ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ವಿಶೇಷತೆಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2024 ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು (Tata Harrier EV) ಪ್ರದರ್ಶಿಸಿದೆ. ಈ ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯು ಹಸಿರು ಬಣ್ಣದಲ್ಲಿದ್ದು, ಎಲೆಕ್ಟ್ರಿಕ್ ವಾಹನವೆಂಬ ಲುಕ್ ಅನ್ನು ನೀಡಲು ಕೆಲವು ಬದಲಾವಣೆಗಳಿವೆ.
ಬ್ಯಾಟರಿ ಪ್ಯಾಕ್: ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ಮೋಟಾರ್ ಮತ್ತು AWD ಸೆಟಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಲೋಡ್ (V2L) ಮತ್ತು ವಾಹನದಿಂದ ವಾಹನಕ್ಕೆ (V2V) ಚಾರ್ಜಿಂಗ್ ಸಾಮರ್ಥ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ, ಸುಮಾರು 60kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು ಅಂದಾಜು 400 ಕಿ.ಮೀ ನಿಂದ 500 ಕಿ.ಮೀ ರೆಂಜ್ ಅನ್ನು ನೀಡುತ್ತದೆ.

ವಿನ್ಯಾಸ: ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಹೊಸ ಬ್ಲಾಂಕ್ಡ್-ಆಫ್ ಗ್ರಿಲ್, ಕೋನೀಯ ಕ್ರೀಸ್‌ಗಳೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್, ಸ್ಪ್ಲಿಟ್ ಸೆಟಪ್ ಮತ್ತು ಬ್ಲ್ಯಾಕ್ ಹೌಸಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು ಮತ್ತು ಅದರ ಅಗಲವಾಗಿರುವ ಹೊಸ LED ಲೈಟ್ ಬಾರ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಬ್ಲಾಂಕ್ಡ್-ಆಫ್ ಪ್ಯಾನೆಲ್‌ನೊಂದಿಗೆ ಮರುವಿನ್ಯಾಸಗೊಳಸಿದೆ.
ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಅಲಾಯ್ ವ್ಹೀಲ್ ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಬ್ಲ್ಯಾಕ್ ಕ್ಲಾಡಿಂಗ್ ಮತ್ತು ಫೆಂಡರ್‌ಗಳಲ್ಲಿ ಇವಿ ಬ್ಯಾಡ್ಜ್‌ಗಳಂತಹ ಗಮನಾರ್ಹ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ. ಈ ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದಲ್ಲಿಹೊಸ LED ಲೈಟ್ ಬಾರ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.
ಈ ಹೊಸ ಟಾಟಾ ಎಲೆಕ್ಟ್ರಿಕ್ ಎಸ್‍ಯುವಿಯು ಇಂಡೆಂಟ್‌ಗಳೊಂದಿಗೆ ಟ್ವೀಕ್ ಮಾಡಿದ ಬಂಪರ್ ಮತ್ತು ಹೆಚ್ಚುವರಿ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಹೊಸ ಪಂಚ್ ಎಲೆಕ್ಟಿಕ್ ಮಾದರಿಯಂತೆಯೇ ಹ್ಯಾರಿಯರ್ ಎಲೆಕ್ಟಿಕ್ ಎಸ್‍ಯುವಿಯನ್ನು Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ , ಫ್ರಂಟ್-ವೀಲ್ ಡ್ರೈವ್ (FWD), ರಿಯರ್-ವೀಲ್ ಡ್ರೈವ್ (RWD), ಮತ್ತು ಆಲ್-ವೀಲ್ ಡ್ರೈವ್ (AWD) ಸಿಸ್ಟಮ್‌ಗಳನ್ನು ಸಂಪೂರ್ಟ್ ಮಾಡುತ್ತದೆ.
ಇದು ಪರ್ಮನೆಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್‌ಗಳು ಮತ್ತು ಇಂಡಕ್ಷನ್ ಮೋಟಾರ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ. ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ಇಂಟಿರಿಯರ್ ಸಾಮಾನ್ಯ ಹ್ಯಾರಿಯರ್ ಮಾದರಿಗೆ ಹೋಲುತ್ತದೆ. ಹೊಸ ಗ್ರೌಂಡ್-ಅಪ್ ಇವಿ ಪ್ಲಾಟ್‌ಫಾರ್ಮ್‌ನಿಂದಾಗಿ ಕ್ಯಾಬಿನ್ ಹೆಚ್ಚು ವಿಶಾಲವಾಗಿರುತ್ತದೆ.
ಫೀಚರ್ಸ್: ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಪೇಟೆಂಟ್‌ಗಳು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವಿಭಿನ್ನ ಡ್ರೈವಿಂಗ್ ಮೋಡ್‌ಗಳಿಗಾಗಿ ರೋಟರಿ ಡಯಲ್‌ಗಳೊಂದಿಗೆ ಹೊಸ ಸೆಂಟ್ರಕ್ ಕನ್ಸೋಲ್, ಹೊಸ ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಎಸಿ ವೆಂಟ್‌ಗಳಿಗೆ ಟಚ್ ಪ್ಯಾನೆಲ್ ಅನ್ನು ಒಳಗೊಂಡಿರುವ ತಾಂತ್ರಿಕವಾಗಿ ಸುಧಾರಿತ ಕ್ಯಾಬಿನ್ ಅನ್ನು ಒಳಗೊಂಡಿದೆ.
ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಜೊತೆಗೆ ಟಾಟಾ ಇತರ ಮಾದರಿಗಳನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು, ಅದರ ಉತ್ಪಾದನೆ-ಸಿದ್ಧ ರೂಪದಲ್ಲಿ Curvv ಕೂಪ್, Altroz Racer, ನೆಕ್ಸಾನ್ iCNG ಮತ್ತು ಸಫಾರಿ Dark Edition ಅನ್ನು ಪ್ರದರ್ಶಿಸಿತು. ಇನ್ನು ಈ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications