ಹೋಂಡಾ ಸಿಟಿಯ ಸದ್ದಡಗಿಸಲು ಸ್ಕೋಡಾ ಮಾಸ್ಟರ್ ಪ್ಲಾನ್: ಈ ಕಾರಿನ ಫೇಸ್‌ಲಿಫ್ಟ್ ಬಂದರೆ ಹಿಡಿಯುವವರೇ ಇಲ್ಲ!
ಭಾರತದಲ್ಲಿ ಪ್ರೀಮಿಯಂ ಸೆಡಾನ್ ಕಾರುಗಳು ಬೇಕು ಎನ್ನುವವರಿಗೆ ಕೆಲವೇ ಕೆಲವು ಆಯ್ಕೆಗಳಿದೆ ಅಷ್ಟೇ. ಲಕ್ಷುರಿ ಸೆಡಾನ್‌ಗಳನ್ನು ನೋಡುವುದಾದರೆ ಸಾಕಷ್ಟು ಆಯ್ಕೆಗಳಿದ್ದರೂ, ಮಧ್ಯಮ ವರ್ಗದವರಿಗೆ ಸೆಡಾನ್ ಖರೀದಿಸಬೇಕು ಎಂದುಕೊಂಡಾಗ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಫೋಕ್ಸ್‌ವಾಗನ್ ವರ್ಟಿಸ್, ಸ್ಕೋಡಾ ಸ್ಲಾವಿಯಾ ರೀತಿಯಲ್ಲಿನ ಕೆಲವು ಕಾರು ಮಾದರಿಗಳಷ್ಟೇ ಲಭ್ಯವಿದೆ. ಎಸ್‌ಯುವಿ ಕಾರು ಮಾದರಿಗಳು ಈ ಸೆಗ್ಮೆಂಟ್‌ನಲ್ಲಿ ಸಾಕಷ್ಟಿದೆ ಎನ್ನಬಹುದು. ಈ ಕಾರಣಕ್ಕಾಗಿಯೇ ಸೆಡಾನ್ ಕೊಂಚ ಹಿಂದೆ ಉಳಿದಿದೆ ಎಂದರೆ ತಪ್ಪಾಗಲಾರುದು. ಈ ಮೇಲೆ ತಿಳಿಸದ ಕಾರುಗಳಲ್ಲಿ ಸ್ಲಾವಿಯಾಗೆ ಅಭಿಮಾನಿಗಳು ಕೊಂಚ ಜಾಸ್ತಿ.
ಹೌದು, ಜರ್ಮನ್ ಮೂಲದ ಕಾರು ತಯಾರಿಕಾ ಕಂಪನಿಯಾದ ಸ್ಕೋಡಾ, ಭಾರತದಲ್ಲಿ ಮಾರಾಟ ಮಾಡುವ ಕಡಿಮೆ ಬೆಲೆಯ ಸೆಡಾನ್ ಈ ಸ್ಕೋಡಾ ಸ್ಲಾವಿಯಾ. ಅಗ್ರೆಸಿವ್ ಸ್ಟೈಲಿಂಗ್ ಮತ್ತು ಪರ್ಫಾಮೆನ್ಸ್ ಹೊಂದಿರುವ ಈ ಕಾರು ಪ್ರೀಮಿಯಂ ಸೆಡಾನ್ ಸೆಗ್ಮೆಂಟ್‌ನಲ್ಲಿ ಬಹುತೇಕ ಕಾರು ಪ್ರೀಯರ ಪ್ರಮುಖ ಆಯ್ಕೆಯಾಗಿದೆ.

ಇದೀಗ ಕಂಪನಿ ಈ ಕಾರಿನ ಫೇಸ್‌ಲಿಫ್ಟ್ (Skoda Slavia facelift) ಮಾದರಿಯನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. ಹೊಸ ಫೇಸ್‌ಲಿಫ್ಟ್ ಮಾದರಿಯು ಮುಂದಿನ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದು ಬಂದಿದೆ. ಫೇಸ್‌ಲಿಫ್ಟ್ ಮಾದರಿಯು ಈಗಿರುವ ಸ್ಲಾವಿಯಾಗಿಂತ ಹೆಚ್ಚು ಸ್ಪೋರ್ಟಿಯಾಗಿರಲಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಅತ್ಯಾಧುನಿಕ ಟೆಕ್ನಾಲಜಿಯಾಗಿರುವಂತಹ ಆಡಾಸ್ ಫೀಚರ್ ಸಹ ಇದರಲ್ಲಿ ಇರಲಿದೆ. ಮೆಕಾನಿಕಲ್ ಆಗಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸಹ ನಾವು ಗಮನಿಸಬೇಕು.
ಸದ್ಯಕ್ಕೆ ಭಾರತದಲ್ಲಿರು ಸ್ಕೋಡಾ ಸ್ಲಾವಿಯಾ ಬಗ್ಗೆ ನೋಡುವುದಾದರೆ, ಮೊದಲಿಗೆ ಈ ಕಾರು ಎಕ್ಸ್ ಶೋ ರೂಮ್ ಬೆಲೆ 11,53,400 ಲಕ್ಷ ರೂಗಳಿಗೆ ಸಿಗುತ್ತದೆ. ಇದಕ್ಕೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್ ಸೇರಿ 14,30,276 ಲಕ್ಷ ರೂಗಳಿಗೆ ಬೆಂಗಳೂರಿನಲ್ಲಿ ಸಿಗುತ್ತದೆ. ಇದರಲ್ಲಿ ಆರ್‌ಟಿಒ ಟ್ಯಾಕ್ಸ್ 2,20,349 ಮತ್ತು ಇನ್ಸುರೆನ್ಸ್ 44,393 ರೂಗಳ ರೂಪದಲ್ಲಿ ಸೇರಿಕೊಂಡಿದೆ.

ಸ್ಕೋಡಾ ಸ್ಲಾವಿಯಾ (Skoda Slavia) ಸ್ಟೈಲ್ ಎಡಿಷನ್ ಮಾದರಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 PS ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಫೀಡ್ DSG ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ರವಾನಿಸುತ್ತದೆ.
ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೊರ್ನಾಡೋ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸೆಡಾನ್ ಡ್ಯುಯಲ್ ಡ್ಯಾಶ್ ಕ್ಯಾಮೆರಾ, ಸ್ಲಾವಿಯಾ ಸ್ಕಫ್ ಪ್ಲೇಟ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕಾರಿನಲ್ಲಿ Apple CarPlay ಮತ್ತು Android Auto ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಆಂಕರೇಜ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವು ಫೀಚರ್ಸ್ ಗಳನ್ನು ಹೊಂದಿವೆ. ಸ್ಲಾವಿಯಾ 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಅನ್ನು ಪಡೆದುಕೊಂಡಿದೆ, ಇದು ಮಾರಾಟದಲ್ಲಿರುವ ಭಾರತದಲ್ಲಿ ತಯಾರಿಸಿದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.
ಸ್ಟ್ಯಾಂಡರ್ಡ್ ಸ್ಕೋಡಾ ಸ್ಲಾವಿಯಾ 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








