ಕಾರುಗಳಲ್ಲಿ ಹಿಂಬದಿ ಸೀಟ್ ಬೆಲ್ಟ್ ಅಲಾರ್ಮ್ ಕಡ್ಡಾಯ: ದಂಡವೆಷ್ಟು, ಯಾವಾಗಿನಿಂದ?

ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಕಳೆದ ವರ್ಷ ಘೊಷಿಸಲಾಗಿದೆ. ಸದ್ಯ ದೇಶದಲ್ಲಿ ಕಾರುಗಳ ಬಳಕೆ ಹೆಚ್ಚಾಗುತ್ತಿದೆ, ಮಧ್ಯಮ ವರ್ಗಗಳು ಕೂಡ ಖರೀದಿಸುವಷ್ಟು ಅಗ್ಗದ ಬೆಲೆಯ ಕಾರುಗಳು ದೇಶದಲ್ಲಿ ಲಭ್ಯವಿದೆ. ಆದರೆ ಸುರಕ್ಷತೆ ವಿಷಯದಲ್ಲಿ ಮಾತ್ರ ಹಿಂದುಳಿದಿದೆ.

ವಾಹನ ಖರೀದಿಸುವುದಷ್ಟೆ ಮುಖ್ಯವಲ್ಲ, ಆ ವಾಹನ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಪರಿಶೀಲಿಸುವುದು ಕೂಡ ಮುಖ್ಯ. ಹಣ್ಣಕ್ಕೆ ತಕ್ಕಂತೆ ಭಾರತದಲ್ಲಿ ಗುಣಮಟ್ಟದ ಕಾರುಗಳು ಸಿಗುತ್ತವೆ. ಆದ್ರೆ ಕಡಿಮೆ ಬೆಲೆಯ ಕಾರುಗಳ ಕಥೆಯೇನು? ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಾಮಾನ್ಯ ಪ್ರಯಾಣಿಕರ ಜೀವ ಉಳಿಸುವ ಸಲುವಾಗಿ ಅಗ್ಗದ ಬೆಲೆಯ ಕಾರುಗಳ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

union-ministry-of-transport-has-made-rear-seat-belt-alarm-mandatory-in-cars

ಸೀಟ್‌ ಬೆಲ್ಟ್‌ (Seat Belt) ವಿಷಯದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಏಪ್ರಿಲ್ 1, 2025 ರಿಂದ ತಯಾರಾಗುವ ಎಲ್ಲಾ ಕಾರುಗಳು 'ಹಿಂಬದಿ ಸೀಟ್ ಬೆಲ್ಟ್ ಅಲಾರಂ' ಅನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಈ ಹಿಂದೆಯು ಸೀಟ್‌ ಬೆಲ್ಟ್ ಧರಿಸದೆ ಪ್ರಯಾಣಿಕರು ಜೀವ ಕಳೆದುಕೊಂಡ ಹಲವು ಉದಾಹರಣೆಗಳು ಇವೆ.

ಪ್ರಮುಖವಾಗಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ನಿಧನದ ನಂತರ ಈ ಕ್ರಮಕ್ಕೆ ಮೊದಲ ಅಡಿಪಾಯ ಬಿದ್ದಿದೆ. ಸಚಿವಾಲಯವು ಈ ಬಗ್ಗೆ ಹಿಂದೆಯೇ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸರ್ಕಾರವು 3-ಪಾಯಿಂಟ್ ರಿಯರ್ ಸೀಟ್ ಬೆಲ್ಟ್‌ಗಳು, ಹಿಂದಿನ ಸೀಟ್ ಬೆಲ್ಟ್ ಅಲಾರಂ ಮತ್ತು 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿತ್ತು. ಆದರೆ, 6 ಏರ್‌ಬ್ಯಾಗ್‌ಗಳ ಕಡ್ಡಾಯ ಫಿಟ್‌ಮೆಂಟ್‌ನ ಪ್ರಸ್ತಾವನೆಯು ಜಾರಿಯಾಗದ ಕಾರಣ ಅಧಿಸೂಚನೆಯು ರದ್ದುಗೊಂಡಿತ್ತು.

union-ministry-of-transport-has-made-rear-seat-belt-alarm-mandatory-in-cars

ಇದೀಗ ಹೊಸ ಬೆಳವಣಿಗೆ ಆಗಿದ್ದು, ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ ಇತ್ತೀಚಿನ ಅಧಿಸೂಚನೆಯು ಹಿಂದಿನ ಸೀಟ್ ಬೆಲ್ಟ್ ಅಲಾರಂಗೆ ಮಾತ್ರವಾಗಿದೆ. ಬೇರೆ ಯಾವುದೇ ಹೊಸ ನಿಬಂಧನೆಗಳಿಲ್ಲ ಎಂದಿದ್ದಾರೆ. ಹೊಸ ಕಾನೂನಿನ ಪ್ರಕಾರ ಹಿಂದಿನ ಆಸನದ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇಲ್ಲದಿದ್ದರೆ ಮೋಟಾರು ವಾಹನ ಕಾಯ್ದೆಯಡಿ 1,000 ರೂ. ದಂಡ ವಿಧಿಸಲಾಗುವುದು.

ಸೀಟ್‌ ಬೆಲ್ಟ್ ಧರಿಸದೆ ಸೈರಸ್ ಮಿಸ್ತ್ರಿ ಸಾವು: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (54) ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮರ್ಸಿಡಿಸ್ ಜಿಎಲ್‌ಸಿ ಕಾರಿನಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮುಂಬೈಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಕಾರಿನ ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಪಾಂಡೋಲ್ ಸಾವನ್ನಪ್ಪಿದ್ದರು.

ಮುಂಭಾಗದಲ್ಲಿ ಕುಳಿತಿದ್ದ ದಂತಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಕಾರಿನ ಮುಂಭಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ, ಹೀಗಾದಲ್ಲಿ ಅಪಘಾತದ ಪರಿಣಾಮ ಮುಂದಿನ ಸೀಟಿನಲ್ಲಿದ್ದವರಿಗೆ ಹೆಚ್ಚಾಗಿರುತ್ತದೆ. ಆದರೆ ಈ ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಸಾವನ್ನಪ್ಪಿದ್ದು, ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬದುಕುಳಿದಿದ್ದರು.

ಇದಕ್ಕೆ ಮುಖ್ಯ ಕಾರಣ ಸೀಟ್ ಬೆಲ್ಟ್ ಧರಿಸದಿರುವುದು. ಈ ಪ್ರಯಾಣದ ವೇಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿದ್ದರು, ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರಣ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಾಗ ಇಬ್ಬರೂ ಪಲ್ಟಿಯಾಗಿ ತಲೆಗೆ ಗಂಭೀರ ಹೊಡೆತ ಬಿದ್ದಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 16, 2024, 10:30 [IST]
English summary
Union ministry of transport has made rear seat belt alarm mandatory in cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+