ಅಗ್ಗದ ಬೆಲೆಗೆ ಕಾರಿನಂತಹ ಸೌಕರ್ಯ... ಫೇಮಸ್ ಆಗ್ತಿದೆ ಈ ಸ್ಕೂಟರ್: ಬೆಲೆ, ವಿಶೇಷತೆಗಳೇನು?

ಇತ್ತೀಚಿನ ವರ್ಷಗಳಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದ ಕಾರಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದು ಎಲ್ಲರಿಗೂ ತಿಳಿದಿದೆ. ವರ್ಷವೊಂದರಲ್ಲಿ ಹತ್ತಾರು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ. ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಗಳ ಸ್ಪೋಟ, ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಜನ ಇವಿಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ತಯಾರಕರು ವಿಶ್ವಾಸಾರ್ಹ ವಾಹನಗಳನ್ನು ಒದಗಿಸುತ್ತಿದ್ದಾರೆ. ಇತ್ತೀಚೆಗೆ ಇಂಥಹದ್ದೇ ವಿಶ್ವಾಸಾರ್ಹ ಮೂರು ಚಕ್ರದ ವಾಹನವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ನಿರ್ದಿಷ್ಟ ಸ್ಕೂಟರ್ ಅನ್ನು ವಯಸ್ಸಾದವರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಹಲವಾರು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಕೇಲಾ ಸನ್ಸ್ ಈ ಮೂರು ಚಕ್ರಗಳ ಪಿಇವಿ ಫ್ಯಾಂಟಮ್ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಿಸಿದ್ದಾರೆ. ಈ ಸ್ಕೂಟರ್‌ನ ಸೀಟ್ ಅನ್ನು ಕಾರಿನ ಸೀಟಿನಂತೆ ಸಂಪೂರ್ಣವಾಗಿ ಮಲಗಿಸಬಹುದು. ಪ್ರಸ್ತುತ ಇದು 88,000 ರೂ.ಗೆ ಖರೀದಿಗೆ ಲಭ್ಯವಿದೆ.

pev-phantom-three-wheeler-electric-scooter-price-features-range-details

ಈ ಪಿಇವಿ ಫ್ಯಾಂಟಮ್ ಎರಡು ಪ್ರೊಜೆಕ್ಟರ್ ಲೈಟ್ ಪಾಡ್‌ಗಳನ್ನು ಮತ್ತು ವೃತ್ತಾಕಾರದ ಹೆಡ್ ಲೈಟ್ ಜೊತೆಗೆ ಎಲ್‌ಇಡಿ ಡಿಆರ್‌ಎಲ್ ಹಾಗೂ ಹ್ಯಾಲೋಜೆನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 10 ಇಂಚಿನ ಸಿಲ್ವರ್ ಅಲಾಯ್ ವೀಲ್ ಜೊತೆಗೆ 190 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಹ್ಯಾಂಡಲ್‌ಬಾರ್‌ನ ಎಡ ಮತ್ತು ಬಲಭಾಗದಲ್ಲಿ ಉತ್ತಮ ಗುಣಮಟ್ಟದ ಸ್ವಿಚ್‌ಗಳನ್ನು ನೀಡಲಾಗಿದೆ.

ಈ ಸ್ಕೂಟರ್‌ನ ಸಸ್ಪೆಂಷನ್ ಬಗ್ಗೆ ಮಾತನಾಡುವುದಾದರೆ, ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆಂಷನ್‌ಗಳನ್ನು ಪಡೆದಿದೆ. ಪಿಇವಿ ಫ್ಯಾಂಟಮ್ ಹಿಂಭಾಗದಲ್ಲಿ ಬಹಳ ದೊಡ್ಡ ಗಾತ್ರದ ಸೀಟ್ ಅನ್ನು ಪಡೆದಿದೆ, ಇದು ಹೊಂದಾಣಿಕೆ ಮಾಡಬಹುದಾದ ಹ್ಯಾಂಡ್ ರೆಸ್ಟ್‌ಗಳನ್ನು ಸಹ ಪಡೆದಿದ್ದು, ಕಾರಿನಂತಹ ಸೌಕರ್ಯವನ್ನು ಹೊಂದಿದೆ.

pev-phantom-three-wheeler-electric-scooter-price-features-range-details

ಸ್ಕೂಟರ್‌ನ ಶೇಖರಣಾ ಪೆಟ್ಟಿಗೆಗಳ ಬಗ್ಗೆ ಮಾತನಾಡುವುದಾದ್ರೆ, ಇದು ಎರಡು ಸ್ಟೋರೇಜ್‌ಗಳನ್ನು ಹೊಂದಿದೆ, ಮೊದಲನೆಯದು ಸೀಟಿನ ಹಿಂಭಾಗದಲ್ಲಿದ್ದು ಉತ್ತಮ ಪ್ರಮಾಣದ ವಸ್ತುಗಳನ್ನು ಸಂಗ್ರಹಿಸಬಹುದು. ಎರಡನೇಯದು ಸೀಟಿನ ಕೆಳಗೆ ಇದ್ದು, ಇದು ಕೂಡ ಸಾಕಷ್ಟು ಸಂಗ್ರಹಣಾ ಸ್ಥಳವನ್ನು ಹೊಂದಿದೆ. ಇನ್ನು ಸ್ಕೂಟರ್ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.

ಪಿಇವಿ ಫ್ಯಾಂಟಮ್ ಎಲೆಕ್ಟ್ರಿಕ್ ಸ್ಕೂಟರ್ 60W 32 ಎಹೆಚ್ ಲೆಡ್-ಆಸಿಡ್ ಬ್ಯಾಟರಿಯನ್ನು ಹೊಂದಿದೆ. ಹೆಚ್ಚುವರಿ ವೆಚ್ಚದೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿಗೆ ನವೀಕರಣ ಪಡೆಯುವ ಆಯ್ಕೆಯು ಇದೆ. ರೇಂಜ್ ಬಗ್ಗೆ ಹೇಳುವುದಾದರೆ, ಇದು ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 50 ರಿಂದ 60 ಕಿ.ಮೀ ಚಲಿಸುತ್ತದೆ.

ಹೊಸ ಪಿಇವಿ ಫ್ಯಾಂಟಮ್ ಎಲೆಕ್ಟ್ರಿಕ್ ಸ್ಕೂಟರ್ 1000 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಎರಡೂ ಹಿಂಭಾಗದ ಚಕ್ರಗಳಿಗೆ ಪವರ್ ನೀಡುತ್ತದೆ. ಈ ಸ್ಕೂಟರ್ ಅನ್ನು ಹೇಗೆ ಓಡಿಸಬಹುದು ಮತ್ತು ಅದನ್ನು ರಸ್ತೆಯಲ್ಲಿ ಹೇಗೆ ನಿಯಂತ್ರಿಸಬಹದು ಎಂಬುದನ್ನು ತೋರಿಸಲು ಯೂಟ್ಯೂಬ್‌ನಲ್ಲಿ ವಿಡಿಯೋ ಕೂಡ ಬಿಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 31, 2024, 8:30 [IST]
English summary
Pev phantom three wheeler electric scooter price features range details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+