ಬೆಲೆ ಕೇವಲ 4.70 ಲಕ್ಷ ರೂ... ಸಣ್ಣ ಫ್ಯಾಮಿಲಿಗೆ ಬೆಸ್ಟ್‌ ಹ್ಯಾಚ್‌ಬ್ಯಾಕ್

ರೆನಾಲ್ಟ್ ಕ್ವಿಡ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಇದು ಎಸ್‌ಯುವಿ ಡಿಸೈನ್‌ನೊಂದಿಗೆ ಬರುತ್ತದೆ, ಸಣ್ಣ ಕುಟುಂಬಕ್ಕೆ ಉತ್ತಮ ಸ್ಥಳ ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಎಂಜಿನ್ ಕಾರ್ಯಕ್ಷಮತೆಯು ನಗರ ಮತ್ತು ಹೆದ್ದಾರಿ ಚಾಲನೆಗೆ ಉತ್ತಮವಾಗಿದೆ. ನೀವು ಉತ್ತಮ ವೈಶಿಷ್ಟ್ಯಗಳು ಮತ್ತು ಸಾಕಷ್ಟು ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಒರಟಾಗಿ ಕಾಣುವ ಸಣ್ಣ ಹ್ಯಾಚ್ ಬ್ಯಾಕ್ ಅನ್ನು ಹುಡುಕುತ್ತಿದ್ದರೆ, ಕ್ವಿಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕ್ವಿಡ್ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ.

ಇದರ ಬೆಲೆಯು ರೂ.4.70 ಲಕ್ಷದಿಂದ ರೂ.6.45 ಲಕ್ಷಗಳ (ಎಕ್ಸ್‌ ಶೋರೂಂ) ವೆರೆಗೆ ಇದೆ. ಎಎಂಟಿ ವೇರಿಯೆಂಟ್‌ಗಳ ಬೆಲೆಗಳು 5.45 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಕ್ವಿಡ್ ಕಾರು ಆರ್ಎಕ್ಸ್ಇ, ಆರ್ಎಕ್ಸ್ಎಲ್ (ಒ), ಆರ್ಎಕ್ಸ್‌ಟಿ ಮತ್ತು ಕ್ಲೈಂಬರ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

renault-kwid-price-variants-features-details

8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್ ವಿಎಂಗಳು, ನಾಲ್ಕು ಕಡೆ ಪವರ್ ವಿಂಡೋಗಳು ಮತ್ತು ಮ್ಯಾನುವಲ್ ಎಸಿನಂತಹ ಫೀಚರ್‌ಗಳನ್ನು ಪಡೆಯಬಹುದು. ರೆನಾಲ್ಟ್ ಕ್ವಿಡ್ 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 68 ಪಿಎಸ್ ಪವರ್, 91 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ.

ಯಾವ ವೇರಿಯೆಂಟ್ ಬೆಸ್ಟ್?: ಕ್ವಿಡ್‌ನ ಸೆಕೆಂಡ್-ಟಾಪ್ ಆರ್‌ಎಕ್ಸ್‌ಟಿ ವೇರಿಯೆಂಟ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ. ಇದು 8-ಇಂಚಿನ ಟಚ್ ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್ ವಿಎಂಗಳು (ಹೊರಗಿನ ರಿಯರ್ ವ್ಯೂ ಮಿರರ್ ಗಳು), ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಐಆರ್‌ವಿಎಂನಂತಹ ಸೌಲಭ್ಯಗಳನ್ನು ಹೊಂದಿದೆ.

renault-kwid-price-variants-features-details

ಇದರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಮಾತ್ರವಲ್ಲದೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಕ್ವಿಡ್ ನ ಆರ್ ಎಕ್ಸ್ ಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5.50 ಲಕ್ಷಗಳಾಗಿದೆ.

ಕ್ವಿಡ್ ಐದು ಮೊನೊಟೋನ್ ಮತ್ತು ಐದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಬರುತ್ತದೆ. ಐಸ್ ಕೂಲ್ ವೈಟ್, ಫಿಯರಿ ರೆಡ್, ಔಟ್ ಬ್ಯಾಕ್ ಬ್ರೋನ್ಜ್, ಮೂನ್ ಲೈಟ್ ಸಿಲ್ವರ್ ಮತ್ತು ಜನ್ಸ್ಕರ್ ಬ್ಲೂ. ಇವಿಗಳಲ್ಲಿ ಡ್ಯುಯಲ್-ಟೋನ್ ಬಣ್ಣಗಳು ಔಟ್ ಬ್ಯಾಕ್ ಬ್ರಾಂಜ್ ಹೊರತುಪಡಿಸಿ ಬ್ಲಾಕ್ ರೂಫ್‌ನೊಂದಿಗೆ ಬರುತ್ತವೆ. ಡ್ಯುಯಲ್-ಟೋನ್ ಶೇಡ್ ಮೆಟಲ್ ಮಸ್ಟೂರ್ಡ್ ಅನ್ನು ಒಳಗೊಂಡಿದೆ.

renault-kwid-price-variants-features-details

ರೆನಾಲ್ಟ್ ಕ್ವಿಡ್ ಬೆಲೆಯಲ್ಲಿ ಇತರ ಪರ್ಯಾಯ ಆಯ್ಕೆಗಳು ಕೂಡ ಇವೆ. ಅವುಗಳನ್ನು ನೋಡುವುದಾದ್ರೆ ಮಾರುತಿ ಆಲ್ಟೋ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರುಗಳನ್ನು ಪರಿಗಣಿಸಬಹುದು, ಕ್ಲೈಂಬರ್ ರೂಪಾಂತರವು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟರ್ ಮೈಕ್ರೋ ಎಸ್‌ಯುವಿಗಳ ಕಡಿಮೆ-ಸ್ಪೆಕ್ ರೂಪಾಂತರಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, September 28, 2024, 13:24 [IST]
English summary
Renault kwid price variants features details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+