Tata: ಅಧಿಕೃತ ಬಿಡುಗಡೆಯ ಮುನ್ನವೇ ಪಂಚ್ ಇವಿ ಬೆಲೆ ಸೋರಿಕೆ: ಪ್ರತಿಕ್ರಿಯಿಸಿದ ಟಾಟಾ
ಟಾಟಾ ಅಂತಿಮವಾಗಿ ಬಹುನಿರೀಕ್ಷಿತ ಹೊಸ ಎಲೆಕ್ಟ್ರಿಕ್ ಪಂಚ್ EV (Tata Punch ev) ಅನ್ನು ದೇಶದಲ್ಲಿ ಅನಾವರಣಗೊಳಿಸಿದೆ. ಜೊತೆಗೆ ಬುಕಿಂಗ್ ಕೂಡ ಪ್ರಾರಂಭಿಸಿದ್ದು, ಭರ್ಜರಿ ಬೇಡಿಕೆಗೆ ಸಾಕ್ಷಿಯಾಗಿದೆ. ಎಲ್ಲವೂ ಸರಿ ಆದ್ರೆ ಎಲ್ಲರಲ್ಲೂ ಈಗಿರುವ ಮತ್ತೊಂದು ಪ್ರಶ್ನೆಯೆಂದರೆ ಬೆಲೆ ಎಷ್ಟಿರಬಹುದು? ಆದ್ರೆ ಟಾಟಾ ಮೋಟಾರ್ಸ್ ಇನ್ನು ಬೆಲೆಯನ್ನು ಬಹಿರಂಗಪಡಿಸಿಲ್ಲ.
ಇದೀಗ ಟಾಟಾ ಪಂಚ್ ಇವಿ ಬೆಲೆ ಬಹಿರಂಗವಾಗಿದೆ ಎನ್ನಲಾಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಮೈಕ್ರೋ-ಎಸ್‌ಯುವಿಯನ್ನು ಬುಕ್ ಮಾಡಿದ ಕೆಲವರು ತಮ್ಮ ಬುಕ್ ಮಾಡಿದ ವಾಹನಗಳ ಬೆಲೆಯನ್ನು ಇಮೇಲ್‌ನಲ್ಲಿ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಈ ಬೆಲೆ ಸೋರಿಕೆಯನ್ನು ಗಮನದಲ್ಲಿಟ್ಟುಕೊಂಡು, ಟಾಟಾ ಮೋಟಾರ್ಸ್ ಇದು ತಾಂತ್ರಿಕ ದೋಷ ಎಂದು ಹೇಳಿದ್ದು, ಅದನ್ನು ಪರಿಹರಿಸಲಾಗುತ್ತಿದೆಯಂತೆ.

ಸೋರಿಕೆಯಾದ ಬೆಲೆಯನ್ನು X (ಟ್ವಿಟರ್) ನಲ್ಲಿ ಟೆಸ್ಲಾ ಕ್ಲಬ್ ಇಂಡಿಯಾ ತಮ್ಮ ಪುಟದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಪಂಚ್ EV ಯ ಎರಡು ವೇರಿಯೆಂಟ್‌ಗಳ ಬೆಲೆ ವಿವರಗಳನ್ನು ಹಂಚಿಕೊಳ್ಳಲಾಗಿದೆ. ಸನ್‌ರೂಫ್‌ನೊಂದಿಗೆ ಟಾಟಾ ಪಂಚ್ EV ಲಾಂಗ್ ರೇಂಜ್ ಎಂಪವರ್ಡ್+ (3.3kW ಚಾರ್ಜರ್‌ನೊಂದಿಗೆ ಉನ್ನತ ಮಾದರಿ) ಬೆಲೆ ರೂ. 16,13,729 ಎಂದು ತೋರಿಸುವ ಇಮೇಲ್ ಸ್ಕ್ರೀನ್ ಷಾಟ್ ಅನ್ನು ಇಲ್ಲಿ ನೋಡಬಹುದು.
