Tata: ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ ಟಾಟಾದ ಈ ಜನಪ್ರಿಯ ಕಾರು, ಮಧ್ಯಮ ವರ್ಗದ ಜನರು ಮನೆಗೆ ತರಬಹುದು!

ದೇಶದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ (Tata) ಖ್ಯಾತಿಗಳಿಸಿದೆ. ಸದ್ಯ, ಜನಪ್ರಿಯ ಇಂಧನ ಚಾಲಿತ ಕಾರುಗಳನ್ನು ಒಂದಾದ ಮೇಲೆ ಒಂದರಂತೆ ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸುತ್ತಿದೆ. ನಿನ್ನೆಯಷ್ಟೇ (ಜ.17) ಟಾಟಾ ಪಂಚ್ ಇವಿ (Tata Punch EV) ಲಾಂಚ್ ಮಾಡಿ, ಭಾರೀ ಸೌಂಡ್ ಮಾಡಿದೆ.

ಮಧ್ಯಮ ವರ್ಗದ ನೆಚ್ಚಿನ ಟಾಟಾ ಆಲ್ಟ್ರೋಜ್ (Tata Altroz) ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಆಲ್ಟ್ರೋಜ್ ಇವಿ (Altroz ​​EV) 2025ರಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಲೈನ್-ಅಪ್ ಸೇರಲಿದೆ ಎಂದು ಟಾಟಾ ಹೇಳಿದೆ ಎಂದು ವರದಿಯಾಗಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಮುಂದಿನ ವರ್ಷ ಆಟೋ ಎಕ್ಸ್‌ಪೋದಲ್ಲಿ ಚೊಚ್ಚಲ ಬಾರಿಗೆ ಪ್ರವೇಶಿಸಬಹುದು.

Tata: ಎಲೆಕ್ಟ್ರಿಕ್ ರೂಪದಲ್ಲಿ ಟಾಟಾದ ಈ ಜನಪ್ರಿಯ ಕಾರು, ಮಧ್ಯಮ ವರ್ಗದ ಜನರು ಮನೆಗೆ ತರಬಹುದು!

2020ರ ಆಟೋ ಎಕ್ಸ್‌ಪೋದಲ್ಲಿ ಆಲ್ಟ್ರೋಜ್ ಇವಿಯನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು, ಅದೇಕೋ ಟಾಟಾ ಬಿಡುಗಡೆ ಮನಸ್ಸು ಮಾಡಲಿಲ್ಲ. ಆದರೆ, ನೆಕ್ಸಾನ್ ಇವಿ, ಟಿಯಾಗೊ ಇವಿ, ಟಿಗೊರ್ ಇವಿ ಸೇರಿದಂತೆ ಈಗ ಪಂಚ್‌ ಇವಿಯನ್ನು ಲಾಂಚ್ ಮಾಡಿದೆ. ಇವುಗಳ ಇಂಧನ ಚಾಲಿತ ಮಾದರಿಗಳು ದೇಶೀಯ ಮಾರುಕಟ್ಟೆಯಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವುದನ್ನು ಕಂಪನಿಯು ತನ್ನ ಆದಾಯದ ಮೂಲವಾಗಿ ಮಾರ್ಪಡಿಸಿಕೊಂಡಿದೆ.

ಪೆಟ್ರೋಲ್ ಚಾಲಿತ ಕಾರಿಗೆ ಹೋಲಿಸಿದರೆ, ಮುಂಬರಲಿರುವ ಟಾಟಾ ಆಲ್ಟ್ರೋಜ್ ಇವಿ ವಿನ್ಯಾಸದಲ್ಲಿ ಒಂದಷ್ಟು ಪ್ರಮುಖ ಬದಲಾವಣೆಯನ್ನು ಹೊಂದಿರುವ ಸಾಧ್ಯತೆಯಿದೆ. ಪವರ್ ಟ್ರೈನ್ ಹೆಚ್ಚು, ಕಮ್ಮಿ ಪಂಚ್ ಇವಿಯಂತೆ ಇರಬಹುದು. ಬೆಲೆಯು ಗ್ರಾಹಕರಿಗೆ ಕೈಗೆಟುವಂತೆ ಇರಲಿದೆ ಎಂದು ಅಂದಾಜಿಸಲಾಗಿದ್ದು, ಬಹುತೇಕ ಈ ವರ್ಷದ ಕೊನೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ತೆರೆ ಬೀಳಬಹುದು.

ಭಾರತದಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ಇವಿ, ರೂ.10.99 ಲಕ್ಷ ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 25 kWh ಹಾಗೂ 35 kWh ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ ಕ್ರಮವಾಗಿ 315 ರಿಂದ 421 ಕಿ.ಮೀ ರೇಂಜ್ ಕೊಡುತ್ತದೆ. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಆಲ್ಟ್ರೋಜ್ ಕಾರಿನ ಬಗ್ಗೆ ಹೇಳುವುದಾದರೆ, ಇದು ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಹೊಂದಿದ್ದು, ವೇರಿಯೆಂಟ್ಸ್ ಅನುಗುಣವಾಗಿ 6 - ಸ್ವೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್), 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಆಲ್ಟ್ರೋಜ್ ಪೆಟ್ರೋಲ್ ರೂಪಾಂತರಗಳು 19.33 kmpl, ಡೀಸೆಲ್ ರೂಪಾಂತರಗಳು 23.64 kmpl, ಸಿಎನ್‌ಜಿ ರೂಪಾಂತರಗಳು 26.20 km/kg ಮೈಲೇಜ್ ನೀಡುತ್ತವೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸಿಂಗಲ್ ಪೇನ್ ಸನ್‌ರೂಫ್ ಒಳಗೊಂಡಿದೆ ವಿವಿಧ ಫೀಚರ್ಸ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 18, 2024, 21:19 [IST]
English summary
Ordinary people favorite altroz ev join tata lineup in 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+