ಮತ್ತೆ ಅಖಾಡಕ್ಕೆ ರೆನಾಲ್ಟ್ ಡಸ್ಟರ್ ಎಂಟ್ರಿ: ಈ ದೈತ್ಯ ಕಾರು ಬಂದರೆ ಸಾಮಾನ್ಯರಿಗೂ ಲಕ್ಷುರಿ ಪಕ್ಕಾ!

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ರೆನಾಲ್ಟ್ ಡಸ್ಟರ್ (Renault Duster) ಕೂಡ ಒಂದಾಗಿದೆ. ರೆನಾಲ್ಟ್ ಡಸ್ಟರ್ 7-ಸೀಟರ್ ಆವೃತ್ತಿಯು ಭಾರತಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ರೆನಾಲ್ಟ್-ನಿಸ್ಸಾನ್ ಮೈತ್ರಿಯು ಜಂಟಿ ಟೀಸರ್ ಅನ್ನು ಹಂಚಿಕೊಳ್ಳುವ ಮೂಲಕ ಎರಡು ಹೊಸ ಎಸ್‍ಯುವಿಗಳನ್ನ್ನು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈ ಮುಂಬರುವ ಮಾದರಿಯು ಭಾರತದಲ್ಲಿ ಬಿಡುಗಡೆಯಾದಾಗ ಈ ಹೆಸರನ್ನು ಉಳಿಸಿಕೊಳ್ಳುತ್ತದೆಯೇ ಎಂದು ನಮಗೆ ಖಚಿತವಿಲ್ಲ. ರೆನಾಲ್ಟ್ ಬಿಗ್‌ಸ್ಟರ್ ಅಥವಾ ಡಸ್ಟರ್ ಎಂಬ ಹೆಸರಿನಲ್ಲಿ ಬರಲಿದೆ ಎಂದು ವರದಿಗಳಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಭಾರೀ ಜನಪ್ರಿಯತೆ ಗಳಿಸಿದ ಎಸ್‍ಯುವಿಗಳಲ್ಲಿ ಒಂದಾಗಿದೆ.

ಈ ನಡುವೆ ಉತ್ಪಾದನೆಗೆ ಸಿದ್ಧವಾಗಿರುವ ಡೇಸಿಯಾ ಬಿಗ್‌ಸ್ಟರ್ ಮೂರು-ಸಾಲಿನ ಎಸ್‍ಯುವಿಯನ್ನು 2024ರ ಪ್ಯಾರಿಸ್ ಮೋಟಾರ್ ಶೋನಲ್ಲಿ ಜಾಗತಿಕ ಚೊಚ್ಚಲ ಪ್ರದರ್ಶನಕ್ಕೆ ಮುಂಚಿತವಾಗಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ ಡೇಸಿಯಾ ಅಥವಾ ರೆನಾಲ್ಟ್ ಬಿಗ್‌ಸ್ಟರ್ (Renault Bigster) ಎಸ್‍ಯುವಿಯು ಅಕ್ಟೋಬರ್ 14 ಮತ್ತು 20ರ ನಡುವೆ ಪ್ಯಾರಿಸ್ ಮೋಟಾರ್ ಶೋನಲ್ಲಿ ಪ್ರದರ್ಶನವಾಗಲಿದೆ.

Renault Bigster

ಈ ಹೊಸ ಡೇಸಿಯಾ ಬಿಗ್‌ಸ್ಟರ್ ಎಸ್‍ಯುವಿ ಮುಂದಿನ ವರ್ಷ ಹೊಸ-ಜನರೇಷನ್ 5-ಸೀಟರ್ ಆಗಮನದ ನಂತರ ಅದೇ ಮಾದರಿಯು 7-ಸೀಟರ್ ರೆನಾಲ್ಟ್ ಡಸ್ಟರ್ ಅಥವಾ ರೆನಾಲ್ಟ್ ಬಿಗ್‌ಸ್ಟರ್ ಆಗಿ ಭಾರತಕ್ಕೆ ಬರಬಹುದು. ಟೀಸರ್ ನಲ್ಲಿ ಈ ಎಸ್‍ಯುವಿಯ ಹಿಂದಿನ ಪ್ರೊಫೈಲ್ ಅನ್ನು ತೋರಿಸುತ್ತದೆ, ಅದರ ಕಾನ್ಸೆಪ್ಟ್ ಕಂಡುಬರುವಂತೆಯೇ ವೈ- ಆಕಾರದ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ

