ರೆನಾಲ್ಟ್ ಕ್ವಿಡ್ VS ಡೇಸಿಯಾ ಸ್ಪ್ರಿಂಗ್: ಎರಡೂ ಒಂದೇ, ಆದ್ರೆ ವಿದೇಶಕ್ಕಾಗಿ ಏನೆಲ್ಲಾ ನೀಡಿದ್ದಾರೆ ನೋಡಿ..

ರೆನಾಲ್ಟ್ ಬ್ರಾಂಡ್‌ನ ಬಜೆಟ್-ಆಧಾರಿತ ಜಾಗತಿಕ ಬ್ರ್ಯಾಂಡ್ ಆಗಿರುವ 'ಡೇಸಿಯಾ', ಹೊಸ ಸ್ಪ್ರಿಂಗ್ EV ಅನ್ನು ಅನಾವರಣಗೊಳಿಸಿದೆ. ಇದು ನಮ್ಮ ಭಾರತೀಯ ಮಾರುಕಟ್ಟೆಗಲ್ಲ, ಬದಲಿಗೆ ಇದನ್ನು ಯೂರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಡೇಸಿಯಾ ಸ್ಪ್ರಿಂಗ್ ಇವಿ, ಭಾರತದಲ್ಲಿನ ರೆನಾಲ್ಟ್ ಕ್ವಿಡ್ ಆಧಾರಿತ ಎಲೆಕ್ಟ್ರಿಕ್ ಕಾರಾಗಿದೆ.

ಡೇಸಿಯಾ ಸ್ಪ್ರಿಂಗ್ ಮಾದರಿಯು ರೆನಾಲ್ಟ್ ಕ್ವಿಡ್‌ನಂತೆ ಒಳಗೆ ಮತ್ತು ಹೊರಗೆ ಕೆಲವು ಸಣ್ಣ ವಿನ್ಯಾಸ ಬದಲಾವಣೆಗಳನ್ನು ಪಡೆದಿದೆ. ಹಾಗಾದ್ರೆ ಈ ಎರಡೂ ಕಾರುಗಳಲ್ಲಿ ನಾವು ಯಾವೆಲ್ಲಾ ಬದಲಾವಣೆಗಳನ್ನು ನೋಡಬಹುದು? ಈ ಎರಡೂ ಮಾದರಿಗಳಲ್ಲಿ ಯಾವೆಲ್ಲಾ ಅಂಶಗಳನ್ನು ಒಂದೇ ರೀತಿ ನೀಡಲಾಗಿದೆ ಎಂಬುದನ್ನು ಇಲ್ಲಿ ನೋಡೋಣ.

renault-kwid-vs-dacia-spring-ev-design-features-engine-comparison

ಡಿಸೈನ್: ರೆನಾಲ್ಟ್ ಕ್ವಿಡ್ ಸ್ಲಿಮ್ ಎಲ್ಇಡಿ ಡಿಆರ್ಎಲ್‌ಗಳಿಂದ ಸುತ್ತುವರಿದ ದೊಡ್ಡ ಗ್ರಿಲ್ ಅನ್ನು ಪಡೆದಿದ್ದು, ಅದರ ಕೆಳಗೆ ಬಂಪರ್‌ನಲ್ಲಿ ದೊಡ್ಡ ಹೆಡ್‌ಲೈಟ್ ಕ್ಲಸ್ಟರ್‌ಗಳನ್ನು ಹೊಂದಿದೆ. ಇನ್ನು ಡೇಸಿಯಾ ಸ್ಪ್ರಿಂಗ್ ವಿಷಯಕ್ಕೆ ಬಂದರೆ ಗ್ರಿಲ್ Y-ಆಕಾರದ LED DRL ಗಳೊಂದಿಗೆ ಹೊಸ ಡಸ್ಟರ್ ತರಹದ ನಯವಾದ ಗ್ರಿಲ್ ಅನ್ನು ಪಡೆದಿದೆ. ಮಧ್ಯದಲ್ಲಿ ಎರಡು ಕ್ರೋಮ್ ಸ್ಟ್ರಿಪ್‌ಗಳು ಡೇಸಿಯಾ ಲೋಗೋದ ಕಡೆಗೆ ಚಲಿಸುತ್ತವೆ.

ಹಾಗೆಯೇ ಹೆಡ್‌ಲೈಟ್ ಕ್ಲಸ್ಟರ್‌ಗಳು ಚಿಕ್ಕದಾಗಿದ್ದು, ಬಂಪರ್‌ನ ಎರಡೂ ಬದಿಗಳಲ್ಲಿ ಇರಿಸಲಾಗಿದೆ. ಈ ಮೂಲಕ ಹೊಸ ಡೇಸಿಯಾ ಸ್ಪ್ರಿಂಗ್‌ನೊಂದಿಗೆ ಹೋಲಿಸಿದಾಗ ಇಂಡಿಯಾ - ಸ್ಪೆಕ್ ಕ್ವಿಡ್‌ನ ನೋಟವನ್ನು ಗುರುತಿಸುವುದು ತುಂಬಾ ಸುಲಭ. ಏಕೆಂದರೆ ಮುಂಭಾಗದಲ್ಲಿ ಕೆಲವೇ ಬದಲಾವಣೆಗಳಿದ್ದರೂ ಒಟ್ಟಾರೆ ಡಿಸೈನ್ ಒಂದೇ ರೀತಿ ಕಾಣುತ್ತದೆ.

