26 ಕಿ.ಮೀ ಮೈಲೇಜ್, ಟೊಯೊಟಾ 7-ಸೀಟರ್ ಎಂಪಿವಿಯ ಹೊಸ ರೂಪಾಂತರ ವಿಶೇಷತೆಗಳೇನು?
ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಕೂಡ ಗುರುತಿಸಿಕೊಂಡಿದೆ. ಟೊಯೊಟಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುವ ಮಾರುತಿ ಸುಜುಕಿ ಎರ್ಟಿಗಾ ಆಧಾರಿತ 'ರೂಮಿಯಾನ್' ಎಂಪಿವಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಹಲವು ಗ್ರಾಹಕರು ಈ ಎಂಪಿವಿಯನ್ನು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಇದೀಗ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಜಿ ಎಟಿ (ಆಟೋಮೆಟಿಕ್ ಟ್ರಾಸ್ಮಿಷನ್) ಎಂಬ ಹೊಸ ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಟೊಯೊಟಾ ರೂಮಿಯಾನ್ ಜಿ ಎಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13 ಲಕ್ಷವಾಗಿದೆ. ಈ ಹೊಸ ಮಾದರಿಯು ಮೇ.5 ರಿಂದ ವಿತರಣೆಯು ಶುರುವಾಗಲಿದೆ. ಆಸಕ್ತ ಗ್ರಾಹಕರು ರೂ.11,000 ಮುಂಗಡ ಹಣವನ್ನು ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಕಾರಿನ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎಂಜಿನ್: ಹೊಸ ಟೊಯೊಟಾ ರೂಮಿಯಾನ್ ಎಂಪಿವಿಯ ಜಿ ಎಟಿ ರೂಪಾಂತರ (ವೇರಿಯೆಂಟ್), 1.5-ಲೀಟರ್, 4-ಸಿಲಿಂಡರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿದೆ. ಇದು 102 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದು, 6-ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ (ಗೇರ್ ಬಾಕ್ಸ್) ಆಯ್ಕೆಯನ್ನು ಹೊಂದಿದೆ.
ನೂತನ ರೂಮಿಯಾನ್ ಮಾದರಿಯು 20.51 ಕೆಎಂಪಿಎಲ್ ಮೈಲೇಜ್ ವರೆಗೆ ಕೊಡುತ್ತದೆ. ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಟೈಲ್ ಟೈಲ್‌ಲೈಟ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿವೆ. ಈ ಕಾರಿನಲ್ಲಿ 7 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಫೀಚರ್ಸ್: ಈ ಹೊಸ ಟೊಯೊಟಾ ರೂಮಿಯಾನ್ ಎಂಪಿವಿಯಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ಟೊ, ಸ್ಟೋರೇಜ್‌ನೊಂದಿಗೆ ಸೆಂಟ್ರಲ್ ಸ್ಲೈಡಿಂಗ್ ಆರ್ಮ್‌ರೆಸ್ಟ್, ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಡ್ಯುಯಲ್-ಟೋನ್ 15-ಇಂಚಿನ ಅಲಾಯ್ ವ್ಹೀಲ್ ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತಾ ಫಿಚರ್ಸ್: ಈ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಕಾರಿನಲ್ಲಿರುವವರಿಗೆ ಸುರಕ್ಷತೆಯನ್ನು ಖಾತ್ರಿಪಡಿಸಲು ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್ ಹೋಲ್ಡ್ ಕಂಟ್ರೋಲ್ ನಂತಹ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರೀ ಬೇಡಿಕೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿದ್ದ ಸಿಎನ್‌ಜಿ ಚಾಲಿತ ರೂಮಿಯಾನ್ ಎಂಪಿವಿಯ ಬುಕ್ಕಿಂಗ್‌ನ್ನು ಪುನಃ ಆರಂಭಿಸಲಾಗಿದೆ. ಇದು 'ಎಸ್' ರೂಪಾಂತರ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, ರೂ.11.39 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 26.11 ಕೆಎಂ/ ಕೆಜಿ ಮೈಲೇಜ್ ಕೊಡುತ್ತದೆ.
ಟೊಯೊಟಾ ರೂಮಿಯಾನ್ ಎಂಪಿವಿಗೆ ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಜ್ಜೊ ಕಾರುಗಳು ಪ್ರಬಲ ಪ್ರತಿಸ್ಪರ್ಧಿಗಳಾಗಿವೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳ ಪಾಲುದಾರಿಕೆಯ ಭಾಗವಾಗಿ ಎರ್ಟಿಗಾ ಆಧಾರಿತ ರೂಮಿಯಾನ್ ಎಂಪಿವಿಯನ್ನು 2023ರ ಆಗಸ್ಟ್ ತಿಂಗಳಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಕಾರಿಗೆ ಭಾರೀ ಡಿಮ್ಯಾಂಡ್ ಇದ್ದು, ಅಧಿಕ ಸಂಖ್ಯೆಯಲ್ಲಿ ಬಿಕರಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗ್ರಾಹಕರು, ರೂಮಿಯಾನ್ ಎಂಪಿವಿಯನ್ನು ತಮ್ಮ ಕುಟುಂಬದ ವಾಹನವಾಗಿ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications