ಬಿಗ್ ಗುಡ್‌ನ್ಯೂಸ್: ಭಾರೀ ರಿಯಾಯಿತಿ.. 4.70 ಲಕ್ಷ ರೂಪಾಯಿಗೆ ಹೊಸ ಕಾರು!

ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ರೆನಾಲ್ಟ್ ಇಂಡಿಯಾ (Renault India) ಗುರುತಿಸಿಕೊಂಡಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೊಸ ಕಾರು ಖರೀದಿಸಲು ಸಾಧ್ಯವಾಗಿಲ್ಲ ಎಂದು ಬೇಸರಿಸಿಕೊಂಡಿದ್ದ ಗ್ರಾಹಕರಿಗೆ ಈ ನವೆಂಬರ್‌ನಲ್ಲಿಯೂ ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಎಲ್ಲ ಡೀಲರ್‌ಶಿಪ್‌ಗಳಿಗೂ ಅನ್ವಯವಾಗುವಂತೆ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳ ಖರೀದಿ ಮೇಲೆ ದೊಡ್ಡ ರಿಯಾಯಿತಿ ಘೋಷಣೆ ಮಾಡಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಮೊದಲಿಗೆ ಅತಿ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ರೆನಾಲ್ಟ್ ಕ್ವಿಡ್ (Renault Kwid) ಹ್ಯಾಚ್‌ಬ್ಯಾಕ್ ಹೊಂದಿರುವ ಹಣಕಾಸಿನ ಪ್ರಯೋಜನದ ಬಗ್ಗೆ ಮಾತನಾಡೋಣ. ಈ ಕಾರು, ಸರಿ ಸುಮಾರು ರೂ.40,000 ವರೆಗೆ ರಿಯಾಯಿತಿ ಪಡೆದಿದೆ. ಅದರೊಳಗೆ ರೂ.15,000 ವರೆಗೆ ನಗದು ಪ್ರಯೋಜನ (Cash Discount), ರೂ.15,000 ವರೆಗೆ ವಿನಿಮಯ ಪ್ರಯೋಜನ (Exchange Benefit) ಮತ್ತು ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು (Loyalty Cash Discount) ಕೂಡ ಸೇರಿವೆ.

Renault Kwid Kiger Triber Cars Get Huge Discount Upto Rs 60 000 In November 2024 Details

ನೂತನ ರೆನಾಲ್ಟ್ ಕ್ವಿಡ್ ಕಾರು ಕನಿಷ್ಠ ರೂ.4.69 ಲಕ್ಷ ಹಾಗೂ ಗರಿಷ್ಠ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 1-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 68 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 91 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನಲ್ಲಿ 5 ಮಂದಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀ ಲೆಸ್ ಎಂಟ್ರಿ, ಮ್ಯಾನುವಲ್ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

Renault Kwid Kiger Triber Cars Get Huge Discount Upto Rs 60 000 In November 2024 Details

ರೆನಾಲ್ಟ್ ಕಿಗರ್ (Renault Kiger) ಜನಪ್ರಿಯ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಕಾರು ಒಟ್ಟು ರೂ.60,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿದೆ. ಇದರೊಳಗೆ ರೂ.25,000 ವರೆಗೆ ನಗದು ರಿಯಾಯಿತಿ, ರೂ.15,000 ವರೆಗೆ ವಿನಿಮಯ ಪ್ರಯೋಜನ ಹಾಗೂ ರೂ.20,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಸಹ ಇವೆ.

ಹೊಚ್ಚ ಹೊಸ ರೆನಾಲ್ಟ್ ಕಿಗರ್ ಕಾರು, ರೂ.6 ರಿಂದ ರೂ.11.23 ಲಕ್ಷ (ಎಕ್ಸ್ ಶೋರೂಂ- ನವದೆಹಲಿ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಆಟೋಮೆಟಿಕ್ (ಎಎಂಟಿ) ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 18.24 ರಿಂದ 20.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Renault Kwid Kiger Triber Cars Get Huge Discount Upto Rs 60 000 In November 2024 Details

ಈ ಕಿಗರ್ ಎಸ್‌ಯುವಿಯಲ್ಲಿ 5 ಜನರು ಪ್ರಯಾಣಿಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 4 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ರೆನಾಲ್ಟ್ ಟ್ರೈಬರ್ (Renault Triber) ಪ್ರಖ್ಯಾತ ಫ್ಯಾಮಿಲಿ ಎಂಪಿವಿಯಾಗಿದೆ. ಈ ಕಾರು ಬರೋಬ್ಬರಿ ರೂ.50 000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿದೆ. ಅದರೊಳಗೆ ರೂ.15,000 ವರೆಗೆ ನಗದು ರಿಯಾಯಿತಿ, ರೂ.15,000 ವರೆಗೆ ವಿನಿಮಯ ಪ್ರಯೋಜನ ಮತ್ತು ರೂ.20,000 ಲಾಯಲ್ಟಿ ನಗದು ರಿಯಾಯಿತಿಗಳು ಕೂಡ ಸೇರಿವೆ.

ಈ ಟ್ರೈಬರ್ ಕಾರು ಕನಿಷ್ಠ ರೂ.6 ಲಕ್ಷ ಮತ್ತು ಗರಿಷ್ಠ ರೂ.8.97 ಲಕ್ಷ ಬೆಲೆಯನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 96 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ರೆನಾಲ್ಟ್ ಟ್ರೈಬರ್ ಎಂಪಿವಿಯಲ್ಲಿ 7 ಜನರು ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

More from DriveSpark

Article Published On: Thursday, November 7, 2024, 10:39 [IST]
English summary
Renault kwid kiger triber cars get huge discount upto rs 60000 november 2024 details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+