ಟಾಟಾ ಪಂಚ್ EV ಯ ಅಡ್ವೆಂಚರ್ (3.3 kW ಚಾರ್ಜರ್‌ನೊಂದಿಗೆ ಬುಕ್ ಮಾಡಲಾದ) ಬೇಸ್ ವೇರಿಯೆಂಟ್ ರೂ. 13,73,846 ಎಕ್ಸ್ ಶೋ ರೂಂ ಬೆಲೆಯನ್ನು ತೋರಿಸುವ ಇಮೇಲ್ ಸ್ಕ್ರೀನ್ ಷಾಟ್ ನೋಡಬಹುದು. ಅಡ್ವೆಂಚರ್ ಬೇಸ್ ವೇರಿಯೆಂಟ್ ಆಗಿದ್ದು, ಆಟೋ ಹೋಲ್ಡ್, ಕ್ರೂಸ್ ಕಂಟ್ರೋಲ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಬೆಜ್ವೆಲ್ಡ್ ನಾಬ್ ಮತ್ತು ಕೆಲವು ಇತರ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟಾಟಾ ಮೋಟಾರ್ಸ್ ಈ ಬೆಲೆ ಸೋರಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದು, "ತಾಂತ್ರಿಕ ಬಿಕ್ಕಳಿಕೆ ಎಚ್ಚರಿಕೆ! ಪಂಚ್ EV ಯ ಬೆಲೆಗಳು ಸಿಸ್ಟಮ್ ಗ್ಲಿಚ್ ಕಾರಣದಿಂದಾಗಿವೆ. ನಾವು ಅದನ್ನು ಸಕ್ರಿಯವಾಗಿ ಪರಿಹರಿಸುತ್ತಿದ್ದೇವೆ, ಅಧಿಕೃತ ಬೆಲೆಗಳನ್ನು ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ. ನಿಮ್ಮ ತಾಳ್ಮೆಗೆ ಧನ್ಯವಾದ! #SystemFix #StayTuned ಎಂದು ಉತ್ತರಿಸಿದೆ.
ಟಾಟಾ ಪಂಚ್ ಇವಿ ವಿಶೇಷತೆಗಳು: ಹೊಸ ಮೈಕ್ರೋ-ಎಸ್‌ಯುವಿ ಇವಿ ವೈಶಿಷ್ಟ್ಯ ಭರಿತವಾಗಿರುತ್ತದೆ ಎಂದು ಕಂಪನಿ ಹೇಳಿದೆ. ಟಾಟಾದ ಹೊಸ UI ಜೊತೆಗೆ ಹೊಸ ಫ್ಲೋಟಿಂಗ್-ಟೈಪ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ವೆಂಟಿಲೇಟೆಡ್ ಲೆಥೆರೆಟ್ ಫ್ರಂಟ್ ಸೀಟ್‌ಗಳು, ಮಲ್ಟಿಪಲ್ ವಾಯ್ಸ್ ಅಸಿಸ್ಟೆಂಟ್‌ಗಳು ಇರಲಿವೆ.

ಇವಿಷ್ಟೇ ಅಲ್ಲದೇ ಹೊಸ ಟಾಟಾ ಪಂಚ್ ಇವಿ ಇನ್‌ಬಿಲ್ಟ್ ಏರ್ ಪ್ಯೂರಿಫೈಯರ್, ಮಲ್ಟಿ-ಮೋಡ್ ರೀಜೆನ್, ಎಲೆಕ್ಟ್ರಿಕ್ ಸನ್‌ರೂಫ್, ಲಾಂಗ್ ರೇಂಜ್ ಆವೃತ್ತಿಗೆ ಜೆಮ್‌ಸ್ಟೋನ್ ಕಂಟ್ರೋಲ್ ನಾಬ್, ವೈರ್‌ಲೆಸ್ ಫೋನ್ ಚಾರ್ಜರ್, ಫುಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟ್ ಮಾಡಿದ ಕಾರ್ ವೈಶಿಷ್ಟ್ಯಗಳು ಮತ್ತು ಇನ್ನಷ್ಟು ಹೊಸ ವೈಶಿಷ್ಟ್ಯಗಳು ಇರಲಿವೆ.
ಟಾಟಾ ಪಂಚ್ EV ಯ ನಿಖರವಾದ ಪವರ್‌ಟ್ರೇನ್ ವಿವರಗಳನ್ನು ಸಹ ಬಹಿರಂಗಪಡಿಸಲಾಗಿಲ್ಲ. ಆದರೆ ನಮಗೆ ತಿಳಿದಿರುವಂತೆ ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಇದು MR (ಮಧ್ಯಮ ಶ್ರೇಣಿ) ಮತ್ತು LR (ಲಾಂಗ್ ರೇಂಜ್) ಆಯ್ಕೆಗಳಾಗಿರುತ್ತದೆ. MR 25 kWh ಬ್ಯಾಟರಿಯೊಂದಿಗೆ ಬರಬಹುದು ಹಾಗೆಯೇ LR 35 kWh ಬ್ಯಾಟರಿಯೊಂದಿಗೆ ಬರಬಹುದು. ಈ ಎರಡೂ ಕ್ರಮವಾಗಿ 330 ಕಿ.ಮೀ ಮತ್ತು 460 ಕಿ.ಮೀ ನೀಡುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications