊಳಿಸಲು ಕಂಪನಿ ಉದ್ದೇಶಿಸಿದೆ. ವರದಿಗಳ ಪ್ರಕಾರ ಶೇ95 ರಷ್ಟು ಭಾರತೀಯರಿಗೆ ಸನ್‌ರೂಫ್ ಅಗತ್ಯವಿಲ್ಲ, ಅದನ್ನು ಹೆಚ್ಚಾಗಿ ಬಳಸುವುದೂ ಇಲ್ಲ. ಆದರೂ ಇದನ್ನು ಗ್ರಾಹಕರು ಹೆಚ್ಚಾಗಿ ಕೇಳುತ್ತಿರುವ ಒಂದು ಟ್ರೆಂಡಿ ವೈಶಿಷ್ಟ್ಯವಾಗಿದೆ.

ಹಾಗಾಗಿ ಮಾರುತಿ ಕೂಡ ತನ್ನ ಮುಂಬರುವ ಡಿಜೈರ್ ಸೆಡಾನ್‌ನಲ್ಲಿ ಸನ್‌ರೂಫ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಮಾರುತಿ ಸುಜುಕಿಯು 4ನೇ ಜನ್ ಡಿಜೈರ್ ಜೊತೆಗೆ ಸಿಂಗಲ್ ಪೇನ್ ಸನ್‌ರೂಫ್ ಅನ್ನು ನೀಡುತ್ತಿದೆ. ಹೊಸ ಮಾದರಿಯು 4ನೇ ಜನ್ ಸ್ವಿಫ್ಟ್ ಅನ್ನು ಆಧರಿಸಿದ್ದು, ಅದರ ಪ್ಲಾಟ್‌ಫಾರ್ಮ್ ಮತ್ತು ಅನೇಕ ವಿನ್ಯಾಸ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.

new-maruti-dzire-will-come-with-a-sunroof-and-more-features

ಇನ್ನು ಮಾರುತಿ ಸುಜುಕಿ ಡಿಜೈರ್ ಟಾಪ್ ಸ್ಪೆಕ್ ZXI+ ಟ್ರಿಮ್‌ನೊಂದಿಗೆ ಮಾತ್ರ ಸನ್‌ರೂಫ್ ಅನ್ನು ನೀಡಬಹುದು. ಹಿಂಭಾಗದ ಪ್ರಯಾಣಿಕರಿಗೂ ಆಕಾಶ ನೋಟವನ್ನು ಪಡೆಯಲು ಅನುವು ಮಾಡಿಕೊಡಲು ಸನ್‌ರೂಫ್ ಅನ್ನು ಮಧ್ಯದಲ್ಲಿ ನೀಡಬಹುದು. ಡಿಜೈರ್ ಸನ್‌ರೂಪ್ ಪಡೆದರೆ ಭವಿಷ್ಯದಲ್ಲಿ ಹೆಚ್ಚಿನ ಮಾರುತಿ ವಾಹನಗಳು ಕೂಡ ಸನ್‌ರೂಫ್ ಪಡೆಯಬಹುದು ಎನ್ನಲಾಗಿದೆ.

ಸಬ್ 4m ಸೆಡಾನ್ ವಿಭಾಗ: ಈ ಸೆಡಾನ್ ವಿಭಾಗದಲ್ಲಿ, ಪ್ರಸ್ತುತ 4 ಕಾರುಗಳಿಗೆ ತುಂಬಾ ಬಜಾರ್ ಇದೆ. ಅವುಗಳಲ್ಲಿ ಮೊದಲನೆಯದು ಮಾರುತಿ ಸುಜುಕಿ ಡಿಜೈರ್, ಉಳಿದಂತೆ ಹುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್ ಇವೆ. ನಾವು ನವೆಂಬರ್ 2023 ರಲ್ಲಿ ಸೆಡಾನ್ ಮಾರಾಟವನ್ನು ಗಮನಿಸಿದರೆ, ಡಿಜೈರ್ ಅತಿ ಹೆಚ್ಚು ಮಾರಾಟವಾಗಿದ್ದು ನಂತರದ ಸ್ಥಾನಗಳಲ್ಲಿ ಔರಾ, ಅಮೇಜ್ ಮತ್ತು ಟಿಗೋರ್ ಇವೆ.

new-maruti-dzire-will-come-with-a-sunroof-and-more-features

4 ನೇ ತಲೆಮಾರಿನ ಮಾರುತಿ ಡಿಜೈರ್, SUV ಗಳು ನೀಡುತ್ತಿರುವ ವೈಶಿಷ್ಟ್ಯ-ಸಮೃದ್ಧ ಅನುಭವದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದೆ. ಹೊಸ ಡಿಜೈರ್ ಪ್ರಸ್ತುತ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿದೆ. ನಮ್ಮ ಪ್ರಕಾರ 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಪ್ರೀಮಿಯಂ ಡ್ಯಾಶ್‌ಬೋರ್ಡ್, ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಮತ್ತು ಸನ್‌ರೂಫ್ ಇರಲಿದೆ.

ಇವಿಷ್ಟೇ ಅಲ್ಲದೇ HUD, ಆಟೋ ವಿಂಡ್‌ಸ್ಕ್ರೀನ್ ವೈಪರ್‌ಗಳು ಸೇರಿದಂತೆ ಇತರ ವೈಶಿಷ್ಟ್ಯಗಳೂ ಇರಬಹುದು. ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಪ್ಯಾಡ್, 6 ಏರ್‌ಬ್ಯಾಗ್‌ಗಳು, ಪ್ರೀಮಿಯಂ ಆಡಿಯೊ ಸಿಸ್ಟಮ್ 4ನೇ ಜನ್ ಡಿಜೈರ್‌ನಲ್ಲಿ ನಾವು ನೋಡಬಹುದಾದ ಪ್ರಮುಖ ವೈಶಿಷ್ಟ್ಯಗಳಾಗಿವೆ. ಈ ಬಗ್ಗೆ ಕೆಲವೇ ದಿಗಳಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 3, 2024, 11:37 [IST]
English summary
New maruti dzire will come with a sunroof and more features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+