ಈ ಡೇಸಿಯಾ ಬಿಗ್‌ಸ್ಟರ್ ಎಸ್‍ಯುವಿ ವಿಶಾಲವಾದ, ಸ್ಲಿಮ್ ಗ್ರಿಲ್, ಪ್ರಕಾಶಿತ ಅಂಶಗಳೊಂದಿಗೆ ಸ್ಲಿಮ್ ಗ್ರಿಲ್, ವೈ-ಆಕಾರದ ಹೆಡ್‌ಲ್ಯಾಂಪ್‌ಗಳು, ಕೆಳಭಾಗದಲ್ಲಿ ಬೃಹತ್ ಹೊದಿಕೆಯನ್ನು ಹೊಂದಿರುವ ದೊಡ್ಡ ಲೋವರ್ ಏರ್ ಡ್ಯಾಂ, ಎರಡೂ ಬದಿಗಳಲ್ಲಿ ಏರ್ ವೆಂಟ್ ಮತ್ತು ಭಾರೀ ಪ್ರಮಾಣದಲ್ಲಿ ಅದರ ವಿನ್ಯಾಸದ ಹೆಚ್ಚಿನ ಅಂಶಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

Renault Bigster

ಡೇಸಿಯಾ ಬಿಗ್‌ಸ್ಟರ್ ಎಸ್‍ಯುವಿ ಬಾನೆಟ್. ಬಿಗ್‌ಸ್ಟರ್ ಕಾನ್ಸೆಫ್ಟ್ ಫೆಂಡರ್‌ಗಳು, ಚಿಕ್ಕ ಮುಂಭಾಗ ಮತ್ತು ದೊಡ್ಡ ಹಿಂಭಾಗದ ಓವರ್‌ಹ್ಯಾಂಗ್‌ಗಳು, ಟ್ರೆಪೆಜೋಡಲ್ ವೀಲ್ ಆರ್ಚ್‌ಗಳು ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ಗಳನ್ನು ಸಹ ಹೊಂದಿದೆ. ಸುಮಾರು 4.6 ಮೀಟರ್ ಉದ್ದವನ್ನು ಹೊಂದಿರುವ ಡೇಸಿಯಾ ಬಿಗ್‌ಸ್ಟರ್ (7-ಆಸನಗಳ ರೆನಾಲ್ಟ್ ಡಸ್ಟರ್) CMF-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಹೊಸ-ಜೆನ್ ಡಸ್ಟರ್ (5-ಸೀಟುಗಳು) ನೊಂದಿಗೆ ಹಲವಾರು ಯುನಿಟ್ ಗಳನ್ನು ಹಂಚಿಕೊಳ್ಳುತ್ತದೆ.

ಡೇಸಿಯಾ ತನ್ನ ಮುಂಬರುವ ಎಸ್‍ಯುವಿ ಒಳಗೆ ಮತ್ತು ಹೊರಗೆ ಮರುಬಳಕೆಯ ಮತ್ತು ಬಣ್ಣವಿಲ್ಲದ ವಸ್ತುಗಳನ್ನು ಬಳಸುವುದಾಗಿ ಹೇಳಿದೆ. ಇನ್ನು ಬಿಗ್‌ಸ್ಟರ್ ಎಸ್‌ಯುವಿಯನ್ನು ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಭಾರತದಲ್ಲಿ, 7-ಸೀಟರ್ ರೆನಾಲ್ಟ್ ಡಸ್ಟರ್ ಎರಡು ಟರ್ಬೊ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರುವ ಸಾಧ್ಯತೆಯಿದೆ.

Renault Bigster

ಈ ಹೊಸ ಎಸ್‍ಯುವಿಯ ಪ್ರೊಫೈಲ್‌ನಲ್ಲಿ, ಹೊಸ ಡಸ್ಟರ್ ಕೆಲವು ಆಧುನಿಕ ಸ್ಟೈಲಿಂಗ್ ಅಂಶಗಳೊಂದಿಗೆ ಪರಿಚಿತವಾಗಿದೆ. ಈ ಹೊಸ ಜನರೇಷನ್ ಮಾದರಿಯು ಹಿಂದಿನ ಮಾದರಿಗಿಂತ ಸ್ವಲ್ಪ ಉದ್ದವಾಗಿದೆ. ಇದು ಗಮನಾರ್ಹವಾಗಿ ದೊಡ್ಡದಾಗಿ ಮತ್ತು ಸ್ಪೋರ್ಟಿಯರ್ ಆಗಿ ಬರಲಿದೆ. ಹೊಸ ಡಸ್ಟರ್‌ನ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನದಲ್ಲಿ ಅತ್ಯಾಧುನಿಕ ವೈಶಿಷ್ಟ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 7, 2024, 16:21 [IST]
English summary
New renault bigster suv teased details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+