renault-kwid-vs-dacia-spring-ev-design-features-engine-comparison

ಇಂಟೀರಿಯರ್: ಕ್ವಿಡ್ ಕ್ಯಾಬಿನ್ ವಿಷಯಕ್ಕೆ ಬಂದರೆ ಸಂಪೂರ್ಣ ಬ್ಲಾಕ್ ಥೀಮ್ ಮತ್ತು ಡ್ಯಾಶ್‌ಬೋರ್ಡ್‌ನ ಪ್ರಯಾಣಿಕರ ಬದಿಯಲ್ಲಿ 'ಕ್ವಿಡ್' ಎಂಬಾಸಿಂಗ್‌ನಿಂದ ಹೈಲೈಟ್ ಮಾಡಲಾಗಿದೆ. ಇದು ಹಳೆಯ ರೆನಾಲ್ಟ್ ಸ್ಟೀರಿಂಗ್ ವೀಲ್ ಮತ್ತು ಹಳೆಯ ಕ್ಲೈಮೆಟ್ ಕಂಟ್ರೋಲ್‌ಗಳನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ವಿಂಡೋಗಳು, ಮ್ಯಾನ್ಯುವಲ್ AC, ಹಗಲು/ರಾತ್ರಿ IRVM ನಂತಹ ಸಾಮಾನ್ಯ ವೈಶಿಷ್ಟ್ಯಗಳನ್ನು ಪಡೆದಿದೆ.

Dacia EV ವಿಚಾರಕ್ಕೆ ಬಂದರೆ ದೊಡ್ಡ 10-ಇಂಚಿನ ಡಿಸ್ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಆಧುನಿಕ ಸ್ಟೀರಿಂಗ್ ವೀಲ್ ಮತ್ತು ಸೆಂಟ್ರಲ್ ಎಸಿ ವೆಂಟ್‌ಗಳಲ್ಲಿ ವೈ-ಆಕಾರದ ಇಂಟೇಕ್‌ಗಳನ್ನು ಒಳಗೊಂಡಂತೆ ಡಸ್ಟರ್‌ನೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ. ಇದು ಕ್ಲೈಮೆಟ್ ಕಂಟ್ರೋಲ್‌ಗಾಗಿ ಹಾರ್ಡ್‌ ಬಟನ್‌ಗಳು ಮತ್ತು ರೋಟರಿ ಡಯಲ್‌, ಪವರ್ ವಿಂಡೋಗಳು, ಮ್ಯಾನ್ಯುವಲ್ AC, ಹಗಲು/ರಾತ್ರಿ IRVM ಗಳನ್ನು ಹೊಂದಿದೆ.

renault-kwid-vs-dacia-spring-ev-design-features-engine-comparison

ಎಂಜಿನ್ & ಸುರಕ್ಷತೆ: ರೆನಾಲ್ಟ್ ಇಂಡಿಯಾ-ಸ್ಪೆಕ್ ಕ್ವಿಡ್ ಅನ್ನು 1-ಲೀಟರ್ ಪೆಟ್ರೋಲ್ ಎಂಜಿನ್ (68 PS/91 Nm) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ AMT ನೊಂದಿಗೆ ನೀಡುತ್ತದೆ. ಸುರಕ್ಷತೆ ವಿಷಯದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಬೇಸಿಕ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ರಿವರ್ಸಿಂಗ್ ಕ್ಯಾಮೆರಾದಂತಹ ಅಗತ್ಯ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ.

ಡೇಸಿಯಾ ಸ್ಪ್ರಿಂಗ್ ಇವಿ 26.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ WLTP- ಹಕ್ಕು ಪಡೆದ 220 ಕಿ.ಮೀ ರೇಂಜ್ ನೀಡುತ್ತದೆ. 46 PS ಮತ್ತು 66 PS ಎಂಬ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳ ಆಯ್ಕೆಯನ್ನು ಹೋಂದಿದೆ. 30 kW DC ಚಾರ್ಜರ್ ಮೂಲಕ ಕೇವಲ 45 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು.

renault-kwid-vs-dacia-spring-ev-design-features-engine-comparison

ಡೇಸಿಯಾ ಸ್ಪ್ರಿಂಗ್ ಇವಿ ಸುರಕ್ಷತೆ ವಿಷಯದಲ್ಲಿ ಸ್ವಾಯತ್ತ ತುರ್ತುಸ್ಥಿತಿ ಬ್ರೇಕಿಂಗ್ (AEB) ಮತ್ತು ಚಾಲಕ ಜಾಗರೂಕತೆಯ ಎಚ್ಚರಿಕೆಯನ್ನು ಒಳಗೊಂಡಿರುವ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ. ಜೊತೆಗೆ ಹಿಂದಿನ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರಿವರ್ಸಿಂಗ್ ಕ್ಯಾಮೆರಾದಂತಹ ಮೂಲಭೂತ ತಂತ್ರಜ್ಞಾನದೊಂದಿಗೆ ಬರುತ್ತದೆ.

More from DriveSpark

Article Published On: Friday, February 23, 2024, 11:44 [IST]
English summary
Renault kwid vs dacia spring ev design features engine comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+